AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿ ಜನಪ್ರಿಯತೆ ನೋಡಿ ಉಗ್ರಂ ಮಂಜು ಶಾಕ್; ಕೊಟ್ಟ ಪ್ರತಿಕ್ರಿಯೆ ಏನು

ಬಿಗ್ ಬಾಸ್ ಕನ್ನಡ 12ಕ್ಕೆ ಅತಿಥಿಯಾಗಿ ಬಂದ ಉಗ್ರಂ ಮಂಜು, ಗಿಲ್ಲಿ ಜೊತೆ ಮಾತಿನ ಚಕಮಕಿ ನಡೆಸಿದರು. ಹೊರಬಂದ ಬಳಿಕ ಗಿಲ್ಲಿ ಅಪಾರ ಕ್ರೇಜ್ ಬಗ್ಗೆ ಮಂಜು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 11 ಸೀಸನ್​ಗಳಲ್ಲಿ ಗಿಲ್ಲಿಯಷ್ಟು ದೊಡ್ಡ ಅಭಿಮಾನಿ ಬಳಗವನ್ನು ನೋಡಿಲ್ಲ. ಮನೆಯೊಳಗಿನ ಘರ್ಷಣೆಗಳು ಪರಿಸ್ಥಿತಿಯ ಸೃಷ್ಟಿ, ಯಾರೂ ಕೆಟ್ಟವರಲ್ಲ ಎಂದಿದ್ದಾರೆ.

ಗಿಲ್ಲಿ ಜನಪ್ರಿಯತೆ ನೋಡಿ ಉಗ್ರಂ ಮಂಜು ಶಾಕ್; ಕೊಟ್ಟ ಪ್ರತಿಕ್ರಿಯೆ ಏನು
ಗಿಲ್ಲಿ-ಮಂಜು
ರಾಜೇಶ್ ದುಗ್ಗುಮನೆ
|

Updated on: Dec 08, 2025 | 12:21 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಉಗ್ರಂ ಮಂಜು ಅವರು ಅತಿಥಿಯಾಗಿ ತೆರಳಿದ್ದರು. ಈ ವೇಳೆ ಸಾಕಷ್ಟು ಕಿರಿಕ್​ಗಳನ್ನು ಅವರು ಮಾಡಿಕೊಂಡರು. ಮಂಜು ಹಾಗೂ ಗಿಲ್ಲಿ ಮಧ್ಯೆ ಮಾತಿನ ಫೈಟ್ ನಡೆಯಿತು. ಇದರಿಂದ ಅವರು ಗಿಲ್ಲಿ ಅಭಿಮಾನಿಗಳ ದ್ವೇಷ ಕಟ್ಟಿಕೊಂಡರು. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಗಿಲ್ಲಿ ಕ್ರೇಜ್ ಬಗ್ಗೆ ಅವರು ಮಾತನಾಡಿದ್ದಾರೆ.

ಬಿಗ್ ಬಾಸ್ ರೇಸ್​​ನಲ್ಲಿ ಗಿಲ್ಲಿ ನಟ ಅವರು ಮುಂದಿದ್ದಾರೆ. ಅವರನ್ನು ಹಿಂದಿಕ್ಕೋದು ಅಷ್ಟು ಸುಲಭದಲ್ಲಿ ಇಲ್ಲ. ದೊಡ್ಮನೆಗೆ ಅತಿಥಿಯಾಗಿ ಬಂದಿದ್ದ ಮಂಜು, ರಜತ್ ಮೊದಲಾದವರು ಗಿಲ್ಲಿಯನ್ನೇ ಕೆಣಕುವ ಪ್ರಯತ್ನ ಮಾಡಿದ್ದರು. ಆ ಬಳಿಕ ಮಂಜು ಅವರ ಸೋಶಿಯಲ್ ಮೀಡಿಯಾ ಖಾತೆಗೆ ಹಾಕೋ ಪೋಸ್ಟ್​​ಗೆ ಗಿಲ್ಲಿ ನಟನ ಅಭಿಮಾನಿಗಳು ಕಮೆಂಟ್ ಮಾಡೋಕೆ ಆರಂಭಿಸಿದರು. ಇದು ಗಿಲ್ಲಿ ಕ್ರೇಜ್ ತೋರಿಸುತ್ತದೆ. ಈ ಎಲ್ಲ ವಿಷಯಗಳ ಬಗ್ಗೆ ಮಂಜು ಮಾತನಾಡಿದ್ದಾರೆ.

ಊಟ ಕಿತ್ಕೊಳೋಕೆ ಬಂದಿದ್ದೀರಾ, ಎರಡನೇ ಮದುವೆಯೋ ಅಥವಾ ಮೂರನೇ ಮದುವೆಯೋ ಎಂಬ ಮಾತುಗಳನ್ನು ಗಿಲ್ಲಿ ನಟ ಅವರು ಮಂಜುಗೆ ಹೇಳಿದ್ದರು. ಈ ರೀತಿಯ ಮಾತುಗಳು ಮಂಜುಗೆ ಬೇಸರ ಮೂಡಿಸಿತ್ತು. ಈ ಕಾರಣದಿಂದಲೇ ಅವರು ಸಿಟ್ಟಾಗಬೇಕಾಯಿತು. ಹೊರಗೆ ಬಂದ ಬಳಿಕ ಅವರು ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಮತ್ತೆ ಬಿಗ್ ಬಾಸ್ ಮನೆಯಲ್ಲಿ ಕಳಪೆ ಪಟ್ಟ ಪಡೆದ ಗಿಲ್ಲಿ ನಟ: ಎಡವಿದ್ದು ಎಲ್ಲಿ?

‘11 ಸೀಸನ್​ಗಳಲ್ಲಿ ಗಿಲ್ಲಿಯಷ್ಟು ಕ್ರೇಜ್​ನ ನಾನು ನೋಡೇ ಇಲ್ಲ’ ಎಂದು ಮಂಜು ಅವರು ಹೇಳಿದ್ದಾರೆ. ‘ಆಚೆ ಇದ್ದಾಗ ಗಿಲ್ಲಿನ ತುಂಬಾನೇ ಇಷ್ಟಬಂದಿದ್ದೆ.24 ಗಂಟೆ ಇದ್ದಾಗ ತುಂಬಾನೇ ಕಷ್ಟ ಆಗುತ್ತಿತ್ತು. ಬಿಗ್ ಬಾಸ್ ಮನೆಯಲ್ಲಿ ಯಾರೂ ಕೆಟ್ಟವರು ಒಳ್ಳೆಯವರು ಅನ್ನೋದು ಇಲ್ಲ, ಪರಿಸ್ಥಿತಿ ಹಾಗೆ ಮಾಡಿಸುತ್ತದೆ’ ಎಂಬ ಅಭಿಪ್ರಾಯ ಅವರದ್ದು. ಗಿಲ್ಲಿ ನಟ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರಿಗೆ ಸಾಕಷ್ಟು ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಈಗಾಗಲೇ ಬಿಗ್ ಬಾಸ್ 70 ದಿನಗಳನ್ನು ಪೂರೈಸಿದ್ದು, ಒಂದೂವರೆ ತಿಂಗಳಿಗೆ ಬಿಗ್ ಬಾಸ್​ ಅಲ್ಲಿ ಫಿನಾಲೆ ನಡೆಯೋ ಸಾಧ್ಯತೆ ಇದೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.