ಬಿಗ್ ಬಾಸ್ ಗೆದ್ದ ಗೌರವ್ಗೆ ದೊಡ್ಮನೆಯಲ್ಲಿ ಕೋಟಿ ಕೋಟಿ ಸಂಭಾವನೆ
ಗೌರವ್ ಖನ್ನಾ 'ಬಿಗ್ ಬಾಸ್ 19' ವಿಜೇತರಾಗಿದ್ದಾರೆ. ಟ್ರೋಫಿ ಜೊತೆಗೆ 50 ಲಕ್ಷ ರೂ. ಬಹುಮಾನ ಪಡೆದರು. ಮನೆಯಲ್ಲಿದ್ದ 14 ವಾರಗಳಲ್ಲಿ ಗೌರವ್ ಪ್ರತಿ ವಾರ ಅತಿ ಹೆಚ್ಚು ಸಂಭಾವನೆ ಪಡೆದು, ಒಟ್ಟು 2.45 ಕೋಟಿ ರೂ. ಗಳಿಸಿದ್ದಾರೆ. ಅವರ ಒಟ್ಟು ಆಸ್ತಿ 15-18 ಕೋಟಿ ರೂ. ಎನ್ನಲಾಗಿದೆ. ಅವರ ಶಾಂತ ಸ್ವಭಾವವೇ ಈ ಗೆಲುವಿಗೆ ಕಾರಣವಾಯಿತು.

ಪ್ರಸಿದ್ಧ ಕಿರುತೆರೆ ನಟ ಗೌರವ್ ಖನ್ನಾ ‘ಬಿಗ್ ಬಾಸ್ 19’ (Bigg Boss 19) ಪ್ರಶಸ್ತಿಯನ್ನು ಗೆದ್ದಿದ್ದಾರೆ. ಗೌರವ್ ಜೊತೆಗೆ, ಫರ್ಹಾನಾ ಭಟ್, ಪ್ರಣಿತ್ ಮೋರ್, ಅಮಲ್ ಮಲಿಕ್ ಮತ್ತು ತಾನ್ಯಾ ಮಿತ್ತಲ್ ಟಾಪ್ 5ರಲ್ಲಿ ಸ್ಥಾನ ಪಡೆದರು. ಕೊನೆಯ ಹತ್ತು ನಿಮಿಷಗಳಲ್ಲಿ ಗೌರವ್ ಗರಿಷ್ಠ ಮತಗಳನ್ನು ಪಡೆದು ವಿನ್ ಆದರು. ಗೌರವ್ ಖನ್ನಾ ಬಿಗ್ ಬಾಸ್ ಟ್ರೋಫಿಯ ಜೊತೆಗೆ ಭಾರಿ ಮೊತ್ತದ ಬಹುಮಾನವನ್ನು ಪಡೆದಿದ್ದಾರೆ. ಅದರೊಂದಿಗೆ, ಅವರು ಹದಿನಾಲ್ಕು ವಾರಗಳಲ್ಲಿ ಬಹಳಷ್ಟು ಸಂಪಾದಿಸಿದ್ದಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ.
ಬಿಗ್ ಬಾಸ್ ರೇಸ್ನಲ್ಲಿ ಕೊನೆಯಲ್ಲಿ ಫರ್ಹಾನಾ ಹಾಗೂ ಗೌರವ್ ಇದ್ದರು. ಫರ್ಹಾನಾ ಹಾಗೂ ಗೌರವ್ ಕೊನೆಯಲ್ಲಿ ಸಲ್ಲು ಪಕ್ಕಾ ನಿಂತಾಗಲೇ ಎಲ್ಲರಿಗೂ ಗೆಲ್ಲೋದು ಗೌರವ್ ಅನ್ನೋದು ಪಕ್ಕಾ ಆಗಿತ್ತು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ಬರುತ್ತಿದೆ.
ವಿಜೇತರಾಗಿ ಹೊರಹೊಮ್ಮಿದ ಗೌರವ್, ಬಿಗ್ ಬಾಸ್ 19 ಟ್ರೋಫಿ ಮತ್ತು 50 ಲಕ್ಷ ರೂಪಾಯಿಗಳ ಚೆಕ್ ಅನ್ನು ಬಹುಮಾನವಾಗಿ ಪಡೆದರು. ಅವರು ಬಿಗ್ ಬಾಸ್ ಮನೆಯಲ್ಲಿದ್ದ 14 ವಾರಗಳಲ್ಲಿ ಸಾಕಷ್ಟು ಹಣವನ್ನು ಗಳಿಸಿದ್ದಾರೆ. ಪ್ರತಿ ವಾರವೂ ಅವರು ಇತರರಿಗೆ ಹೋಲಿಸಿದರೆ ಅತ್ಯಧಿಕ ಸಂಭಾವನೆಯನ್ನು ಪಡೆಯುತ್ತಿದ್ದರು.
ಜಿಕೆ ಎಂದೇ ಜನಪ್ರಿಯರಾಗಿರುವ ಗೌರವ್ ಅಭಿಮಾನಿಗಳಲ್ಲಿ ಅತ್ಯಂತ ಜನಪ್ರಿಯರು. ಆರಂಭದಿಂದಲೂ ಅವರು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಗೌರವ್ ವಾರಕ್ಕೆ ಸುಮಾರು 17.5 ಲಕ್ಷ ರೂ. ಶುಲ್ಕ ಪಡೆಯುತ್ತಿದ್ದರು. ಅಂದರೆ, ಅವರು ಹದಿನಾಲ್ಕು ವಾರಗಳಲ್ಲಿ 2.45 ಕೋಟಿ ರೂ. ಗಳಿಸಿದ್ದಾರೆ. ಇದು ಬಹುಮಾನ ಮೊತ್ತಕ್ಕಿಂತಲೂ ಹೆಚ್ಚು.
‘ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಗೌರವ್ ಅವರ ಒಟ್ಟು ಆಸ್ತಿ 15 ರಿಂದ 18 ಕೋಟಿ ರೂ.ಗಳ ನಡುವೆ ಇದೆಯಂತೆ. ಗೌರವ್ ಬಿಗ್ ಬಾಸ್ ಮನೆಯಲ್ಲಿ ಕೂಗಾಡಲೇ ಇಲ್ಲ. ಅವರು ಶಾಂತವಾಗಿ ಇರುತ್ತಿದ್ದರು. ಇದರಿಂದ ಕಪ್ ಸಿಕ್ಕಿದೆ.
ಇದನ್ನೂ ಓದಿ: ಬಿಗ್ ಬಾಸ್ ಹಿಂದ ಸೀಸನ್ 19ರ ವಿನ್ನರ್ ಆದ ಕಿರುತೆರೆ ನಟ ಇದಕ್ಕೂ ಮೊದಲು ಗೌರವ್ ‘ಸೆಲೆಬ್ರಿಟಿ ಮಾಸ್ಟರ್ ಚೆಫ್ ಇಂಡಿಯಾ’ ಪ್ರಶಸ್ತಿಯನ್ನು ಗೆದ್ದಿದ್ದರು. ‘ಅನುಪಮಾ’ ಸರಣಿಯಲ್ಲಿ ಅನುಜ್ ಪಾತ್ರದಿಂದ ಜನಪ್ರಿಯತೆ ಪಡೆದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



