ಉತ್ತರ ಕರ್ನಾಟಕದಿಂದ ಬಂದಿರುವ ಗೋಲ್ಡ್ ಸುರೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ನೇರವಾದ ಮಾತುಗಳಿಂದ ಹೈಲೈಟ್ ಆಗಿದ್ದಾರೆ. ಅಕ್ಟೋಬರ್ 3ರ ಸಂಚಿಕೆಯಲ್ಲಿ ಗೋಲ್ಡ್ ಸುರೇಶ್ ಮತ್ತು ಐಶ್ವರ್ಯಾ ನಡುವೆ ಮಾತಿನ ಚಕಮಕಿ ನಡೆದಿದೆ. ‘ನಿಮ್ಮ ನಡತೆ ನನಗೆ ಇಷ್ಟ ಆಗಿಲ್ಲ’ ಎಂದು ಐಶ್ವರ್ಯಾಗೆ ಮುಖಕ್ಕೆ ಹೊಡೆದಂತೆ ಸುರೇಶ್ ಹೇಳಿದ್ದಾರೆ. ಇದರಿಂದ ಐಶ್ವರ್ಯಾ ಅವರಿಗೆ ನೋವಾಗಿದೆ. ಕೂಡಲೇ ಅವರು ಕಣ್ಣೀರು ಸುರಿಸಿದ್ದಾರೆ. ‘ನನಗೆ ಈವರೆಗೂ ಯಾರೂ ಈ ರೀತಿ ಹೇಳಿರಲಿಲ್ಲ’ ಎಂದು ಐಶ್ವರ್ಯಾ ಗಳಗಳನೆ ಅತ್ತಿದ್ದಾರೆ.
‘ಮೊದಲ ದಿನ ನಾನು ನಿಮ್ಮನ್ನು ಅಣ್ಣನ ಥರ ಅಂದುಕೊಂಡಿದ್ದೆ. ಈಗಲೂ ಅಂದುಕೊಂಡಿದ್ದೇನೆ. ಆದರೆ ನೀವು ಕನೆಕ್ಟ್ ಆಗಿಲ್ಲ’ ಎಂದು ಐಶ್ವರ್ಯಾ ಹೇಳಿದರು. ಅದಕ್ಕೆ ಉತ್ತರಿಸಿದ ಸುರೇಶ್ ಅವರು, ‘ಹೌದು ನಾನು ನಿಮ್ಮ ಜೊತೆ ಕನೆಕ್ಟ್ ಆಗಿಲ್ಲ. ನಿಮ್ಮ ನಡತೆ ಸರಿ ಇಲ್ಲ’ ಎಂದು ಹೇಳಿದರು. ಈ ಮಾತುಗಳಿಂದ ಐಶ್ವರ್ಯಾ ಸಿಕ್ಕಾಪಟ್ಟೆ ನೊಂದುಕೊಂಡರು. ಅವರನ್ನು ಸಮಾಧಾನ ಮಾಡಲು ಗೌತಮಿ, ಹಂಸಾ, ಧನರಾಜ್ ಅವರು ಪ್ರಯತ್ನಿಸಿದರು.
ಬಿಗ್ ಬಾಸ್ನಲ್ಲಿ ದಿನಕ್ಕೊಂದು ಡ್ರಾಮಾ ನಡೆಯುತ್ತದೆ. ಇಂದು ಜಗಳ ಆಡಿಕೊಂಡವರು ನಾಳೆ ಒಂದಾಗುತ್ತಾರೆ. ಇಂದು ಪ್ರಾಣ ಸ್ನೇಹಿತರ ರೀತಿ ಇದ್ದವರು ನಾಳೆ ಕಿತ್ತಾಡುತ್ತಾರೆ. ಟಾಸ್ಕ್ ವಿಚಾರ ಬಂದಾಗ, ನಾಮಿನೇಷನ್ ವಿಚಾರ ಬಂದಾಗ ಯಾವ ಸ್ನೇಹದ ಮುಲಾಜು ಕೂಡ ಇರುವುದಿಲ್ಲ. ಹಾಗಾಗಿ ದೊಡ್ಮನೆಯೊಳಗೆ ಕಾಣಿಸುವ ಎಮೋಷನಲ್ ಡ್ರಾಮಾವನ್ನು ವೀಕ್ಷಕರು ಗಂಭೀರವಾಗಿ ಪರಿಗಣಿಸುವಂತಿಲ್ಲ.
ಇದನ್ನೂ ಓದಿ: ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತಾ ತ್ರಿಕೋನ ಪ್ರೇಮ?
‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಲ್ಲಿ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್ ಪರಿಚಯಿಸಲಾಗಿದೆ. 7 ಸ್ಪರ್ಧಿಗಳು ನರಕದಲ್ಲಿ ಇದ್ದಾರೆ. ಇನ್ನುಳಿದ 10 ಸ್ಪರ್ಧಿಗಳಿಗೆ ಸ್ವರ್ಗದಲ್ಲಿ ಜಾಗ ಸಿಕ್ಕಿದೆ. ಸ್ವರ್ಗವಾಸಿಗಳಿಗೆ ಕೆಲವು ಸವಲತ್ತುಗಳು ಇವೆ. ಆದರೆ ನರಕದ ಮಂದಿಗೆ ಕೇವಲ ಬೇಸಿಕ್ ಸೌಕರ್ಯಗಳನ್ನು ನೀಡಲಾಗಿದೆ. ನರಕದಿಂದ ಸ್ವರ್ಗಕ್ಕೆ ಬರಲು 7 ಮಂದಿ ನರಕವಾಸಿಗಳು ಪ್ರಯತ್ನಿಸುತ್ತಿದ್ದಾರೆ. ಮಾನಸಾ, ಶಿಶಿರ್, ಅನುಷಾ, ರಂಜಿತ್, ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಮೋಕ್ಷಿತಾ ಪೈ ಅವರು ನರಕದಲ್ಲಿ ಇದ್ದಾರೆ. ‘ನಾನು ಇದಕ್ಕಿಂತ ದೊಡ್ಡ ನರಕ ನೋಡಿದ್ದೇನೆ’ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ನರಕದಲ್ಲಿ ಇರಲು ಕಷ್ಟವಾಗುತ್ತಿದೆ ಎಂದು ಅನುಷಾ ರೈ ಅತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.