‘ನಾನು ನಿಮ್ಮ ಮನೆಯ ನಾಯಿನಾ?’; ಹಾಸ್ಯ ಕಲಾವಿದರ ಅವಮಾನಿಸಿದ ಜಗದೀಶ್ ವಿರುದ್ಧ ಮಾನಸಾ ಕಿಡಿ

ಜಗದೀಶ್ ಅವರು ನಿರಂತರವಾಗಿ ಹಾಗೂ ಉದ್ದೇಶ ಪೂರ್ವಕವಾಗಿ ಧನರಾಜ್ ಅವರನ್ನು ‘ಕಾಮಿಡಿ ಪೀಸ್ ರೀತಿ ಕಾಣ್ತೀಯಾ’ ಎನ್ನುತ್ತಾ ಬರುತ್ತಿದ್ದಾರೆ. ಇದನ್ನು ಅವರು ಹಲವು ಬಾರಿ ಹೇಳಿದ್ದಾರೆ. ಇದು ಹಾಸ್ಯ ಕಲಾವಿದೆ ಮಾನಸಾ ಅವರನ್ನು ಕುಪಿತಗೊಳಿಸಿದೆ. ಅವರು ಮಾನಸಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

‘ನಾನು ನಿಮ್ಮ ಮನೆಯ ನಾಯಿನಾ?’; ಹಾಸ್ಯ ಕಲಾವಿದರ ಅವಮಾನಿಸಿದ ಜಗದೀಶ್ ವಿರುದ್ಧ ಮಾನಸಾ ಕಿಡಿ
ಮಾನಸಾ-ಜಗದೀಶ್
Follow us
ರಾಜೇಶ್ ದುಗ್ಗುಮನೆ
|

Updated on: Oct 03, 2024 | 7:44 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ ಮನೆಯಲ್ಲಿ ಎಲ್ಲರೂ ಏಕ ಕಾಲಕಕ್ಕೆ ಲಾಯರ್ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರು ನಡೆದುಕೊಳ್ಳುತ್ತಿರುವ ರೀತಿ. ಅವರು ಬೇಕಂತಲೇ ಎಲ್ಲರನ್ನೂ ಕುಪಿತಗೊಳಿಸೋ ಕೆಲಸ ಮಾಡುತ್ತಿದ್ದಾರೆ. ಲಾಯರ್ ಜಗದೀಶ್ ವಿರುದ್ಧ ಮಾನಸಾ ಅವರು ತಿರುಗಿ ಬಿದ್ದಿದ್ದಾರೆ. ಹಾಸ್ಯ ಕಲಾವಿದರನ್ನು ಅವಮಾನಿಸಿದ ಜಗದೀಶ್ ವಿರುದ್ಧ ಅವರು ಸಿಡಿದೆದ್ದಿದ್ದಾರೆ.

ಧನರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿ ಬಿಗ್ ಬಾಸ್ ಮನೆಗೆ ಬಂದವರು. ಅವರು ಹಾಸ್ಯ ವಿಡಿಯೋಗಳನ್ನು ಮಾಡಿಕೊಂಡು ಇದ್ದರು. ಬಿಗ್ ಬಾಸ್ ಮನೆಯಲ್ಲೂ ಅವರು ಎಲ್ಲರನ್ನೂ ನಗಿಸೋ ಕೆಲಸ ಮಾಡುತ್ತಿದ್ದಾರೆ, ಅವರನ್ನು ಹಂಗಿಸೋ ಕೆಲಸವನ್ನು ಜಗದೀಶ್ ಮಾಡಿದ್ದಾರೆ. ಜಗದೀಶ್ ಅವರು ನಿರಂತರವಾಗಿ ಹಾಗೂ ಉದ್ದೇಶ ಪೂರ್ವಕವಾಗಿ ಧನರಾಜ್ ಅವರನ್ನು ‘ಕಾಮಿಡಿ ಪೀಸ್ ರೀತಿ ಕಾಣ್ತೀಯಾ’ ಎನ್ನುತ್ತಾ ಬರುತ್ತಿದ್ದಾರೆ. ಇದನ್ನು ಅವರು ಹಲವು ಬಾರಿ ಹೇಳಿದ್ದಾರೆ.

ಅವರ ಈ ಹೇಳಿಕೆ ಮಾನಸಾ ಅವರನ್ನು ಟ್ರಿಗರ್ ಮಾಡಿದೆ. ಮಾನಸಾ ಹಾಸ್ಯ ಕಲಾವಿದೆ. ಅವರು ‘ಗಿಚ್ಚಿ ಗಿಲಿಗಿಲಿ 3’ನಲ್ಲಿ ಸ್ಪರ್ಧೆ ಮಾಡಿ ಎಲ್ಲರನ್ನೂ ನಗಿಸಿದ್ದರು. ಅವರಿಗೆ ಈ ಮಾತಿನಿಂದ ಅವಮಾನ ಆಗಿದೆ. ಇದಕ್ಕೆ ಅವರು ಸಿಟ್ಟಾಗಿದ್ದಾರೆ. ‘ಹಾಸ್ಯ ಕಲಾವಿದರ ಅವಮಾನಿಸಬೇಡಿ. ಪದೇ ಪದೇ ಕಾಮಿಡಿ ಪೀಸಾ, ಕಾಮಿಡಿ ಪೀಸಾ ಎನ್ನುವ ಮಾತನ್ನು ಹೇಳಬೇಡಿ’ ಎಂದು ಕೋರಿದ್ದಾರೆ. ಆದರೆ, ಜಗದೀಶ್ ಇದನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ನಲ್ಲಿ ಮೂರೇ ದಿನಕ್ಕೆ ಸುಸ್ತಾದ ಧನರಾಜ್; ಕಷ್ಟ ಆಗುತ್ತಿದೆ ಎಂದು ಕಣ್ಣೀರು

ಇದರಿಂದ ಸಿಟ್ಟಾದ ಮಾನಸಾ, ‘ಪದೇ ಪದೇ ಹೇಳಬೇಡಿ. ಕಾಮಿಸಿ ಪೀಸ್​ ಎಂದರೆ ನಿರಪಯೋಗಿ ಅಲ್ಲ. ಸಾವಿರ ಟೆನ್ಷನ್​ ಇದ್ದರೂ ನಗಿಸುತ್ತಾರೆ. ಮರ್ಯಾದೆಗೆ ಕೊಟ್ಟಷ್ಟೂ ಅತಿಯಾಗಿ ಆಡ್ತೀಯಾ’ ಎಂದು ಏಕವಚನದಲ್ಲೇ ಹೇಳಿದರು. ‘ಹೋಗೆಲೇ, ನಿನ್ನ ಯೋಗ್ಯತೆ ನೋಡಿಕೊಂಡು ಮಾತನಾಡು’ ಎಂದರು ಜಗದೀಶ್. ಇದರಿಂದ ಕೋಪಗೊಂಡ ಮಾನಸಾ, ‘ನಾನೇನು ನಿಮ್ಮ ಮನೆಯ ನಾಯಿನಾ? ನೀವು ಹೇಳಿದಂತೆ ಕೇಳಿಕೊಂಡು ಇರೋಕೆ’ ಎಂದರು. ‘ಅವಳು ಯಾವ ಸೀಮೆ ಹೆಂಗಸು’ ಎಂದರು ಜಗದೀಶ್. ಇದರಿಂದ ಇಡೀ ಮನೆ ಒಂದಾಗಿ ಜಗದೀಶ್ ವಿರುದ್ಧ ತಿರುಗಿ ಬಿತ್ತು. ‘ಈ ರೀತಿಯ ವಾತಾವರಣದಲ್ಲಿ ಬದುಕೋಕೆ ಸಾಧ್ಯವೇ ಇಲ್ಲ’ ಎಂದು ಕೆಲವರು ಅಭಿಪ್ರಾಯಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ