‘ನಡತೆ ಸರಿ ಇಲ್ಲ’: ಮುಖಕ್ಕೆ ಹೊಡೆದಂತೆ ಹೇಳಿದ್ದಕ್ಕೆ ಐಶ್ವರ್ಯಾ ಕಣ್ಣೀರ ಧಾರೆ

ಬೇರೆ ಎಲ್ಲರಿಗಿಂತಲೂ ಐಶ್ವರ್ಯಾ ಅವರು ಭಿನ್ನವಾಗಿದ್ದಾರೆ. ಆದರೆ ಅವರ ನಡೆತೆ ಬಗ್ಗೆ ಗೋಲ್ಡ್ ಸುರೇಶ್ ಅವರು ಗಂಭೀರವಾದ ಹೇಳಿಕೆಗಳನ್ನು ನೀಡಿದ್ದಾರೆ. ಈ ಮಾತುಗಳಿಂದ ಐಶ್ವರ್ಯಾ ಅವರಿಗೆ ತುಂಬ ನೋವಾಗಿದೆ. ಹಾಗಾಗಿ ಅವರು ಬಿಗ್​ ಬಾಸ್​ ಮನೆಯಲ್ಲಿ ಅತ್ತಿದ್ದಾರೆ. ಅಷ್ಟಕ್ಕೂ ಇದಕ್ಕೆಲ್ಲ ಕಾರಣ ಆಗಿದ್ದೇನು ಎಂಬ ಬಗ್ಗೆ ಇಲ್ಲಿದೆ ವಿವರ..

‘ನಡತೆ ಸರಿ ಇಲ್ಲ’: ಮುಖಕ್ಕೆ ಹೊಡೆದಂತೆ ಹೇಳಿದ್ದಕ್ಕೆ ಐಶ್ವರ್ಯಾ ಕಣ್ಣೀರ ಧಾರೆ
ಗೋಲ್ಡ್ ಸುರೇಶ್​, ಐಶ್ವರ್ಯಾ
Follow us
ಮದನ್​ ಕುಮಾರ್​
|

Updated on: Oct 03, 2024 | 11:01 PM

ಉತ್ತರ ಕರ್ನಾಟಕದಿಂದ ಬಂದಿರುವ ಗೋಲ್ಡ್ ಸುರೇಶ್​ ಅವರು ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ನೇರವಾದ ಮಾತುಗಳಿಂದ ಹೈಲೈಟ್​ ಆಗಿದ್ದಾರೆ. ಅಕ್ಟೋಬರ್​ 3ರ ಸಂಚಿಕೆಯಲ್ಲಿ ಗೋಲ್ಡ್​ ಸುರೇಶ್​ ಮತ್ತು ಐಶ್ವರ್ಯಾ ನಡುವೆ ಮಾತಿನ ಚಕಮಕಿ ನಡೆದಿದೆ. ‘ನಿಮ್ಮ ನಡತೆ ನನಗೆ ಇಷ್ಟ ಆಗಿಲ್ಲ’ ಎಂದು ಐಶ್ವರ್ಯಾಗೆ ಮುಖಕ್ಕೆ ಹೊಡೆದಂತೆ ಸುರೇಶ್​ ಹೇಳಿದ್ದಾರೆ. ಇದರಿಂದ ಐಶ್ವರ್ಯಾ ಅವರಿಗೆ ನೋವಾಗಿದೆ. ಕೂಡಲೇ ಅವರು ಕಣ್ಣೀರು ಸುರಿಸಿದ್ದಾರೆ. ‘ನನಗೆ ಈವರೆಗೂ ಯಾರೂ ಈ ರೀತಿ ಹೇಳಿರಲಿಲ್ಲ’ ಎಂದು ಐಶ್ವರ್ಯಾ ಗಳಗಳನೆ ಅತ್ತಿದ್ದಾರೆ.

‘ಮೊದಲ ದಿನ ನಾನು ನಿಮ್ಮನ್ನು ಅಣ್ಣನ ಥರ ಅಂದುಕೊಂಡಿದ್ದೆ. ಈಗಲೂ ಅಂದುಕೊಂಡಿದ್ದೇನೆ. ಆದರೆ ನೀವು ಕನೆಕ್ಟ್ ಆಗಿಲ್ಲ’ ಎಂದು ಐಶ್ವರ್ಯಾ ಹೇಳಿದರು. ಅದಕ್ಕೆ ಉತ್ತರಿಸಿದ ಸುರೇಶ್​ ಅವರು, ‘ಹೌದು ನಾನು ನಿಮ್ಮ ಜೊತೆ ಕನೆಕ್ಟ್​ ಆಗಿಲ್ಲ. ನಿಮ್ಮ ನಡತೆ ಸರಿ ಇಲ್ಲ’ ಎಂದು ಹೇಳಿದರು. ಈ ಮಾತುಗಳಿಂದ ಐಶ್ವರ್ಯಾ ಸಿಕ್ಕಾಪಟ್ಟೆ ನೊಂದುಕೊಂಡರು. ಅವರನ್ನು ಸಮಾಧಾನ ಮಾಡಲು ಗೌತಮಿ, ಹಂಸಾ, ಧನರಾಜ್ ಅವರು ಪ್ರಯತ್ನಿಸಿದರು.

ಬಿಗ್​ ಬಾಸ್​ನಲ್ಲಿ ದಿನಕ್ಕೊಂದು ಡ್ರಾಮಾ ನಡೆಯುತ್ತದೆ. ಇಂದು ಜಗಳ ಆಡಿಕೊಂಡವರು ನಾಳೆ ಒಂದಾಗುತ್ತಾರೆ. ಇಂದು ಪ್ರಾಣ ಸ್ನೇಹಿತರ ರೀತಿ ಇದ್ದವರು ನಾಳೆ ಕಿತ್ತಾಡುತ್ತಾರೆ. ಟಾಸ್ಕ್​ ವಿಚಾರ ಬಂದಾಗ, ನಾಮಿನೇಷನ್​ ವಿಚಾರ ಬಂದಾಗ ಯಾವ ಸ್ನೇಹದ ಮುಲಾಜು ಕೂಡ ಇರುವುದಿಲ್ಲ. ಹಾಗಾಗಿ ದೊಡ್ಮನೆಯೊಳಗೆ ಕಾಣಿಸುವ ಎಮೋಷನಲ್​ ಡ್ರಾಮಾವನ್ನು ವೀಕ್ಷಕರು ಗಂಭೀರವಾಗಿ ಪರಿಗಣಿಸುವಂತಿಲ್ಲ.

ಇದನ್ನೂ ಓದಿ: ಐಶ್ವರ್ಯಾ, ಧರ್ಮ, ಅನುಷಾ: ಬಿಗ್​ ಬಾಸ್​ ಮನೆಯಲ್ಲಿ ಶುರುವಾಯ್ತಾ ತ್ರಿಕೋನ ಪ್ರೇಮ?

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್​ ಪರಿಚಯಿಸಲಾಗಿದೆ. 7 ಸ್ಪರ್ಧಿಗಳು ನರಕದಲ್ಲಿ ಇದ್ದಾರೆ. ಇನ್ನುಳಿದ 10 ಸ್ಪರ್ಧಿಗಳಿಗೆ ಸ್ವರ್ಗದಲ್ಲಿ ಜಾಗ ಸಿಕ್ಕಿದೆ. ಸ್ವರ್ಗವಾಸಿಗಳಿಗೆ ಕೆಲವು ಸವಲತ್ತುಗಳು ಇವೆ. ಆದರೆ ನರಕದ ಮಂದಿಗೆ ಕೇವಲ ಬೇಸಿಕ್ ಸೌಕರ್ಯಗಳನ್ನು ನೀಡಲಾಗಿದೆ. ನರಕದಿಂದ ಸ್ವರ್ಗಕ್ಕೆ ಬರಲು 7 ಮಂದಿ ನರಕವಾಸಿಗಳು ಪ್ರಯತ್ನಿಸುತ್ತಿದ್ದಾರೆ. ಮಾನಸಾ, ಶಿಶಿರ್, ಅನುಷಾ, ರಂಜಿತ್​, ಚೈತ್ರಾ ಕುಂದಾಪುರ, ಗೋಲ್ಡ್​ ಸುರೇಶ್, ಮೋಕ್ಷಿತಾ ಪೈ ಅವರು ನರಕದಲ್ಲಿ ಇದ್ದಾರೆ. ‘ನಾನು ಇದಕ್ಕಿಂತ ದೊಡ್ಡ ನರಕ ನೋಡಿದ್ದೇನೆ’ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ನರಕದಲ್ಲಿ ಇರಲು ಕಷ್ಟವಾಗುತ್ತಿದೆ ಎಂದು ಅನುಷಾ ರೈ ಅತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ