‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಎಲ್ಲಾ ಸ್ಪರ್ಧಿಗಳ ಮಧ್ಯೆ ಟಫ್ ಫೈಟ್ ಏರ್ಪಡುತ್ತಿದೆ. ಈಗಾಗಲೇ ನಾಲ್ಕು ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಯಾವ ಸ್ಪರ್ಧಿಗಳು ಹೇಗೆ ಎನ್ನುವ ವಿಚಾರ ವೀಕ್ಷಕರಿಗೆ ಹಾಗೂ ಮನೆಯ ಒಳಗೆ ಇರುವ ಎಲ್ಲರಿಗೂ ಗೊತ್ತಾಗಿದೆ. ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ದೊಡ್ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಮೊದಲ ವಾರ ಜೋರು ಧ್ವನಿಯಲ್ಲಿ ಮಾತನಾಡಿದ್ದ ಅವರು, ಎರಡನೇ ವಾರದಲ್ಲಿ ಡಲ್ ಆದರು. ಈಗ ಅವರು ಮತ್ತೆ ತಮ್ಮ ಪರ್ಫಾರ್ಮೆನ್ಸ್ ತೋರಿಸುತ್ತಿದ್ದಾರೆ. ವಿನಯ್ ವಿರುದ್ಧ ಅವರು ಸಿಡಿದೆದ್ದಿದ್ದಾರೆ. ದೊಡ್ಮನೆಯಲ್ಲಿ ಅವರು ವಿನಯ್ಗಿಂತ ಹೆಚ್ಚು ಹೇಟ್ ಮಾಡುವ ವ್ಯಕ್ತಿ ಒಬ್ಬರಿದ್ದಾರಂತೆ.
ಬಿಗ್ ಬಾಸ್ಗೆ ಬರುವ ಮೊದಲು ವಿನಯ್ ಹಾಗೂ ಸಂಗೀತಾ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರು. ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಇವರು ಶಿವ ಹಾಗೂ ಪಾರ್ವತಿ ಪಾತ್ರ ಮಾಡಿದ್ದರು. ಆದಾಗ್ಯೂ ದೊಡ್ಮನೆಗೆ ಬಂದಾಗ ಇವರ ಮಧ್ಯೆ ಯಾವುದೂ ಸರಿ ಇರಲಿಲ್ಲ. ಇವರು ಕಿತ್ತಾಡಿಕೊಳ್ಳೋಕೆ ಆರಂಭಿಸಿದರು. ವಿನಯ್ ಹಾಗೂ ಸಂಗೀತಾಗಿಂತ ದೊಡ್ಡ ಮಟ್ಟದಲ್ಲಿ ಜಗಳ ಏರ್ಪಟ್ಟಿದೆ. ‘ವಿನಯ್ಗಿಂತ ಸಂತೋಷ್ನ ತುಂಬಾನೇ ಹೇಟ್ ಮಾಡ್ತೀನಿ’ ಎಂದಿದ್ದಾರೆ ಸಂಗೀತಾ.
‘ಸಂತೋಷ್ ನಡೆದುಕೊಳ್ಳುವ ರೀತಿ ಸರಿ ಇಲ್ಲ. ಅವರು ದೊಡ್ಮನೆಯ ಶಕುನಿ. ಲೈಫ್ನಲ್ಲಿ ನಾನು ಯಾರನ್ನಾದರೂ ಮತ್ತೆ ಭೇಟಿ ಮಾಡೋಕೆ ಇಷ್ಟಾನೇ ಪಡಲ್ಲ ಎಂದರೆ ಅದು ಸಂತೋಷ್’ ಎಂದರು ಸಂಗೀತಾ. ಇದಕ್ಕೆ ಕಾರ್ತಿಕ್ ಕೂಡ ಹೌದು ಎಂದರು. ಸಂತೋಷ್ ಅವರು ನಡೆದುಕೊಳ್ಳುತ್ತಿರುವ ರೀತಿ ಇದಕ್ಕೆ ಕಾರಣ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ವಿನಯ್ಗೆ ಹೊಸ ಹೆಸರು ಕೊಟ್ಟ ಕಿಚ್ಚ ಸುದೀಪ್
ತುಕಾಲಿ ಸಂತೋಷ್ ಅವರು ದೊಡ್ಮನೆಯಲ್ಲಿ ನಿಜಕ್ಕೂ ಶಕುನಿ ಆಗಿದ್ದಾರೆ. ಅವರು ಕಾಮಿಡಿ ಮಾಡುವ ನೆಪದಲ್ಲಿ ಅನೇಕರಿಗೆ ಬೇಸರ ಮಾಡಿದ್ದಾರೆ. ಅವರಿಂದ ಮನರಂಜನೆ ಸಿಗುತ್ತಿಲ್ಲ. ಅವರು ನಿರಂತರವಾಗಿ ಡ್ರೋನ್ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಡ್ರೋನ್ ಪ್ರತಾಪ್ ಅಭಿಮಾನಿಗಳು ಸಂತೋಷ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:40 am, Sat, 4 November 23