‘ಕಮಲಿ’ ಧಾರಾವಾಹಿ (Kamali Serial) ಮೂಲಕ ಸಾಕಷ್ಟು ಖ್ಯಾತಿ ಪಡೆದ ನಟಿ ಅಮೂಲ್ಯ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಈಗ ಬಿಗ್ ಬಾಸ್ನಲ್ಲಿ ಅವರು ಯಾವ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
‘ಎಲ್ಲರೂ ನನ್ನ ಗುರುತಿಸಬೇಕು ಎಂಬ ಆಸೆ ಇತ್ತು. ನಾನು ಆಂಟಿ ಮನೆಯಲ್ಲಿದ್ದೇನೆ. ನನ್ನ ಫ್ಯಾಮಿಲಿ ಮೈಸೂರಿನಲ್ಲಿದೆ. ನಾನು ಯೋಚನೆ ಮಾಡಿಯೇ ಮಾತನಾಡೋದು. ಓಲ್ಡ್ಸ್ಕೂಲ್ ಟೈಪ್ ಎಂದರೆ ಇಷ್ಟ. ರಿಲೇಶನ್ಶಿಪ್ನಲ್ಲಿ ಲಾಯಲ್ಟಿ ಬೇಕು. ನನಗೆ ಟ್ರಾವೆಲಿಂಗ್ ಮಾಡಬೇಕು ಎಂಬ ಆಸೆ ಇದೆ. ಇವಳು ಮಾಡರ್ನ್ ಅಂತ ಎಲ್ಲರೂ ನಿರ್ಧಾರ ಮಾಡಿ ಬಿಡುತ್ತಿದ್ದರು. ಆದರೆ, ಕಮಲಿ ಧಾರಾವಾಹಿ ಬಳಿಕ ಅದು ಬದಲಾಯ್ತು’ ಎಂದಿದ್ದಾರೆ ಅಮೂಲ್ಯ ಗೌಡ.
ಬಾಯ್ಫ್ರೆಂಡ್ ಬಗ್ಗೆಯೂ ಅಮೂಲ್ಯ ಗೌಡ ಮತನಾಡಿದ್ದಾರೆ. ‘ಸ್ಕೂಲ್ನಲ್ಲಿ ಬಾಯ್ಫ್ರೆಂಡ್ ಇರಲಿಲ್ಲ. ಕಾಲೇಜ್ನಲ್ಲಿ ಬಾಯ್ಫ್ರೆಂಡ್ ಇದ್ದ. ಈಗ ಇಲ್ಲ’ ಎಂದರು ಅಮೂಲ್ಯ ಗೌಡ. ಇದನ್ನು ಕೇಳಿ ಅವರ ಕುಟುಂಬದವರು ಅಚ್ಚರಿ ಹೊರಹಾಕಿದರು. ಅವರಿಗೆ ಆ ವಿಚಾರ ಗೊತ್ತಿಲ್ಲ ಎಂಬ ಮಾತನ್ನು ಅಮೂಲ್ಯ ಹೇಳಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂದ 19 ವರ್ಷದ ಸೈಕ್ ನವಾಜ್; ಅವರ ವಿಶೇಷತೆಗಳೇನು?
2018ರಲ್ಲಿ ‘ಕಮಲಿ’ ಧಾರಾವಾಹಿ ಪ್ರಸಾರ ಆರಂಭಿಸಿತು. ಈ ಧಾರಾವಾಹಿ ಬರೋಬ್ಬರಿ 1091 ಸಂಚಿಕೆ ಪ್ರಸಾರ ಕಂಡಿದೆ. ಅಮೂಲ್ಯ ಅವರು ಕಮಲಿ ಆಗಿ ಮಿಂಚಿದ್ದರು. ಈ ಧಾರಾವಾಹಿಯಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ರಾಮ್ಜಿ ಅವರು ಇದನ್ನು ನಿರ್ದೇಶನ ಮಾಡಿದ್ದರು.
Published On - 8:54 pm, Sat, 24 September 22