ಟಿಆರ್ಪಿ ವಿಚಾರದಲ್ಲಿ ಪ್ರತಿ ವಾರ ಸ್ಥಾನಗಳಲ್ಲಿ ಬದಲಾವಣೆ ಆಗುತ್ತಲೇ ಇರುತ್ತವೆ. ಒಂದು ಧಾರಾವಾಹಿ ಮೇಲೆ ಬಂದರೆ ಮತ್ತೊಂದು ಧಾರಾವಾಹಿ ಕೆಳಗೆ ಹೋಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಟಾಪ್ 3 ಧಾರಾವಾಹಿಗಳಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ. ‘ಪುಟ್ಟಕ್ಕನ ಮಕ್ಕಳು’ (Puttakkana Makkalu) ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಈ ವಾರದ ಟಾಪ್ ಐದು ಧಾರಾವಾಹಿಗಳ ಪೈಕಿ ಜೀ ಕನ್ನಡದ ಧಾರಾವಾಹಿಗಳೇ ಇವೆ. ಹಾಗಾದರೆ ಉಳಿದ ಧಾರಾವಾಹಿಗಳ ಕಥೆ ಏನು? ಆ ಬಗ್ಗೆ ಇಲ್ಲಿದೆ ವಿವರ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇತ್ತೀಚೆಗೆ ಪ್ರೇಕ್ಷಕರನ್ನು ಸಾಕಷ್ಟು ಸೆಳೆದುಕೊಳ್ಳುತ್ತಿದೆ. ಈ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಉಮಾಶ್ರೀ ನಟನೆ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಕಳೆದ ಹಲವು ವಾರಗಳಿಂದ ಈ ಧಾರಾವಾಹಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ ಅನ್ನೋದು ವಿಶೇಷ. ಈ ಧಾರಾವಾಹಿ ಈಗಾಗಲೇ 400ಕ್ಕೂ ಅಧಿಕ ಎಪಿಸೋಡ್ ಪೂರ್ಣಗೊಳಿಸಿದೆ.
‘ಗಟ್ಟಿಮೇಳ’ ಧಾರಾವಾಹಿಯ ಟಿಆರ್ಪಿ ಕೂಡ ಸಖತ್ ಆಗಿದೆ. ಈ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ. ಇದನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ. ಸಾವಿರಕ್ಕೂ ಅಧಿಕ ಎಪಿಸೋಡ್ಗಳನ್ನು ಪೂರ್ಣಗೊಳಿಸಿರುವ ಧಾರಾವಾಹಿ ನಾಗಾಲೋಟ ಮುಂದುವರಿದೆ.
ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಧಾರಾವಾಹಿ ಇತ್ತೀಚೆಗೆ ಆರಂಭಗೊಂಡಿದೆ. ಈ ಧಾರಾವಾಹಿ ಟಿಆರ್ಪಿ ರೇಸ್ನಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಧಾರಾವಾಹಿ ರಿಚ್ ಆಗಿ ಮೂಡಿ ಬರುತ್ತಿದೆ. ಈ ಕಾರಣಕ್ಕೂ ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನೇ ಕಾಯ್ದುಕೊಂಡು ಹೋಗುವ ಚಾಲೆಂಜ್ ಈ ಧಾರಾವಾಹಿಗೆ ಇದೆ.
ಪತಿಯನ್ನು ಕಳೆದುಕೊಂಡ ಮಹಿಳೆ ಹಾಗೂ ಪತ್ನಿಯನ್ನು ಕಳೆದುಕೊಂಡ ಪುರುಷ. ಇವರಿಬ್ಬರಿಗೂ ಮಕ್ಕಳಿದ್ದಾರೆ. ಅವರು ದೊಡ್ಡವರಾಗಿದ್ದಾರೆ. ಹೀಗಿರುವಾಗ ಈ ಪುರುಷ ಹಾಗೂ ಮಹಿಳೆ ಮಧ್ಯೆ ಪ್ರಿತಿ ಮೂಡಿದರೆ ಏನಾಗುತ್ತದೆ? ಈ ಕಥೆಯನ್ನು ‘ಶ್ರೀರಸ್ತು ಶುಭಮಸ್ತು’ ಹೊಂದಿದೆ. ಈ ಧಾರಾವಾಹಿ ಟಿಆರ್ಪಿ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಹೊಸ ಪ್ರೋಮೋ ಹಂಚಿಕೊಂಡು ‘ಸೀತಾ ರಾಮ’ ಧಾರಾವಾಹಿಯ ಪ್ರಸಾರ ಸಮಯ ತಿಳಿಸಿದ ಜೀ ಕನ್ನಡ
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಸತ್ಯ’ ಧಾರಾವಾಹಿ ಐದನೇ ಸ್ಥಾನದಲ್ಲಿದೆ. ಈ ಧಾರಾವಾಹಿ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಆರನೇ ಸ್ಥಾನದಲ್ಲಿ ‘ಉಧೋ ಉಧೋ ಶ್ರೀ ರೇಣುಕಾ ಯೆಲ್ಲಮ್ಮ’, ಏಳನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’, ಎಂಟನೇ ಸ್ಥಾನದಲ್ಲಿ ನೀನಾದೆನಾ, ಒಂಭತ್ತನೇ ಸ್ಥಾನದಲ್ಲಿ ‘ನಮ್ಮ ಲಚ್ಚಿ’ ಹಾಗೂ ಹತ್ತನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಇದೆ.
‘ಸೀತಾ ರಾಮ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್ ನಟಿಸಿದ್ದಾರೆ. ಈ ಧಾರಾವಾಹಿ ಮುಂದಿನ ವಾರ ಟಿಆರ್ಪಿ ರೇಸ್ಗೆ ಎಂಟ್ರಿ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Thu, 20 July 23