‘ಸೀತಾ ರಾಮ’ ಧಾರಾವಾಹಿ ಆರಂಭಕ್ಕೂ ಮೊದಲು ಸಖತ್ ಕ್ಯೂಟ್ ಲುಕ್ನಲ್ಲಿ ಮಿಂಚಿದ ವೈಷ್ಣವಿ ಗೌಡ
ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಅವರು ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
Updated on:Jul 17, 2023 | 9:02 AM

ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಹಾಗೂ ರೀತು ಸಿಂಗ್ ನಟನೆಯ ‘ಸೀತಾ ರಾಮ’ ಧಾರಾವಾಹಿ ಇಂದು (ಜುಲೈ 17) ಆರಂಭ ಆಗುತ್ತಿದೆ. ಹಲವು ತಿಂಗಳಿಂದ ಈ ಧಾರಾವಾಹಿಗಾಗಿ ಅಭಿಮಾನಿಗಳು ಕಾದಿದ್ದರು.

ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಅವರು ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಈಗ ವೈಷ್ಣವಿ ಅವರು ಸಖತ್ ಕ್ಯೂಟ್ ಲುಕ್ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.

ವೈಷ್ಣವಿ ಗೌಡ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕಿರುತೆರೆ ವೀಕ್ಷಕರು ಅವರನ್ನು ಇಷ್ಟಪಡುತ್ತಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಸ್ಪರ್ಧಿಸಿ ಅವರು ಗಮನ ಸೆಳೆದಿದ್ದರು.

ವೈಷ್ಣವಿ ಗೌಡ ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಈಗ ‘ಸೀತಾ ರಾಮ’ ಧಾರಾವಾಹಿ ಅವರ ವೃತ್ತಿ ಜೀವನದ ಮೈಲೇಜ್ ಹೆಚ್ಚಿಸಲಿದೆ.

ವೈಷ್ಣವಿ ಗೌಡ ಅವರು ಸಖತ್ ಕ್ಯೂಟ್ ಆಗಿದ್ದಾರೆ. ಈ ಕಾರಣಕ್ಕೂ ಅವರು ಅಭಿಮಾನಿಗಳಿಗೆ ಹೆಚ್ಚು ಇಷ್ಟ ಆಗುತ್ತಾರೆ.

ವೈಷ್ಣವಿ ಗೌಡ ಅವರ ಕ್ಯೂಟ್ ಫೋಟೋಗಳು.
Published On - 8:59 am, Mon, 17 July 23

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



