ಟಿಆರ್​ಪಿ ರೇಸ್​ನಲ್ಲಿ ಬದಲಾಯಿತು ಹವಾಮಾನ; ಕಲರ್ಸ್ ಧಾರಾವಾಹಿಗಳ ಪಾರುಪತ್ಯ

|

Updated on: Sep 26, 2024 | 2:15 PM

ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಸುಷ್ಮಾ ರಾವ್, ಸುದರ್ಶನ್​, ಸುಷ್ಮಾ ನಾಣಯ್ಯ ಮೊದಲಾದವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವೀಕ್ಷಕರಿಗೆ ಈ ಧಾರಾವಾಹಿಯ ಕಥೆ ಇಷ್ಟ ಆಗಿದೆ.

ಟಿಆರ್​ಪಿ ರೇಸ್​ನಲ್ಲಿ ಬದಲಾಯಿತು ಹವಾಮಾನ; ಕಲರ್ಸ್ ಧಾರಾವಾಹಿಗಳ ಪಾರುಪತ್ಯ
ಟಿಆರ್​ಪಿ ರೇಸ್​ನಲ್ಲಿ ಬದಲಾಯಿತು ಹವಾಮಾನ; ಕಲರ್ಸ್ ಧಾರಾವಾಹಿಗಳ ಪಾರುಪತ್ಯ
Follow us on

ಟಿಆರ್​ಪಿ ರೇಸ್​ ವಿಚಾರ ಬಂದಾಗ ಟಾಪ್​ ಐದರಲ್ಲಿ ಇರುವ ಧಾರಾವಾಹಿಗಳೆಲ್ಲವೂ ಬಹುತೇಕವು ಜೀ ಕನ್ನಡ ಧಾರಾವಾಹಿಗಳೇ ಆಗಿರುತ್ತಿದ್ದವು. ಆದರೆ, ಈಗ ಹವಾಮಾನ ಬದಲಾಗುತ್ತಿದೆ. ಜೀ ಕನ್ನಡದ ಧಾರಾವಾಹಿಗಳ ಜೊತೆ ಕಲರ್ಸ್ ಕನ್ನಡದ ಧಾರಾವಾಹಿಗಳು ರೇಸ್​ಗೆ ಇಳಿದಿವೆ. ಟಾಪ್​ ಐದರಲ್ಲಿ ಸ್ಥಾನ ಪಡೆದುಕೊಳ್ಳುತ್ತಿವೆ. ಈ ವಾರದಿಂದ ಬಿಗ್ ಬಾಸ್ ಕೂಡ ಆರಂಭ ಆಗುತ್ತಿದ್ದು, ಕಲರ್ಸ್ ಕನ್ನಡಕ್ಕೆ ಒಳ್ಳೆಯ ಟಿಆರ್​ಪಿ ನಿರೀಕ್ಷೆ ಮಾಡಲಾಗುತ್ತಿದೆ.

‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್ ಜನ ಮೆಚ್ಚುಗೆ ಪಡೆದಿದೆ. ಕಳೆದ ಕೆಲ ವಾರಗಳಿಂದ ಈ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.

ಮೂರನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಇದೆ. ಈ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದೆ. ಈ ಧಾರಾವಾಹಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಟಿಆರ್​ಪಿ ವಿಚಾರದಲ್ಲಿ ‘ಭಾಗ್ಯಲಕ್ಷ್ಮೀ’ ಹಾಗೂ ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿಯ ಮಧ್ಯೆ ಕೂದಲೆಳೆಯ ಅಂತರ ಇದೆ.

ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಹಾಗೂ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಇದೆ. ‘ಅಮೃತಧಾರೆ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದರೆ, ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಕಲರ್ಸ್​​ನಲ್ಲಿ ಪ್ರಸಾರ ಕಾಣುತ್ತಿದೆ. ನಾಲ್ಕನೇ ಸ್ಥಾನದಲ್ಲಿ ‘ರಾಮಾಚಾರಿ’ ಧಾರಾವಾಹಿ ಇದೆ. ಈ ಮೂಲಕ ಈ ವಾರ ಟಾಪ್ ಐದರಲ್ಲಿ ಕಲರ್ಸ್​ನ ಮೂರು ಧಾರಾವಾಹಿಗಳು ಇವೆ.

ಇದನ್ನೂ ಓದಿ: ಭರ್ಜರಿ ಟಿಆರ್​ಪಿ ಪಡೆದ ‘ಭಾಗ್ಯಲಕ್ಷ್ಮೀ’; ಬಿಗ್ ಬಾಸ್ ಟಿಆರ್​ಪಿ ಎಷ್ಟು?

ಐದನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಹಾಗೂ ‘ಅಣ್ಣಯ್ಯ’ ಧಾರಾವಾಹಿ ಇದೆ. ಸಮಯ ಬದಲಾದ ಹೊರತಾಗಿಯೂ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಟಿಆರ್​ಪಿ ವಿಚಾರದಲ್ಲಿ ಸಾಕಷ್ಟು ಬದಲಾವಣೆ ನಿರೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.