ಪ್ರತಿ ಗುರುವಾರ ಸಿರಿಯಲ್ ಟಿಆರ್ಪಿ (Serial TRP) ಪಟ್ಟಿ ಬಿಡುಗಡೆ ಆಗುತ್ತದೆ. ಈ ವಾರ ಟಾಪ್ನಲ್ಲಿದ್ದ ಧಾರಾವಾಹಿಗಳು ಮುಂದಿನ ವಾರವೂ ಟಾಪ್ನಲ್ಲಿ ಬರುತ್ತವೆ ಎನ್ನುವ ಯಾವುದೇ ಗ್ಯಾರಂಟಿ ಇಲ್ಲ. ಪ್ರತಿ ವಾರ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಆದರೆ, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಹಲವು ತಿಂಗಳಿಂದ ಮೊದಲ ಸ್ಥಾನದಲ್ಲಿ ಮುಂದೆ ಸಾಗುತ್ತಿದೆ. ಹಾಗಾದರೆ, ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ? ‘ಅಮೃತಧಾರೆ’ ಧಾರಾವಾಹಿಯ ಮದುವೆ ಎಪಿಸೋಡ್ ಸಹಕಾರಿ ಆಯಿತೇ? ಆ ಬಗ್ಗೆ 36ನೇ ವಾರದ ಡೇಟಾದಲ್ಲಿದೆ ಮಾಹಿತಿ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮಂಡ್ಯ ಭಾಷೆಯ ಸೊಗಡಿನಲ್ಲಿ ಮೂಡಿ ಬರುತ್ತಿರುವ ಧಾರಾವಾಹಿ. ಈ ಧಾರಾವಾಹಿ ಹಳ್ಳಿಯ ಮಂದಿಯನ್ನು ಸಾಕಷ್ಟು ಆಕರ್ಷಿಸಿದೆ. ಉಮಾಶ್ರೀ ಅವರ ನಟನೆಗೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಸಂಜನಾ, ಮಂಜು ಭಾಷಿಣಿ ಮೊದಲಾದವರು ನಟಿಸಿದ್ದಾರೆ.
‘ಸೀತಾ ರಾಮ’ ಧಾರಾವಾಹಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಧಾರಾವಾಹಿಯಲ್ಲಿ ಬಾಲಕಿ ರೀತು ಸಿಂಗ್ ನಟನೆ ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲ, ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ಅಶೋಕ್, ಮುಖ್ಯಮಂತ್ರಿ ಚಂದ್ರು, ಪೂಜಾ ಲೋಕೇಶ್ ಮಾಗಿದ ನಟನೆ ತೋರುತ್ತಿದ್ದಾರೆ. ಈ ಧಾರಾವಾಹಿ ಟಿಆರ್ಪಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಅಮೃತಧಾರೆ ಧಾರಾವಾಹಿ ಕಳೆದ ಬಾರಿ ಐದನೇ ಸ್ಥಾನಕ್ಕೆ ಹೋಗಿತ್ತು. ಆದರೆ, ಈ ಬಾರಿ ಟಿಆರ್ಪಿಯಲ್ಲಿ ಏರಿಕೆ ಕಂಡಿದೆ. ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಮದುವೆ ಎಪಿಸೋಡ್ ಹೈಲೈಟ್ ಆಗಿದೆ. ಈ ಕಾರಣಕ್ಕೆ ಧಾರಾವಾಹಿಯ ಟಿಆರ್ಪಿ ಹೆಚ್ಚಿದೆ.
ಇದನ್ನೂ ಓದಿ: ಹೊಸ ಸಿನಿಮಾ ಘೋಷಿಸಿದ ‘ಗಟ್ಟಿಮೇಳ’ ರಕ್ಷ್; ‘ಜೆಮ್ಸ್’ ಖ್ಯಾತಿಯ ಚೇತನ್ ನಿರ್ದೇಶನದಲ್ಲಿ ‘ಬರ್ಮ’
‘ಗಟ್ಟಿಮೇಳ’ ಧಾರಾವಾಹಿಯ ಟಿಆರ್ಪಿ ಕಡಿಮೆ ಆಗುತ್ತಿಲ್ಲ. ಈ ಧಾರಾವಾಹಿಯಲ್ಲಿ ಎಲ್ಲರೂ ಉತ್ತಮ ನಟನೆ ತೋರುತ್ತಿದ್ದಾರೆ. ಧಾರಾವಾಹಿ ಸಾವಿರಾರು ಎಪಿಸೋಡ್ ಪೂರ್ಣಗೊಳಿಸಿದೆ. ಈ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿ ಇದೆ.
‘ಸತ್ಯ’ ಧಾರಾವಾಹಿ ಕೂಡ ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಐದನೇ ಸ್ಥಾನದಲ್ಲಿದೆ. ಆರನೇ ಸ್ಥಾನದಲ್ಲಿರುವ ‘ಶ್ರೀರಸ್ತು ಶುಭಮಸ್ತು’ ಹಾಗೂ ‘ಸತ್ಯ’ ಧಾರಾವಾಹಿ ಮಧ್ಯೆ ಭರ್ಜರಿ ಸ್ಪರ್ಧೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:11 pm, Thu, 14 September 23