ಕುಗ್ಗಿತು ‘ಪುಟ್ಟಕ್ಕನ ಮಕ್ಕಳು’ ಟಿಆರ್​ಪಿ; ಹೊಸ ಧಾರಾವಾಹಿಗಳ ಕಥೆ ಏನು?

|

Updated on: Aug 30, 2024 | 2:10 PM

ಮೊದಲ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಕಳೆದ ಬಾರಿ ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇರುತ್ತಿತ್ತು. ಈಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್​ಪಿಯಲ್ಲಿ ಕುಸಿತ ಕಂಡಿರುವುದರಿಂದ ಮೊದಲ ಸ್ಥಾನ ‘ಲಕ್ಷ್ಮೀ ನಿವಾಸ’ದ ಪಾಲಾಗಿದೆ. ಈ ಧಾರಾವಾಹಿ ಮುಂದಿನ ಕೆಲ ವಾರ ಮೊದಲ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

ಕುಗ್ಗಿತು ‘ಪುಟ್ಟಕ್ಕನ ಮಕ್ಕಳು’ ಟಿಆರ್​ಪಿ; ಹೊಸ ಧಾರಾವಾಹಿಗಳ ಕಥೆ ಏನು?
ಧಾರಾವಾಹಿ ಟಿಆರ್​ಪಿ
Follow us on

ಧಾರಾವಾಹಿಗಳ ಟಿಆರ್​ಪಿ ರೇಸ್​ನಲ್ಲಿ ‘ಪುಟ್ಟಕ್ಕನ ಮಕ್ಕಳು’ ಕಳೆದ ಒಂದು ವರ್ಷದಿಂದ ಬಹುತೇಕ ಸಂದರ್ಭಗಳಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡು ಬರುತ್ತಾ ಇತ್ತು. ಪ್ರೈಮ್​ ಟೈಮ್​ನಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಾ ಇತ್ತು. ಆದರೆ, ಈಗ ಹಾಗಿಲ್ಲ. ಧಾರಾವಾಹಿಯ ಟೈಮಿಂಗ್ ಬದಲಾಗಿದೆ. ಈ ಕಾರಣಕ್ಕೆ ಟಿಆರ್​ಪಿಯಲ್ಲಿ ತೀವ್ರ ಇಳಿಕೆ ಆಗಿದೆ. ‘ರಾಮಾಚಾರಿ’ ಟಿಆರ್​ಪಿ ಹೆಚ್ಚಾಗಿದೆ.

ಮೊದಲ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಎಲ್ಲಕ್ಕಿಂತ ಹೆಚ್ಚಿನ ಟಿಆರ್​ಪಿ ಪಡೆದುಕೊಂಡಿದೆ. ಈ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಎರಡನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ಇತ್ತೀಚೆಗಷ್ಟೇ ಈ ಧಾರಾವಾಹಿ ಪ್ರಸಾರ ಕಾಣಲು ಆರಂಭಿಸಿದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಸಮಯವನ್ನು ಈ ಧಾರಾವಾಹಿಗೆ ನೀಡಲಾಗಿದೆ. ಈ ಕಾರಣದಿಂದಲೂ ಈ ಧಾರಾವಾಹಿಗೆ ಟಿಆರ್​ಪಿ ಸಿಗುತ್ತಿದೆ. ಈ ಧಾರಾವಾಹಿ ಜೊತೆ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಕೂಡ ಇದೆ.

ಮೂರನೇ ಸ್ಥಾನದಲ್ಲಿ ‘ರಾಮಾಚಾರಿ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಭರ್ಜರಿ ಟಿಆರ್​ಪಿ ಸಿಕ್ಕಿದೆ. ರಾಮಾಚಾರಿ ಹಾಗೂ ಚಾರು ಮದುವೆ ಕಾರಣಕ್ಕೆ ಧಾರಾವಾಹಿಯ ಟಿಆರ್​ಪಿ ಸಿಕ್ಕಿದೆ. ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈ ಧಾರಾವಾಹಿಯಲ್ಲಿ ಸೀತಾ ಹಾಗೂ ರಾಮನ ಮದುವೆ ನಡೆದಿದೆ. ಈ ಧಾರಾವಾಹಿಯಲ್ಲಿ ಫ್ಯಾಮಿಲಿ ಡ್ರಾಮಾ ನಡೆಯುತ್ತಿದೆ. ಹೀಗಾಗಿ, ಟಿಆರ್​ಪಿ ಹೆಚ್ಚಿದೆ. ಐದನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಇದೆ.

ಇದನ್ನೂ ಓದಿ: ಟಿಆರ್​ಪಿ ರೇಸ್​ನಿಂದ ‘ಪುಟ್ಟಕ್ಕ’ ಔಟ್; ಹೊಸ ಧಾರಾವಾಹಿ ‘ಅಣ್ಣಯ್ಯ’ಗೆ ಭರ್ಜರಿ ರೇಟಿಂಗ್

ಪ್ರತಿ ಬಾರಿ ಜೀ ಕನ್ನಡದ ಧಾರಾವಾಹಿಗಳು ಟಾಪ್​ ಐದರಲ್ಲಿ ಇರುತ್ತಿದ್ದವು. ಆದರೆ, ಈ ಬಾರಿ ಕಲರ್ಸ್ ಕನ್ನಡದ ಎರಡು ಧಾರಾವಾಹಿಗಳು ಸ್ಥಾನ ಪಡೆದಿವೆ ಅನ್ನೋದು ವಿಶೇಷ. ಹೊಸ ಧಾರಾವಾಹಿಗಳಾದ ‘ನಿನಗಾಗಿ’, ‘ಶ್ರೀಗೌರಿ’ ಸಾಧಾರಣ ಟಿಆರ್​ಪಿ ಪಡೆಯುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.