ಕನ್ನಡ ಧಾರಾವಾಹಿಗಳ ಟಿಆರ್​ಪಿ ಪಟ್ಟಿ ರಿಲೀಸ್; ಇಲ್ಲಿದೆ ಟಾಪ್ ಐದು ಸೀರಿಯಲ್​ಗಳು

Kannada Serial TRP: ಜೀ ಕನ್ನಡದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಪ್ರಸಾರ ಆರಂಭಿಸಿದೆ. ಇದೊಂದು ಪಕ್ಕಾ ಮಧ್ಯಮ ವರ್ಗದ ಕೂಡು ಕುಟುಂಬದ ಕಥೆ. ಹೀಗಾಗಿ ಧಾರಾವಾಹಿ ವೀಕ್ಷಕರಿಗೆ ಇಷ್ಟವಾಗಿದೆ. ಈ ಧಾರಾವಾಹಿ ನಗರ ಹಾಗೂ ರಾಜ್ಯದ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದು ಮುನ್ನುಗ್ಗುತ್ತಿದೆ. ಉಳಿದ ಧಾರಾವಾಹಿಗಳ ಸ್ಥಾನಗಳ ಬಗ್ಗೆ ಇಲ್ಲಿದೆ ವಿವರ.

ಕನ್ನಡ ಧಾರಾವಾಹಿಗಳ ಟಿಆರ್​ಪಿ ಪಟ್ಟಿ ರಿಲೀಸ್; ಇಲ್ಲಿದೆ ಟಾಪ್ ಐದು ಸೀರಿಯಲ್​ಗಳು
ಲಕ್ಷ್ಮಿ ನಿವಾಸ ಧಾರಾವಾಹಿ

Updated on: Mar 01, 2024 | 12:27 PM

ಕನ್ನಡ ಧಾರಾವಾಹಿಗಳ ಟಿಆರ್​ಪಿ ರೇಸ್​ನಲ್ಲಿ ಪ್ರತಿ ವಾರ ಬದಲಾವಣೆ ಆಗುತ್ತಲೇ ಇರುತ್ತದೆ. ಆಯಾ ವಾರಗಳಲ್ಲಿ ಯಾವ ರೀತಿಯಲ್ಲಿ ಕಥೆ ಸಾಗುತ್ತದೆ ಎನ್ನುವುದರ ಮೇಲೆ ಟಿಆರ್​ಪಿ ನಿರ್ಧಾರ ಆಗುತ್ತದೆ. ಈಗ ಎಂಟನೇ ವಾರದ ಟಿಆರ್​ಪಿ ಲಿಸ್ಟ್ ರಿಲೀಸ್ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ (BBk 10) ಪೂರ್ಣಗೊಂಡ ಬಳಿಕ ಕಲರ್ಸ್ ಕನ್ನಡದಲ್ಲಿ ಕೆಲವು ಧಾರಾವಾಹಿಗಳು ಪ್ರಾರಂಭ ಆದವು. ಅವುಗಳಿಗೆ ಟಾಪ್ ಐದರಲ್ಲಿ ಸ್ಥಾನ ಪಡೆಯಲು ಅವು ವಿಫಲವಾಗಿವೆ.

ಲಕ್ಷ್ಮೀ ನಿವಾಸ

ಜೀ ಕನ್ನಡದಲ್ಲಿ ಇತ್ತೀಚೆಗೆ ಪ್ರಸಾರ ಆರಂಭಿಸಿದ ‘ಲಕ್ಷ್ಮೀ ನಿವಾಸ’ ಪಕ್ಕಾ ಮಧ್ಯಮ ವರ್ಗದ ಕೂಡು ಕುಟುಂಬದ ಕಥೆ. ಈ ಕಾರಣಕ್ಕೆ ಧಾರಾವಾಹಿ ವೀಕ್ಷಕರಿಗೆ ಇಷ್ಟವಾಗಿದೆ. ಈ ಧಾರಾವಾಹಿ ನಗರ ಹಾಗೂ ರಾಜ್ಯದ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದು ಮುನ್ನುಗ್ಗುತ್ತಿದೆ.

ಪುಟ್ಟಕ್ಕನ ಮಕ್ಕಳು

‘ಲಕ್ಷ್ಮೀ ನಿವಾಸ’ ಧಾರಾವಾಹಿ ಆರಂಭಕ್ಕೂ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಕಾಯ್ದುಕೊಂಡು ಬಂದಿತ್ತು. ಈಗ ಧಾರಾವಾಹಿಗೆ ಎರಡನೇ ಸ್ಥಾನ ಸಿಕ್ಕಿದೆ. ಈ ಮೊದಲು ಎರಡಂಕಿ ಟಿಆರ್​ಪಿ ಪಡೆಯುತ್ತಿತ್ತು ಈ ಧಾರಾವಾಹಿ. ಇತ್ತೀಚೆಗೆ ಟಿಆರ್​ಪಿ ಕಡಿಮೆ ಆಗಿದೆ.

ಶ್ರೀರಸ್ತು ಶುಭಮಸ್ತು

ಸುಧಾರಾಣಿ ಮೊದಲಾದವರು ನಟಿಸಿರೋ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಜನ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿ ಮೂರನೇ ಸ್ಥಾನದಲ್ಲಿ ಇದೆ. ಒಂದು ಪ್ರಬುದ್ಧ ಪ್ರೇಮಕಥೆಯನ್ನು ಧಾರಾವಾಹಿ ಹೊಂದಿದೆ.

ಸೀತಾ ರಾಮ

ಈ ಮೊದಲ ‘ಬಿಗ್ ಬಾಸ್’ ರಾತ್ರಿ 9:30ಕ್ಕೆ ಪ್ರಸಾರ ಕಾಣುತ್ತಿತ್ತು. ಇದೇ ಸಮಯದಲ್ಲಿ ಜೀ ಕನ್ನಡದಲ್ಲಿ ‘ಸೀರಾ ರಾಮ’ ಪ್ರಸಾರ ಕಾಣುತ್ತಿದೆ. ಈ ಕಾರಣಕ್ಕೆ ಧಾರಾವಾಹಿಯ ಟಿಆರ್​ಪಿ ಇಳಿಕೆ ಕಂಡಿತ್ತು. ಈಗ ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಧಾರಾವಾಹಿ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಈ ಧಾರಾವಾಹಿಗೆ ನಾಲ್ಕನೇ ಸ್ಥಾನ ಸಿಕ್ಕಿದೆ.

ಇದನ್ನೂ ಓದಿ: ಬಿಕಿನಿಯಲ್ಲಿ ‘ಅಮೃತಧಾರೆ’ ಸೀರಿಯಲ್​​​ ನಟಿ ಸಾರಾ ಅಣ್ಣಯ್ಯ

 ಅಮೃತಧಾರೆ

‘ಅಮೃತಧಾರೆ’ ಧಾರಾವಾಹಿ ಸಾಕಷ್ಟು ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಕಾಂಬಿನೇಷನ್ ಜನರಿಗೆ ಇಷ್ಟ ಆಗಿದೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಐದನೇ ಸ್ಥಾನದಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us