BBK 10: ‘ಬಿಗ್ ಬಾಸ್ ಕನ್ನಡ’ ಫಿನಾಲೆಗೆ ಸಿಕ್ಕ ಟಿಆರ್​ಪಿ ಎಷ್ಟು? ಇಲ್ಲಿದೆ ಸಂಪೂರ್ಣ

Kannada Serials TRP: ಫಿನಾಲೆ ವೀಕ್​​ನ ಶನಿವಾರದ ಎಪಿಸೋಡ್​ನಲ್ಲಿ ಆರು ಮಂದಿಯಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲಾಯಿತು. ಈ ಎಪಿಸೋಡ್​ನಲ್ಲಿ ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಕೂಡ ಇದ್ದವು. ಈ ಎಪಿಸೋಡ್​ಗೆ 10.3 ಟಿವಿಆರ್ ಸಿಕ್ಕಿದೆ. ಭಾನುವಾರ 12.6 ಟಿಆರ್​ಪಿ ಸಿಕ್ಕಿದೆ. ಎರಡೂ ದಿನಗಳ ಟಿಆರ್​ಪಿ ಸರಾಸರಿ ತೆಗೆದಾಗ 11.4 ಟಿವಿಆರ್ ಆಗಲಿದೆ.

BBK 10: ‘ಬಿಗ್ ಬಾಸ್ ಕನ್ನಡ’ ಫಿನಾಲೆಗೆ ಸಿಕ್ಕ ಟಿಆರ್​ಪಿ ಎಷ್ಟು? ಇಲ್ಲಿದೆ ಸಂಪೂರ್ಣ
ಸುದೀಪ್
Follow us
|

Updated on: Feb 09, 2024 | 11:26 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಪೂರ್ಣಗೊಂಡು ಕೆಲವು ವಾರ ಕಳೆದರೂ ಇನ್ನೂ ಆ ಬಗ್ಗೆ ಶುರುವಾಗಿರೋ ಚರ್ಚೆ ನಿಂತಿಲ್ಲ. ಈ ರಿಯಾಲಿಟಿ ಶೋ ಫಿನಾಲೆ ಸಂದರ್ಭದಲ್ಲಿ ಭರ್ಜರಿ ಟಿಆರ್​ಪಿ ಪಡೆದುಕೊಂಡಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಇದು ಅತಿ ಹೆಚ್ಚು ಟಿಆರ್​ಪಿ ಸಿಕ್ಕ ಫಿನಾಲೆ ಎನ್ನಲಾಗಿದೆ. ಶನಿವಾರ (ಜನವರಿ 27) ಹಾಗೂ ಭಾನುವಾರ (ಜನವರಿ 28) ಎರಡೂ ದಿನ ಉತ್ತಮ ಟಿಆರ್​ಪಿ ಸಿಕ್ಕಿದೆ. ಈ ಬಾರಿಯ ಶೋಗೆ ಅಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತ್ತು. ಆ ಬಗ್ಗೆ ಇಲ್ಲಿದೆ ವಿವರ.

ಜನವರಿ 27ರ ಎಪಿಸೋಡ್​ನಲ್ಲಿ ಆರು ಮಂದಿಯಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲಾಯಿತು. ಈ ಎಪಿಸೋಡ್​ನಲ್ಲಿ ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಇದ್ದವು. ಶನಿವಾರದ ಎಪಿಸೋಡ್​ಗೆ 10.3 ಟಿವಿಆರ್ ಸಿಕ್ಕಿದೆ. ಭಾನುವಾರ 12.6 ಟಿವಿಆರ್ ಸಿಕ್ಕಿದೆ. ಎರಡೂ ದಿನಗಳ ಟಿಆರ್​ಪಿ ಸರಾಸರಿ ತೆಗೆದಾಗ 11.4 ಟಿವಿಆರ್ ಆಗಲಿದೆ. ಈ ಮೂಲಕ ಒಳ್ಳೆಯ ಟಿಆರ್​ಪಿಯೊಂದಿಗೆ ಬಿಗ್ ಬಾಸ್ ಕೊನೆಗೊಂಡಂತೆ ಆಗಿದೆ.

ನಗರ ಭಾಗದ ಟಿಆರ್​ಪಿ ಪರಿಗಣಿಸಿದರೆ ಮೊದಲ ಸ್ಥಾನದಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಹೊಸ ಧಾರಾವಾಹಿ ‘ಲಕ್ಷ್ಮಿ ನಿವಾಸ’ ಇದೆ. ಇದು ಧಾರಾವಾಹಿ ತಂಡದ ಖುಷಿ ಹೆಚ್ಚಿಸಿದೆ. ಎರಡನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಸಂಪೂರ್ಣ ಕರ್ನಾಟಕ ಪರಿಗಣಿಸಿದರೆ ಈ ಧಾರಾವಾಹಿಗೆ ಮೊದಲ ಸ್ಥಾನ ಹಾಗೂ ‘ಲಕ್ಷ್ಮಿ ನಿವಾಸ’ ಎರಡನೇ ಸ್ಥಾನ ಸಿಕ್ಕಿದೆ.

ಇದನ್ನೂ ಓದಿ: ಸಿನಿಮಾ ಮಾಡ್ತಾರೆ ವರ್ತೂರು ಸಂತೋಷ್; ಸೂಚನೆ ಕೊಟ್ಟ ಬಿಗ್ ಬಾಸ್ ಸ್ಪರ್ಧಿ

‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಕೂಡ ಸಮಾನ ಟಿಆರ್​ಪಿ ಪಡೆದು ಎರಡನೇ ಸ್ಥಾನದಲ್ಲಿ ಇದೆ. ಸುಧಾರಾಣಿ ಅವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ‘ಸೀತಾ ರಾಮ’ ಧಾರಾವಾಹಿ ಪ್ರಸಾರ ಸಂದರ್ಭದಲ್ಲೇ ‘ಬಿಗ್ ಬಾಸ್’ ಪ್ರಸಾರ ಕಾಣುತ್ತಿತ್ತು. ಈ ಕಾರಣಕ್ಕೆ ‘ಸಿತಾ ರಾಮ’ ಧಾರಾವಾಹಿಗೆ ಟಿಆರ್​ಪಿ ಕಡಿಮೆ ಆಗಿತ್ತು. ಈಗ ವೀಕ್ಷಕರು ಮರಳಿದ್ದಾರೆ. ಈ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ‘ಸತ್ಯ’ ಧಾರಾವಾಹಿಗೆ ನಾಲ್ಕನೇ ಸ್ಥಾನ ಹಾಗೂ ‘ಭಾಗ್ಯಲಕ್ಷ್ಮಿ’ ಧಾರಾವಾಹಿಗೆ ಐದನೇ ಸ್ಥಾನ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ