ಬಿಗ್ ಬಾಸ್ ವಿನ್ನರ್ ಕಾರ್ತಿಕ್ಗೆ ಇರೋ ಕ್ರೇಜ್ ಎಂಥದ್ದು? ಈ ವಿಡಿಯೋನೆ ಸಾಕ್ಷಿ
ಕಾರ್ತಿಕ್ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದಾರೆ. ಅವರು ಬರುತ್ತಿದ್ದಂತೆ ಫ್ಯಾನ್ಸ್ ಮುತ್ತಿಕೊಂಡರು. ಕಾರಲ್ಲಿ ಅವರು ಬಿಗ್ ಬಾಸ್ ಕಪ್ ಕೂಡ ತೆಗೆದುಕೊಂಡು ಬಂದಿದ್ದರು. ಆ ಕಪ್ನ ಎತ್ತಿ ಜನರ ಕಡೆ ಪ್ರದರ್ಶಿಸಿದ್ದಾರೆ. ಕೆಲವರು ಆ ಕಪ್ನ ಮುಟ್ಟುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
‘ಬಿಗ್ ಬಾಸ್’ (Bigg Boss) ಮನೆ ಒಳಗೆ ಹೋಗಿ ಹೈಲೈಟ್ ಆದರೆ ಅವರಿಗೆ ಸಿಗೋ ಜನಪ್ರಿಯತೆ ತುಂಬಾನೇ ದೊಡ್ಡದು. ಯಾರೂ ಊಹಿಸಿಕೊಳ್ಳದ ರೀತಿಯಲ್ಲಿ ಅಭಿಮಾನಿ ಬಳಗ ಸೃಷ್ಟಿ ಆಗುತ್ತದೆ. ಕಾರ್ತಿಕ್ ಮಹೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ವಿನ್ ಆದ ಬಳಿಕ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಅವರ ಬಗ್ಗೆ ಇರೋ ಕ್ರೇಜ್ ಸದ್ಯಕ್ಕಂತೂ ಕಡಿಮೆ ಆಗುವಂಥದ್ದಲ್ಲ. ಇದಕ್ಕೆ ಹೊಸ ವಿಡಿಯೋ ಸಾಕ್ಷಿ ಸಿಕ್ಕಿದೆ. ಇದನ್ನು ಕಾರ್ತಿಕ್ ಅವರೇ ಶೇರ್ ಮಾಡಿಕೊಂಡಿದ್ದಾರೆ.
ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡಿ ಗಮನ ಸೆಳೆದರು. ಅವರು 2.92 ಕೋಟಿ ವೋಟ್ ಪಡೆದು ವಿನ್ನರ್ ಆದರು. ಅವರ ಇನ್ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಈಗ ಅವರ ಇನ್ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ ಐದು ಲಕ್ಷ ಸಮೀಪಿಸಿದೆ. ಅವರು ಇತ್ತೀಚೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದ ವಿಡಿಯೋನ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾರ್ತಿಕ್ ಮಾಡಿರೋ ಟ್ವೀಟ್..
View this post on Instagram
ಚಾಮುಂಡಿ ಬೆಟ್ಟಕ್ಕೆ ಕಾರಿನಲ್ಲಿ ಆಗಮಿಸಿದ್ದಾರೆ ಕಾರ್ತಿಕ್. ಅವರು ಆಗಮಿಸುತ್ತಿದ್ದಂತೆ ಜನರು ಮುತ್ತಿಕೊಂಡರು. ಕಾರಲ್ಲಿ ಅವರು ಬಿಗ್ ಬಾಸ್ ಕಪ್ ಕೂಡ ತೆಗೆದುಕೊಂಡು ಬಂದಿದ್ದರು. ಆ ಕಪ್ನ ಎತ್ತಿ ಜನರ ಕಡೆ ತೋರಿಸಿದ್ದಾರೆ. ಕೆಲವರು ಆ ಕಪ್ನ ಮುಟ್ಟುವ ಪ್ರಯತ್ನ ಮಾಡಿದ್ದಾರೆ. ನಂತರ ಅವರು ದೇವರ ದರ್ಶನ ಪಡೆದು ಹಿಂದಿರುಗಿದ್ದಾರೆ. ಆಗಲೂ ಜನರು ಮುತ್ತಿಕೊಂಡಿದ್ದಾರೆ. ಅಭಿಮಾನಿಗಳ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಕಾರ್ತಿಕ್ನ ಅಪ್ಪಿ ಅಭಿನಂದನೆ ತಿಳಿಸಿದ ಶ್ರೀಮುರಳಿ
‘ಕಾರ್ತಿಕ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ತಾಯಿಯ ಕೃಪೆ ಮತ್ತು ಅಭಿಮಾನಿ ದೇವರುಗಳ ಕೃಪೆ ಪಡೆದ ಸಂತಸದ ಕ್ಷಣ’ ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ. ಕಾರ್ತಿಕ್ ಅವರು ಕಿರುತೆರೆ ಹಾಗೂ ಹಿರಿತೆರೆ ಮೂಲಕ ಫೇಮಸ್ ಆದವರು. ಅವರು ರಾಷ್ಟ್ರ ಪ್ರಶಸ್ತಿ ವಿಜೇತ ‘ಡೊಳ್ಳು’ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಬಿಗ್ ಬಾಸ್ ವಿನ್ ಆದ ಬಳಿಕ ಹಲವು ಆಫರ್ಗಳು ಅವರನ್ನು ಹುಡುಕಿ ಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ