ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗುವ ಲಕ್ಷಣ ಧಾರವಾಹಿಯು ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಡೆವಿಲ್ ಹೆಂಗಸಿನಿಂದ ಚಂದ್ರಶೇಖರ್ ಪ್ರಾಣಕ್ಕೆ ಇನ್ನೂ ಏನಾದರೂ ತೊಂದರೆಯಾಗಬಹುದೆಂದು ನಕ್ಷತ್ರ ಸ್ವತಃ ನಾವೇ ಅಪ್ಪ ಅಮ್ಮನನ್ನು ಮನೆಗೆ ಬಿಟ್ಟು ಬರುವ ಎಂದು ಹೇಳುತ್ತಾಳೆ. ಮನಸ್ಸಿಲ್ಲದಿದ್ದರೂ ಭೂಪತಿ ನಕ್ಷತ್ರಳ ಮಾತಿಗೆ ಒಪ್ಪಿಗೆ ಕೊಡುತ್ತಾನೆ. ಬನಶಂಕರಿಯಿಂದ ಮನೆಗೆ ತೆರಳುತ್ತಾರೆ. ಮನೆಗೆ ತಲುಪಿದ ತಕ್ಷಣ ಏನೂ ಗೊತ್ತಿಲ್ಲದವರ ಹಾಗೆ ಭಾರ್ಗವಿ ಬಾಗಿಲು ತೆರೆಯುತ್ತಾಳೆ.
ಚಂದ್ರಶೇಖರ್ ಮುಖದಲ್ಲಿನ ಭಯ ಕಂಡು ಮನದಲ್ಲೇ ಸಂತೋಷ ಪಡುತ್ತಾಳೆ. ಒಳಗೆ ಬಂದವರೇ ಅಣ್ಣ ಏನಾಯಿತು, ಯಾಕಿಷ್ಟು ಭಯ ಪಡುತ್ತೀಯಾ ಎಂದು ಕೇಳುತ್ತಾಳೆ. ಆಗ ಸಿ.ಎಸ್ ಆ ಹೆಂಗಸಿಗೆ ನನ್ನ ಮೇಲೆ ಯಾಕಿಷ್ಟು ದ್ವೇಷ ಎಂದು ಗೊತ್ತಿಲ್ಲ, ಇವತ್ತು ನಡೆದ ಘಟನೆಯಿಂದ ನಡುಕ ಉಂಟಾಗಿದೆ. ಕಣ್ಣೆದುರು ಯಾರದ್ದೋ ಕಾರಣಕ್ಕೆ ಯಾವುದೋ ಜೀವ ಬಲಿಯಾಯಿತಲ್ಲಾ ಎಂದು ದುಃಖ ಪಡುತ್ತಾ ಅದನ್ನು ನೆನೆದರೆ ಈಗಲೂ ಭಯ ಆಗುತ್ತೆ ಎಂದು ಹೇಳುತ್ತಾರೆ.
ಅದೇ ಸಂದರ್ಭಕ್ಕೆ ಅಡುಗೆ ಕೋಣೆಯಲ್ಲಿ ಗ್ಲಾಸ್ ಬಿದ್ದ ಸದ್ದು ಕೇಳುತ್ತದೆ, ಇದರಿಂದ ಚಂದ್ರಶೇಖರ್ ಇನ್ನೂ ಭಯ ಪಡುತ್ತಾರೆ. ಅಣ್ಣನ ಈ ಪರಿಸ್ಥಿತಿಯನ್ನು ಕಂಡು ಭಾರ್ಗವಿಗೆ ತಾನು ಏನೋ ಸಾಧಿಸಿದ ಹಾಗೆ ಭಾವನೆ ಮೂಡಿ ಮನದಲ್ಲೇ ಸಂತೋಷ ಪಡುತ್ತಾಳೆ. ತುಂಬಾ ಡಿಸ್ಟರ್ಬ್ ಆಗಿದ್ದ ಚಂದ್ರಶೇಖರ್ ಮಾತಿನ ಮಧ್ಯೆಯೇ ಎದ್ದು, ಬಾಲ್ಕನಿಗೆ ಹೋಗಿ ಯಾರೊಂದಿಗೋ ಫೋನ್ ಕಾಲ್‌ನಲ್ಲಿ ಮಾತಾಡುತ್ತಾ ನಿಂತಿರುತ್ತಾರೆ. ಅವಾಗ ಪಟಕಿ ಸಿಡಿದ ಸದ್ದು ಕೇಳಿ ಇನ್ನಷ್ಟು ಭಯಗೊಂಡ ಚಂದ್ರಶೇಖರ್ ಅಲ್ಲೇ ಕುಸಿದು ಬೀಳುತ್ತಾರೆ.
ಇದನ್ನು ಓದಿ: ‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
ಭಯದಲ್ಲೇ ಆರತಿ ಆರತಿ ಎಂದು ಜೋರಾಗಿ ಕೂಗುತ್ತಾರೆ. ಆ ತಕ್ಷಣ ಆರತಿ ಮತ್ತು ನಕ್ಷತ್ರ ಬಂದು ಅವರನ್ನು ಒಳಗಡೆ ಕರೆದುಕೊಂಡು ಹೋಗುತ್ತಾರೆ. ಸಿ.ಎಸ್‌ನ ಈ ಪರಿಸ್ಥಿತಿ ಕಂಡು ಪತ್ನಿ ಆರತಿ ಮತ್ತು ಮಗಳು ನಕ್ಷತ್ರಳಿಗೆ ದುಃಖ ಉಂಟಾಗುತ್ತದೆ. ಇವರ ದುಃಖವನ್ನು ಕಂಡ ಸಿ.ಎಸ್ ನನಗೆ ಏನು ಆಗಿಲ್ಲ ಆರತಿ, ನಾನು ಅರಾಮಾಗಿ ಇದ್ದೇನೆ. ಯಾರೋ ಮಕ್ಕಳು ಪಟಾಕಿ ಸಿಡಿಸಿರಬೇಕು, ಅದು ಬಂದು ನಮ್ಮ ಕಾಂಪೋಂಡ್ ಒಳಗೆ ಬಿದ್ದಿದೆ. ಆ ಸದ್ದಿಗೆ ಸ್ವಲ್ಪ ಭಯ ಆಯಿತು ಅಷ್ಟೇ ಎಂದು ಮಗಳು ಮತ್ತು ಪತ್ನಿಗೆ ಸಮಧಾನ ಮಾಡುತ್ತಾರೆ.
ಇದು ಮಕ್ಕಳು ಮಾಡಿದ ಕೆಲಸ ಅಲ್ಲ, ಉದ್ದೇಶಪೂರ್ವಕವಾಗಿ ನೀವು ಭಯ ಪಡಬೇಕಂತಲೇ ಯಾರೋ ಹೀಗೆ ಮಾಡಿದ್ದಾರೆ. ನೀವು ಭಯ ಪಟ್ಟಷ್ಟು ನಿಮ್ಮನ್ನು ಹೆದರಿಸುತ್ತಲೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ತುಂಬಾನೇ ಸ್ಟಾಂಗ್ ಆಗಿ ಇರಬೇಕೆಂದು ಭೂಪತಿ ಹೇಳುತ್ತಾನೆ. ಭೂಪತಿಯ ಈ ಮಾತನ್ನು ದೂರದಿಂದಲೇ ನಿಂತು ಕೇಳುತ್ತಿದ್ದ ಭಾರ್ಗವಿ ಇದು ನಾನು ಮತ್ತು ನನ್ನ ಅಣ್ಣನ ಮಧ್ಯೆ ನಡೆಯುವಂತಹ ಯುದ್ಧ. ಇದಕ್ಕೆ ನೀನು ತಲೆ ಹಾಕಬೇಡ. ನಮ್ಮಿಂದ ದೂರ ಇದ್ದಷ್ಟು ನಿನಗೇನೆ ಒಳ್ಳೆಯದು ಎಂದು ಮನಸ್ಸಿನಲ್ಲೇ ಮಾತನಾಡಿಕೊಳ್ಳುತ್ತಾಳೆ ಹಾಗೂ ಭಯದಲ್ಲಿ ಕುಳಿತಿದ್ದ ಚಂದ್ರಶೇಖರ್‌ನನ್ನು ಕಂಡು ನಗುತ್ತಾ, ನೀನು ಇದೇ ರೀತಿ ಭಯದಲ್ಲೇ ಬದುಕಬೇಕು ಅಣ್ಣ. ಇನ್ನು ಮುಂದೆ ನಿನ್ನನ್ನು ಪ್ರತಿ ಕ್ಷಣ ಭಯದಲ್ಲೇ ಬದುಕುವ ಹಾಗೆ ಮಾಡುತ್ತೇನೆ. ಇಂದು ನಡೆದ ಘಟನೆಯನ್ನು ನೀನು ಮರೆಯೋಕೆ ಪ್ರಯತ್ನ ಪಟ್ಟರೂ ಅದನ್ನು ನಾನು ನಿನಗೆ ನೆನಪಿಸುತ್ತೇನೆ ಎಂದು ಮನದಲ್ಲೇ ಹೇಳುತ್ತಾ, ಚಂದ್ರಶೇಖರ್ ಬಳಿ ಓಡಿ ಬಂದು ಅಮಾಯಕಿಯಂತೆ ಏನಾಯಿತು ಅಣ್ಣ, ಏನದು ಪಟಾಕಿ ಸದ್ದು ಎಂದು ಕೇಳುತ್ತಾಳೆ.
ಇತ್ತ ಕಡೆ ಭೂಪತಿಯ ಬರುವಿಕೆಗಾಗಿ ಕಾಯುತ್ತಿದ್ದ ಶಕುಂತಳಾದೇವಿಗೆ ಭಾರ್ಗವಿ ಒಂದು ಕೊರಿಯರ್ ಕಳುಹಿಸುತ್ತಾಳೆ. ಆದರೆ ಶಕುಂತಳಾದೇವಿಗೆ ಇದು ಯಾರು ಕಳುಹಿಸಿದ್ದು ಎಂದು ಗೊತ್ತಿಲ್ಲ, ಆ ಕೊರಿಯರ್ ಓಪನ್ ಮಾಡಿದಾಗ ಪುಟ್ಟ ಮಡಕೆಯೊಳಗೆ ಒಂದು ಲೆಟರ್ ಇತ್ತು ಅದನ್ನು ತೆರೆದು ಓದಿದಾಗ, ಚಂದ್ರಶೇಖರ್‌ನಿಂದ ದೂರ ಇದ್ದಷ್ಟು ಭೂಪತಿಗೆ ಒಳ್ಳೆಯದು. ಇಲ್ಲದಿದ್ದರೆ ಅವನ ಪ್ರಾಣಕ್ಕೆ ಅಪಾಯ ಎಂದು ಬರೆದಿರುತ್ತದೆ. ಇದನ್ನು ಕಂಡು ಶಕುಂತಳಾದೇವಿ ಆಘಾತಗೊಳ್ಳುತ್ತಾರೆ. ಭಾರ್ಗವಿಯ ಕುತಂತ್ರಕ್ಕೆ ಇನ್ನೆಷ್ಟು ಜೀವ ತೊಂದರೆ ಅನುಭವಿಸುತ್ತೋ ಎಂದು ನೋಡಬೇಕಾಗಿದೆ.
ಮಧುಶ್ರೀ