Lakshana Serial: ದ್ವೇಷದ ಬೆಂಕಿಯಲ್ಲಿ ಉರಿದು ಹೋಯಿತು ಪ್ರಖ್ಯಾತ್ ಜೀವ, ಸಿ.ಎಸ್ ವಂಶವನ್ನು ನಾಶ ಮಾಡುವ ಪಣ ತೊಟ್ಟ ಡೆವಿಲ್
ಕೆಲವೇ ನಿಮಿಷಗಳ ಮುಂಚೆ ಡೆವಿಲ್ ರಾವಣನ ರೂಪದ ಗೊಂಬೆಯನ್ನು ಸುಡುತ್ತಾಳೆ. ಅದರ ಹಿಂದೆ ಪ್ರಖ್ಯಾತ್‌ನನ್ನು ಕಟ್ಟಿ ಹಾಕಿದ್ದಾಳೆ. ಕಣ್ಣ ಮುಂದೆಯೇ ಒಂದು ಪ್ರಾಣ ಬಲಿಯಾಗಿದ್ದನ್ನು ಕಂಡು ಭೂಪತಿ, ನಕ್ಷತ್ರ ಹಾಗೂ ಆಕೆಯ ತಂದೆ ತಾಯಿಗೆ ಮರುಕ ಉಂಟಾಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುವ ಲಕ್ಷಣ ಧಾರವಾಹಿಯು ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಭೂಪತಿ ಪ್ರಖ್ಯಾತ್‌ನನ್ನು ಕಾಪಾಡುವ ಕೆಲವೇ ನಿಮಿಷಗಳ ಮುಂಚೆ ಡೆವಿಲ್ ರಾವಣನ ರೂಪದ ಗೊಂಬೆಯನ್ನು ಸುಡುತ್ತಾಳೆ. ಅದರ ಹಿಂದೆ ಪ್ರಖ್ಯಾತ್‌ನನ್ನು ಕಟ್ಟಿ ಹಾಕಿದ್ದಾಳೆ. ಕಣ್ಣ ಮುಂದೆಯೇ ಒಂದು ಪ್ರಾಣ ಬಲಿಯಾಗಿದ್ದನ್ನು ಕಂಡು ಭೂಪತಿ, ನಕ್ಷತ್ರ ಹಾಗೂ ಆಕೆಯ ತಂದೆ ತಾಯಿಗೆ ಮರುಕ ಉಂಟಾಗಿದೆ. ಭೂಪತಿ ಸುಡುವ ರಾವಣನ ಬಳಿ ಹೋಗುವಾಗ ನಕ್ಷತ್ರ ಮತ್ತು ಚಂದ್ರಶೇಖರ್ ಅವನನ್ನು ತಡೆದು ಅದು ಹೊತ್ತಿ ಉರಿಯುತ್ತಿದೆ, ಅಲ್ಲಿಗೆ ಹೋದರೆ ನಿನ್ನ ಪ್ರಾಣಕ್ಕೆ ಅಪಾಯ ಎಂದು ಹೇಳಿ ಅವನನ್ನು ತಡೆಯುತ್ತಾರೆ. ಇಲ್ಲೇ ಇದ್ದರೂ ಪ್ರಖ್ಯಾತ್ ಪ್ರಾಣವನ್ನು ಕಾಪಾಡುವಲ್ಲಿ ವಿಫಲವಾದೆನಲ್ಲಾ ಎಂದು ಭೂಪತಿ ಕೊರಗುತ್ತಾನೆ. ಯಾರದೋ ಕಾರಣಕ್ಕೆ ಒಂದು ಜೀವ ಬಲಿಯಾಯಿತೆಂದು ಹೇಳೋದಾ ಅಥವಾ ಅವನು ಮಾಡಿದ ತಪ್ಪಿಗೆ ಶಿಕ್ಷೆಯಾಯಿತೆಂದು ತಿಳಿದುಕೊಳ್ಳುವುದ ಒಂದೂ ಗೊತ್ತಾಗುವುದಿಲ್ಲವೆಂದು ನಕ್ಷತ್ರ ದುಃಖ ಪಡುತ್ತಾಳೆ.
ನನ್ನ ಕಾರಣದಿಂದ ಯಾರದೋ ಪ್ರಾಣ ಹೋಯಿತಲ್ಲ. ಆ ಡೆವಿಲ್‌ಗೆ ನನ್ನ ಮೇಲೆ ಏಕೆ ಇಷ್ಟು ದ್ವೇಷ. ಮೌರ್ಯನ ವಿಷಯದಲ್ಲಿ ನಾನು ತಪ್ಪು ಮಾಡಿರಬಹುದು, ಆದರೆ ಬೇರೆ ಯಾರಿಗೂ ನಾನು ತೊಂದರೆ ಕೊಟ್ಟವನಲ್ಲ, ಕೈಲಾದಷ್ಟು ಸಹಾಯ ಮಾಡಿದವನು, ಆದರೆ ಆ ಹೆಂಗಸಿಗೇಕೆ ನನ್ನ ಮೇಲೆ ಇಷ್ಟೊಂದು ದ್ವೇಷ ಎಂದು ಹೇಳಿ ಚಂದ್ರಶೇಖರ್ ಯೋಚನೆ ಮಾಡುತ್ತಾರೆ. ಮೌರ್ಯನಿಗೆ ವಿಷಯದಲ್ಲಿ ತೊಂದರೆ ಮಾಡಿದ ಹಾಗೆ ಬೇರೆಯವರ ಕುಟುಂಬಕ್ಕೂ ನಿಮ್ಮಿಂದ ತೊಂದರೆ ಆಗಿರಬಹುದು. ಸ್ವಲ್ಪ ನೆನಪು ಮಾಡಿಕೊಳ್ಳಿ. ಆ ಹೆಂಹಸಿಗೆ ನಿಮ್ಮಿಂದ ಏನು ತೊಂದರೆ ಆಗಿರಬೇಕು. ಏನು ಆಗದೆ ಆ ಹೆಂಗಸು ನಿಮ್ಮ ಮೇಲೆ ಏಕೆ ದ್ವೇಷ ಸಾಧಿಸುತ್ತಾಳೆ ಎಂದು ಭೂಪತಿ ಹೇಳುತ್ತಾನೆ.
ಇದನ್ನು ಓದಿ; ಪೊಲೀಸ್ ಸ್ಟೇಷನ್‌ಗೆ ಬಂದ ಕೊರಿಯರ್ ಕಂಡು ಶಾಕ್ ಆಗಿದ್ದಾರೆ ಭೂಪತಿ-ನಕ್ಷತ್ರ
ಭೂಪತಿಯ ಈ ಮಾತಿನಿಂದ ಬೇಸರಗೊಂಡ ನಕ್ಷತ್ರ ನನ್ನ ಅಪ್ಪನ ಬಗ್ಗೆ ಗೊತ್ತಿಲ್ಲದೆ ಏನೇನೋ ಮಾತಾಡಬೇಡ ಎಂದು ಹೇಳುತ್ತಾಳೆ. ಆರತಿವರು ಕೂಡಾ ನೀನು ನನ್ನ ಗಂಡನನ್ನು ಇತ್ತಿಚಿಗೆ ನೋಡಿದ್ದು, ಆದರೆ ನಾನು ಅವರೊಂದಿಗೆ ಇಪ್ಪತ್ತೆದು ವರ್ಷಗಳಿಂದ ಸಂಸಾರ ನಡೆಸಿಕೊಂಡು ಬಂದಿದ್ದೇನೆ. ಅವರಲ್ಲಾಗುವ ಸಣ್ಣ ಪುಟ್ಟ ಬದಲಾವಣೆಯೂ ನನಗೆ ಗೊತ್ತಾಗುತ್ತದೆ. ಒಂದಿಷ್ಟು ಜನರಿಗೆ ಅವರ ಕೈಲಾದ ಸಹಾಯವನ್ನು ಮಾಡುತ್ತಾರೆಯೇ ವಿನಃ ನನ್ನ ಗಂಡ ಯಾರಿಗೂ ತೊಂದರೆ ಕೊಟ್ಟವರಲ್ಲ ಎಂದು ಹೇಳುತ್ತಾರೆ. ಆಗ ಭೂಪತಿ ಮೌನವಾಗುತ್ತಾನೆ.
ಇತ್ತ ಕಡೆ ಪ್ರಖ್ಯಾತ್‌ನನ್ನು ಸಾಯಿಸಿದ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಾಳೆ ಭಾರ್ಗವಿ. ಭಯ ಎಂದರೆ ಏನು ಅಂತ ನಿಮಗೆಲ್ಲರಿಗೂ ತೋರಿಸುತ್ತೇನೆ. ಚಂದ್ರ ಶೇಖರ್ ವಂಶವನ್ನು ನಿರ್ವಂಶ ಮಾಡಿಯೇ ತೀರುತ್ತೇನೆ ಎಂದು ದೇವಿಯ ಮುಂದೆ ಶಪತ ಮಾಡುತ್ತಾ ನಿಜವಾದ ಕಥೆ ಈಗ ಶುವಾಗುತ್ತದೆ ಎಂದು ಹೇಳುತ್ತಾ ಅಟ್ಟಹಾಸದ ನಗುವನ್ನು ಬೀರುತ್ತಾಳೆ. ಏನೋ ಸಾಧಿಸಿದ ಖುಷಿಯಲ್ಲಿ ಗರ್ವದಿಂದ ಅಲ್ಲೇ ಭಾರ್ಗವಿ, ಮಿಲ್ಲಿ ಮತ್ತು ಅವರ ಚೇಳಾಗಳು ನಿಂತಿರುತ್ತಾರೆ. ಅವರನ್ನು ದೂರದಿಂದ ನಕ್ಷತ್ರ ನೋಡಿ ಭೂಪತಿಯ ಬಳಿ ನೋಡು ಅಲ್ಲಿ ಯಾರೋ ಒಂದಷ್ಟು ಜನ ನಿಂತಿದ್ದಾರೆ ಎಂದು.
ತಕ್ಷಣ ನಕ್ಷತ್ರ, ಭೂಪತಿ, ಆರತಿ, ಸಿ.ಎಸ್ ಹಾಗೂ ಪೊಲೀಸರೆಲ್ಲರೂ ಅಲ್ಲಿಗೆ ಹೋಗುತ್ತಾರೆ ಆದರೆ ಡೆವಿಲ್ ಮುಖವನ್ನು ಅವರಿಗೆ ನೋಡಲು ಸಾಧ್ಯವಾಗುವುದಿಲ್ಲ. ಭಾರ್ಗವಿಯೇ ಆ ಡೆವಿಲ್ ಎಂದು ಸಿ.ಎಸ್ ಕುಟುಂಬಕ್ಕೆ ಗೊತ್ತಾಗುತ್ತಾ ಹಾಗೂ ಅವಳಿಗೆ ಏಕೆ ತನ್ನ ಅಣ್ಣನ ಮೇಲೆ ಇಷ್ಟೊಂದು ದ್ವೇಷ ಎಂದು ಮುಂಬರುವ ಸಂಚಿಕೆಗಳಲ್ಲಿ ನೋಡಬೇಕಾಗಿದೆ.
ಮಧುಶ್ರೀ