ಕ್ಲೈಮ್ಯಾಕ್ಸ್ ಹಂತದಲ್ಲಿ ‘ಲಕ್ಷಣ’ ಧಾರಾವಾಹಿ; ವಿಡಿಯೋ ಹಂಚಿಕೊಂಡ ಸುಕೃತಾ ನಾಗ್

|

Updated on: Oct 05, 2023 | 7:42 AM

ಶೂಟಿಂಗ್ ಜರ್ನಿಯನ್ನು ನೆನಪಿಸುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ ಸುಕೃತಾ. ಈ ವಿಡಿಯೋ ಸಖತ್ ಫನ್ ಆಗಿದೆ. ‘ಕೆಲವು ಸುಂದರ ವ್ಯಕ್ತಿಗಳೊಂದಿಗೆ ಒಂದು ಸುಂದರ ಪ್ರಯಾಣ’ ಎಂದು ಈ ವಿಡಿಯೋಗೆ ಅವರು ಕ್ಯಾಪ್ಶನ್ ನೀಡಿದ್ದಾರೆ.

ಕ್ಲೈಮ್ಯಾಕ್ಸ್ ಹಂತದಲ್ಲಿ ‘ಲಕ್ಷಣ’ ಧಾರಾವಾಹಿ; ವಿಡಿಯೋ ಹಂಚಿಕೊಂಡ ಸುಕೃತಾ ನಾಗ್
ಸುಕೃತಾ
Follow us on

ಕಲರ್ಸ್ ಕನ್ನಡದಲ್ಲಿ ಪ್ರತೀ ವರ್ಷ ಬಿಗ್ ಬಾಸ್ ಬರುವ ಸಂದರ್ಭದಲ್ಲಿ ಕೆಲವು ಧಾರಾವಾಹಿಗಳು ಕೊನೆಗೊಳ್ಳೋದು ಸಾಮಾನ್ಯ. ಈ ವರ್ಷವೂ ಅದು ಮುಂದುವರಿದಿದೆ. ಈ ಮೊದಲೇ ಹೇಳಿದಂತೆ ‘ತ್ರಿಪುರ ಸುಂದರಿ’ ಧಾರಾವಾಹಿ (Tripura Sundari Serial) ಕೊನೆಗೊಳ್ಳುತ್ತಿದೆ. ಅದೇ ರೀತಿ ‘ಲಕ್ಷಣ’ (Lakshana Serial) ಧಾರಾವಾಹಿಯೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಈ ವಾರವೇ ಧಾರಾವಾಹಿ ಕೊನೆಗೊಳ್ಳಲಿದೆ ಎನ್ನಲಾಗುತ್ತಿದೆ. ಈ ಮೂಲಕ ಬಿಗ್ ಬಾಸ್ ಆಗಮನಕ್ಕೆ ಈ ಧಾರಾವಾಹಿಗಳು ಅನುವು ಮಾಡಿಕೊಡುತ್ತಿವೆ. ಶೂಟಿಂಗ್ ಜರ್ನಿ ಹೇಗಿತ್ತು ಎಂಬುದನ್ನು ‘ಲಕ್ಷಣ’ ಧಾರಾವಾಹಿಯ ಕಲಾವಿದೆ ಸುಕೃತಾ ನಾಗ್ ನೆನಪಿಸಿಕೊಂಡಿದ್ದಾರೆ.

ಸುಕೃತಾ ನಾಗ್ ಅವರು ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿ 2013ರಿಂದ 2020ರವರೆಗೆ ಪ್ರಸಾರ ಕಂಡಿತ್ತು. ಒಟ್ಟೂ 1588 ಎಪಿಸೋಡ್​ಗಳನ್ನು ಧಾರಾವಾಹಿ ಪೂರ್ಣಗೊಳಿಸಿತ್ತು. ಇದರಲ್ಲಿ ಸುಕೃತಾ ಕೂಡ ಇದ್ದರು. ಆ ಬಳಿಕ ಅವರು ‘ಲಕ್ಷಣ’ ಧಾರಾವಾಹಿಯಲ್ಲಿ ನಟಿಸಿದರು. ಈ ಧಾರಾವಾಹಿಯಲ್ಲಿ ಜಗನ್ ಸಿ, ವಿಜಯಲಕ್ಷ್ಮಿ ಮೊದಲಾದವರು ನಟಿಸಿದ್ದಾರೆ. ಈ ಧಾರಾವಾಹಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ ಎನ್ನಲಾಗುತ್ತಿದೆ.

ಶೂಟಿಂಗ್ ಜರ್ನಿಯನ್ನು ನೆನಪಿಸುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ ಸುಕೃತಾ. ಈ ವಿಡಿಯೋ ಸಖತ್ ಫನ್ ಆಗಿದೆ. ‘ಕೆಲವು ಸುಂದರ ವ್ಯಕ್ತಿಗಳೊಂದಿಗೆ ಒಂದು ಸುಂದರ ಪ್ರಯಾಣ’ ಎಂದು ಈ ವಿಡಿಯೋಗೆ ಅವರು ಕ್ಯಾಪ್ಶನ್ ನೀಡಿದ್ದಾರೆ. ಇದಕ್ಕೆ ಅನೇಕರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.  ‘ಲಕ್ಷಣ’ ಧಾರಾವಾಹಿ ಆರಂಭ ಆಗಿದ್ದು 2021ರ ಆಗಸ್ಟ್ ತಿಂಗಳಲ್ಲಿ. ಎರಡು ವರ್ಷಗಳಿಗೂ ಅಧಿಕ ಕಾಲ ಈ ಧಾರಾವಾಹಿ ಪ್ರಸಾರ ಕಂಡಿತು. ಈಗ ‘ಲಕ್ಷಣ’ ಅಂತ್ಯ ಆಗುತ್ತಿರುವ ಬಗ್ಗೆ ವೀಕ್ಷಕರ ವಲಯದಲ್ಲಿ ಬೇಸರ ಇದೆ.


ಇದನ್ನೂ ಓದಿ: ನಿಜವಾದ ಬಿಗ್ ಬಾಸ್ ಯಾರು ಎನ್ನುವ ಪ್ರಶ್ನೆಗೆ ಸುದೀಪ್ ಕೊಟ್ರು ಉತ್ತರ 

ಭಾನುವಾರ (ಅಕ್ಟೋಬರ್ 8) ಬಿಗ್ ಬಾಸ್ ಆರಂಭ ಆಗುತ್ತಿದೆ. ಹಲವು ಸೆಲೆಬ್ರಿಟಿಗಳು, ಯೂಟ್ಯೂಬರ್ಸ್ ಮೊದಲಾದ ಕ್ಷೇತ್ರದವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಸುಕೃತಾ ನಾಗ್ ಕೂಡ ದೊಡ್ಮನೆಗೆ ಹೋಗುತ್ತಾರೆ ಎನ್ನುವ ಸುದ್ದಿ ಹರಿದಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ