
ಜೀ ಕನ್ನಡದ ಜನಪ್ರಿಯ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಕಥೆಯಲ್ಲಿ ಅಚ್ಚರಿಯ ತಿರುವು ಸಿಕ್ಕಿದೆ. ಧಾರಾವಾಹಿಯಲ್ಲಿ ಈವರೆಗೆ ಗಮನ ಸೆಳೆದಿದ್ದ ಹಿತಾ ಪಾತ್ರವು ಕೊನೆಗೊಂಡಿದ್ದು, ದುರ್ಗಾ ಬದುಕಿಗೆ ಹೊಸ ನಗು ತರಲು ‘ನಂದಿನಿ’ ಎಂಟ್ರಿ ಕೊಟ್ಟಿದ್ದಾಳೆ. ಹಲವು ವರ್ಷಗಳ ಬಳಿಕ ಕಥೆ ಓಪನ್ ಆಗಿದೆ ಅನ್ನೋದು ವಿಶೇಷ.
ದೇಗುಲದ ಪ್ರಾಂಗಣ ಹಾಗೂ ಸುಂದರ ಪರಿಸರದಲ್ಲಿ ಮೂಡಿಬಂದಿರುವ ಈ ಹೊಸ ಪ್ರೋಮೋ ಪ್ರೇಕ್ಷಕರ ಗಮನ ಸೆಳೆದಿದೆ. ದುರ್ಗಾ ಜೀವನದಲ್ಲಿ ಹೊಸ ಘಟ್ಟ ಶುರುವಾಗಿದ್ದು, ನಂದಿನಿಯ ಆಗಮನದಿಂದ ಕಥೆ ಯಾವ ಹಾದಿ ಹಿಡಿಯಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ದುರ್ಗಾ ಮನೆ ಬಿಡುವಾಗ ಪ್ರೆಗ್ನೆಂಟ್ ಆಗಿದ್ದಳು. ಅವಳಿಗೆ ಈಗ ಮಗು ಹುಟ್ಟಿ, ದೊಡ್ಡವಳಾಗಿದ್ದಾಳೆ. ಅವಳೇ ನಂದಿನಿ. ರಾತ್ರಿ 10:30ಕ್ಕೆ ಪ್ರಸಾರವಾಗುವ ಈ ಧಾರಾವಾಹಿಯ ಮೇಲಿನ ನಿರೀಕ್ಷೆ ಈಗ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಮುದ್ದಾದ ಬಾಲನಟಿ ಮಹಿತಾ (ಹಿತಾ ಪಾತ್ರ) ಪಾತ್ರವು ಅಧಿಕೃತವಾಗಿ ಅಂತ್ಯಗೊಂಡಿದೆ. ಈ ಕುರಿತು ಧಾರಾವಾಹಿಯ ಸಹನಟಿ ರಿಷಿಕಾ ಅವರು (ದುರ್ಗಾ ಪಾತ್ರಧಾರಿ) ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಕ್ಕರೆ ಹಾಗೂ ವಿಶೇಷ ನಂಟನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ.
ರಿಷಿಕಾ ತಮ್ಮ ಪೋಸ್ಟ್ನಲ್ಲಿ, ‘ನಾನು ಇದುವರೆಗೆ ನೋಡಿದ ಅತ್ಯಂತ ಚತುರ, ಮುದ್ದಾದ, ಮಾತನಾಡುವ, ಪ್ರತಿಭಾವಂತ ಮತ್ತು ಕೆಲವೊಮ್ಮೆ ಕಿರಿಕಿರಿ ಮಾಡುವ ಮಗು ನೀನು. ನಮ್ಮಿಬ್ಬರ ಕಾಂಬಿನೇಷನ್ ಸೀನ್ಗಳು ತುಂಬಾ ಚೆನ್ನಾಗಿದ್ದವು. ಇಂದು ಟೆಲಿಕಾಸ್ಟ್ನಲ್ಲಿ ನಿನ್ನ ಪಾತ್ರ ಕೊನೆಗೊಳ್ಳಲಿದೆ, ಆದರೆ ಕೊನೆಯ ದೃಶ್ಯದ ಶೂಟಿಂಗ್ ಮಾಡುವಾಗ ನನಗೆ ತುಂಬ ನೋಯಿಸುವ ಅನುಭವವಾಯಿತು. ನಿನ್ನ ಪ್ರತಿಭೆಯನ್ನು ನೋಡಿ ನನಗೆ ತುಂಬಾ ಹೆಮ್ಮೆಯಾಗುತ್ತದೆ. ನಾನು ಹೊರಗೆ ತೋರಿಸಿಕೊಳ್ಳದಿದ್ದರೂ, ನೀನು ಯಾವಾಗಲೂ ನನ್ನ ನೆಚ್ಚಿನ ಮಗು. ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ, ನಿನ್ನ ಬಾಲ್ಯವನ್ನು ಆನಂದಿಸು, ಚೆನ್ನಾಗಿ ಅನ್ವೇಷಿಸು. ನಾನು ಈಗಾಗಲೇ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮಹಿತಾ, ಲವ್ ಯು’ ಎಂದು ಬರೆದುಕೊಂಡು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:10 am, Thu, 15 October 26