ಹನಿಟ್ರ್ಯಾಪ್ಗೆ (Honey Trap) ಸಿನಿಮಾ ನಟಿಯರನ್ನೂ ಅದರಲ್ಲೂ ಟಿವಿ ನಟಿಯರು ಬಳಸುತ್ತಿರುವ ಪ್ರಕರಣಗಳು ಇತ್ತೀಚೆಗೆ ತುಸು ಹೆಚ್ಚು ಬೆಳಕಿಗೆ ಬರುತ್ತಿವೆ. ವರ್ಷದ ಹಿಂದೆ ಕರ್ನಾಟಕದಲ್ಲಿ ಬಯಲಾಗಿದ್ದ ಹನಿಟ್ರ್ಯಾಪ್ ಅಡ್ಡದಲ್ಲಿ ಟಿವಿ ನಟಿಯರು ಇದ್ದ ವಿಷಯ ಪೊಲೀಸರ ತನಿಖೆಯಿಂದ ಬಯಲಾಗಿತ್ತು. ಇದೀಗ ಮಲಯಾಳಂನ ಟಿವಿ ನಟಿಯೊಬ್ಬಾಕೆಯನ್ನು ಹನಿಟ್ರ್ಯಾಪ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ನಟಿ ಹನಿಟ್ರ್ಯಾಪ್ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಹಣ ಪೀಕಿಸುತ್ತಿದ್ದಳಂತೆ.
ಪರವುರ್ನಲ್ಲಿ ಹನಿಟ್ರ್ಯಾಪ್ನಲ್ಲಿ ತೊಡಗಿಕೊಂಡಿದ್ದ ಟಿವಿ ನಟಿ ಹಾಗೂ ಆಕೆಯ ಗೆಳೆತಿಯನ್ನು ಪೊಲೀಸರು ಬಂಧಿಸಿದ್ದಾರೆ. ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ನಿತ್ಯಾ ಸಸಿ ಎಂಬಾಕೆ ಆಕೆಯ ಗೆಳೆಯಯೊಟ್ಟಿಗೆ ಸೇರಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದರಂತೆ. ವೃದ್ಧನೋರ್ವನನ್ನು ಹನಿಟ್ರ್ಯಾಪ್ ಬಲಗೆ ಬೀಳಿಸಿ ಸುಮಾರು 11 ಲಕ್ಷ ಮೊತ್ತವನ್ನು ನಿತ್ಯಾ ಸಸಿ ಹಾಗೂ ಆಕೆಯ ಗೆಳೆಯ ಪೀಕಿಸಿದ್ದರು.
ಪೊಲೀಸರು ಹೇಳಿರುವಂತೆ, 75 ವರ್ಷದ ಮಾಜಿ ಸೈನಿಕ ಹಾಗೂ ಕೇರಳ ವಿಶ್ವವಿದ್ಯಾನಿಲಯದ ಮಾಜಿ ನೌಕರನೊಬ್ಬನನ್ನು ನಟಿ ತನ್ನ ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಳು. ಮಾಜಿ ಸೈನಿಕ, ತನ್ನ ಮನೆಯನ್ನು ಬಾಡಿಗೆಗೆ ನೀಡಲು ಯತ್ನಿಸುತ್ತಿದ್ದಾಗ ಇವರ ಸಂಪರ್ಕಕ್ಕೆ ಬಂದ ನಟಿ ಆತ್ಮೀಯಳಾಗಿ, ಕೊನೆಗೆ ಮನೆಗೆ ಕರೆಸಿಕೊಂಡು ಸೈನಿಕನನ್ನು ವಿವಸ್ತ್ರನನ್ನಾಗಿ ಮಾಡಿ, ಆಕೆಯೂ ಬೆತ್ತಲಾಗಿ ಬಲವಂತವಾಗಿ ಒಟ್ಟಿಗೆ ಫೋಟೊ ತೆಗೆಸಿಕೊಂಡರಂತೆ. ಆ ಫೋಟೊಗಳನ್ನಿಟ್ಟುಕೊಂಡು 25 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದಳಂತೆ ನಟಿ ಹಾಗೂ ಆಕೆಯ ಗೆಳೆಯ.
ಮಾಜಿ ಸೈನಿಕ ಸುಮಾರು 11 ಲಕ್ಷ ಮೊತ್ತವನ್ನು ನೀಡಿದ್ದಾನೆ. ಅದಾದ ಬಳಿಕ ಇನ್ನಷ್ಟು ಹಣಕ್ಕೆ ಡಿಮ್ಯಾಂಡ್ ಮಾಡಿದಾಗ ಮಾಜಿ ಸೈನಿಕ ಪರವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಇದೀಗ ನಟಿ ಹಾಗೂ ಆಕೆಯ ಗೆಳತಿಯನ್ನು ವಶಕ್ಕೆ ಪಡೆದಿದ್ದು, ಈ ಇಬ್ಬರು ಈ ಹಿಂದೆಯೂ ಇಂಥಹುದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರಾ ಎಂದು ಪತ್ತೆ ಹಚ್ಚುತ್ತಿದ್ದಾರೆ.
ವರ್ಷದ ಹಿಂದೆ ಕರ್ನಾಟಕದಲ್ಲಿಯೂ ಕೆಲವು ನಟಿಯರು ರಾಜಕಾರಣಿಗಳ ಹಾಗೂ ಐಎಎಸ್ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಲು ಬಳಕೆಯಾಗಿದ್ದರು. ಹನಿಟ್ರ್ಯಾಪ್ನ ದೊಡ್ಡ ಜಾಲವೊಂದನ್ನು ಬೆಂಗಳೂರು ಪೊಲೀಸರು ಹೊರಗೆಳೆದಿದ್ದರು. ಈ ಜಾಲದಲ್ಲಿ ಹಲವು ನಟಿಯರು ಇದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ