
‘ಹಿಂದಿ ಬಿಗ್ ಬಾಸ್ 15’ Hindi Bigg Boss 15) ಕೊನೆಯ ಹಂತ ತಲುಪಿದೆ. ‘ಬಿಗ್ ಬಾಸ್ ಒಟಿಟಿ’ ಮೂಲಕ ಹೆಸರು ಮಾಡಿದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಈ ಬಾರಿ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಈ ವಾರ ಅವರು ಮನೆಯ ಕ್ಯಾಪ್ಟನ್ ಕೂಡ ಆಗಿದ್ದಾರೆ. ಅವರು ಗೆಲ್ಲೋ ಚಾನ್ಸ್ ಹೆಚ್ಚಿದೆ ಎನ್ನುವ ಅಭಿಪ್ರಾಯ ವೀಕ್ಷಕರ ವಲಯದಲ್ಲಿ ಕೇಳಿ ಬಂದಿದೆ. ಈ ಮಧ್ಯೆ ಶಮಿತಾಗೆ ಅವರ ಗೆಳತಿ ನೇಹಾ ಭಾಸಿನ್ ಶಾಕ್ ನೀಡಿದ್ದಾರೆ. ರಾಕೇಶ್ ಹೊಸ ಗರ್ಲ್ಫ್ರೆಂಡ್ ಹುಡುಕಿಕೊಂಡಿರುವುದಾಗಿ ಅವರು ಹೇಳಿದ್ದಾರೆ. ಈ ವಿಚಾರ ಕೇಳಿ ಶಮಿತಾ ಒಂದು ಕ್ಷಣ ಶಾಕ್ಗೆ ಒಳಗಾದರು.
ಶಮಿತಾ ಹಾಗೂ ರಾಕೇಶ್ ‘ಬಿಗ್ ಬಾಸ್ ಒಟಿಟಿ’ಯಲ್ಲಿ ಪರಿಚಯಗೊಂಡರು. ಇಬ್ಬರ ಗೆಳೆತನ ಶೋ ಮುಗಿಯುವುದರೊಳಗೆ ಪ್ರೀತಿಗೆ ತಿರುಗಿತ್ತು. ಶೋ ಪೂರ್ಣಗೊಂಡ ಬಳಿಕವೂ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡರು. ಬಿಗ್ ಬಾಸ್ 15ನೇ ಸೀಸನ್ಗೆ ಶಮಿತಾ ಮೊದಲು ಮನೆ ಒಳಗೆ ಬಂದರೆ, ವೈಲ್ಡ್ ಕಾರ್ಡ್ ಮೂಲಕ ರಾಕೇಶ್ ಬಂದಿದ್ದರು. ಅವರು ಈಗ ಎಲಿಮಿನೇಟ್ ಆಗಿ ಮನೆಯಿಂದ ಹೊರ ನಡೆದಿದ್ದಾರೆ. ಹೀಗಾಗಿ, ರಾಕೇಶ್ ಅವರನ್ನು ಶಮಿತಾ ಬಿಗ್ ಬಾಸ್ ಮನೆಯಲ್ಲಿ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ನೇಹಾ ಭಾಸಿನ್ ಅವರು ಅತಿಥಿಯಾಗಿ ಬಿಗ್ ಬಾಸ್ ವೇದಿಕೆ ಏರಿದ್ದರು. ಸಲ್ಮಾನ್ ಖಾನ್ ಜತೆ ಒಂದಷ್ಟು ಹರಟೆ ಹೊಡೆದರು. ಆ ಬಳಿಕ ಶಮಿತಾ ಜತೆ ಮಾತನಾಡೋ ಅವಕಾಶ ನೇಹಾಗೆ ಸಿಕ್ಕಿತ್ತು. ‘ ನಿನ್ನನ್ನು ರಾಕೇಶ್ ನೆನಪಿಸಿಕೊಳ್ಳುತ್ತಿರುತ್ತಾನೆ. ಆದರೆ, ಆತ ಹೊಸ ಗರ್ಲ್ಫ್ರೆಂಡ್ ಮಾಡಿಕೊಂಡಿದ್ದಾನೆ’ ಎಂದು ನೇಹಾ ಹೇಳುತ್ತಿದ್ದಂತೆ ಶಮಿತಾ ಮುಖ ಬಾಡಿ ಹೋಯಿತು. ಆ ಬಳಿಕ ಇದು ಜೋಕ್ ಎಂದರು ನೇಹಾ. ಆಗ ಶಮಿತಾಗೆ ಹೋದ ಉಸಿರು ಬಂದಂತಾಯಿತು. ‘ಏನಮ್ಮ, ದಯವಿಟ್ಟು ಹಾರ್ಟ್ಅಟ್ಯಾಕ್ ಮಾಡಿಸಬೇಡ’ ಎಂದರು ಶಮಿತಾ. ಆಗ ಸಲ್ಮಾನ್ ಖಾನ್ ಕೂಡ ನಕ್ಕರು.
ಜನವರಿ ಮಧ್ಯದ ವೇಳೆಗೆ ‘ಬಿಗ್ ಬಾಸ್ 15’ ಪೂರ್ಣಗೊಳ್ಳಬೇಕಿತ್ತು. ಆದರೆ, ಇದನ್ನು ಇನ್ನೂ ಎರಡು ವಾರ ವಿಸ್ತರಣೆ ಮಾಡಲಾಗಿದೆ. ಜನವರಿ ಅಂತ್ಯದ ವೇಳೆಗೆ ಈ ಶೋ ಪೂರ್ಣಗೊಳ್ಳಬಹುದು ಎನ್ನುವ ನಿರೀಕ್ಷೆ ಇದೆ. ಕೊರೊನಾ ವೈರಸ್ ಹೆಚ್ಚುತ್ತಿರುವುದರಿಂದ ಫಿನಾಲೆ ನಡೆಸೋಕೆ ಸದ್ಯದ ಮಟ್ಟಿಗೆ ಬಿಗ್ ಬಾಸ್ ಫಿನಾಲೆ ಮುಂದೂಡಲ್ಪಟ್ಟಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ ಅರ್ಧಕ್ಕೆ ತೊರೆದ ರಾಕೇಶ್ ಬಾಪಟ್-ಶಮಿತಾ ಶೆಟ್ಟಿ; ಏನಿದು ಸಮಾಚಾರ?
ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ
Published On - 12:03 pm, Tue, 11 January 22