ಕನ್ನಡ ಬಿಗ್ ಬಾಸ್​ ಮನೆಗೆ ವೈಲ್ಡ್​ ಕಾರ್ಡ್ ಮೂಲಕ ಇಬ್ಬರ ಎಂಟ್ರಿ

ಬಿಗ್ ಬಾಸ್​ನ ಪ್ರತೀ ಸೀಸನ್​ಲ್ಲಿ ವೈಲ್ಡ್ ಕಾರ್ಡ್ ಮೂಲಕ ಸ್ಪರ್ಧಿಗಳು ಎಂಟ್ರಿ ಪಡೆಯುತ್ತಾರೆ. ಎಂಟನೇ ಸೀಸನ್​ನಲ್ಲಿ ಇಬ್ಬರು ಒಟ್ಟೊಟ್ಟಿಗೆ ದೊಡ್ಮನೆಗೆ ಬಂದಿದ್ದರು. ಈ ಬಾರಿಯೂ ಹಾಗೆಯೇ ಆಗುತ್ತಿದೆ ಎನ್ನಲಾಗುತ್ತಿದೆ.

ಕನ್ನಡ ಬಿಗ್ ಬಾಸ್​ ಮನೆಗೆ ವೈಲ್ಡ್​ ಕಾರ್ಡ್ ಮೂಲಕ ಇಬ್ಬರ ಎಂಟ್ರಿ
ವೈಲ್ಡ್ ಕಾರ್ಡ್ ಎಂಟ್ರಿ

Updated on: Nov 27, 2023 | 8:34 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ ಈಗ 50 ದಿನಗಳನ್ನು ಪೂರ್ಣಗೊಳಿಸಿದೆ. ಸ್ಪರ್ಧಿಗಳ ಮಧ್ಯೆ ಸ್ಪರ್ಧೆ ಜೋರಾಗಿದೆ. ಈಗಾಗಲೇ ಬಿಗ್ ಬಾಸ್ (Bigg Boss) ಮನೆಯಿಂದ ಆರು ಮಂದಿ ಔಟ್ ಆಗಿದ್ದು, ಸ್ಪರ್ಧಿಗಳ ಸಂಖ್ಯೆ 11ಕ್ಕೆ ಇಳಿಕೆ ಆಗಿದೆ. ಇನ್ನು 50 ದಿನ ಕಳೆದರೆ ಬಿಗ್ ಬಾಸ್ ಫಿನಾಲೆ ಬರಲಿದೆ. ಈಗ ಬಿಗ್ ಬಾಸ್ ಮನೆಗೆ ಇಬ್ಬರು ಸ್ಪರ್ಧಿಗಳ ಆಗಮನ ಆಗಿದೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಎಗ್ಸೈಟ್ ಆಗಿದ್ದಾರೆ.

ಬಿಗ್ ಬಾಸ್​ನ ಪ್ರತೀ ಸೀಸನ್​ಲ್ಲಿ ವೈಲ್ಡ್ ಕಾರ್ಡ್ ಮೂಲಕ ಸ್ಪರ್ಧಿಗಳು ಎಂಟ್ರಿ ಪಡೆಯುತ್ತಾರೆ. ಎಂಟನೇ ಸೀಸನ್​ನಲ್ಲಿ ಇಬ್ಬರು ಒಟ್ಟೊಟ್ಟಿಗೆ ದೊಡ್ಮನೆಗೆ ಬಂದಿದ್ದರು. ಈ ಬಾರಿಯೂ ಹಾಗೆಯೇ ಆಗುತ್ತಿದೆ ಎನ್ನಲಾಗುತ್ತಿದೆ. ದೊಡ್ಮನೆಗೆ ಇಬ್ಬರ ಎಂಟ್ರಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಅವರು ಯಾರು ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಮಾಡೆಲ್ ಆಗಿ ಗುರುತಿಸಿಕೊಂಡಿರುವ ಪವಿ ಪೂವಪ್ಪ ಅವರು ದೊಡ್ಮನೆಗೆ ಬರಲಿದ್ದಾರಂತೆ. ಮಾಡೆಲ್ ಆಗಿ ಅವರು ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಈಗ ಅವರಿಗೆ ಬಿಗ್ ಬಾಸ್​ನಲ್ಲಿ ಸ್ಪರ್ಧಿಸೋ ಅವಕಾಶ ಸಿಕ್ಕಿದೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 1 ಲಕ್ಷ ಹಿಂಬಾಲಕರಿದ್ದಾರೆ. ಬಿಗ್ ಬಾಸ್​ಗೆ ಹೋದ ಬಳಿಕ ಈ ಸಂಖ್ಯೆ ಹೆಚ್ಚಲಿದೆ. ಸಖತ್ ಬೋಲ್ಡ್ ಆಗಿ ಅವರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ನಟ, ಮಾಡೆಲ್, ಕ್ರಿಕೆಟರ್ ಅವಿನಾಶ್ ಶೆಟ್ಟಿ ಕೂಡ ದೊಡ್ಮನೆಗೆ ಬಂದಿದ್ದಾರೆ.

ಇದನ್ನೂ ಓದಿ: Namratha Gowda: ‘ನಾನು ಹೇಟ್ ಮಾಡುವವರೇ ಜನರಿಗೆ ಇಷ್ಟವಾಗ್ತಿದ್ದಾರೆ’; ಕಣ್ಣೀರು ಹಾಕಿದ ನಮ್ರತಾ ಗೌಡ

ಬಿಗ್ ಬಾಸ್​ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಜನಪ್ರಿಯತೆ ಪಡೆದ ಅನೇಕರಿದ್ದಾರೆ. ಬಿಗ್ ಬಾಸ್​ ಜರ್ನಿ ಅರ್ಧಕ್ಕೆ ಇವರು ಸೇರ್ಪಡೆ ಆಗುವಾಗ ಸಾಮಾನ್ಯವಾಗಿ ಅಡೆತಡೆಗಳು ಹೆಚ್ಚಿರುತ್ತವೆ. ಅದನ್ನು ಯಶಸ್ವಿಯಾಗಿ ದಾಟಬೇಕಾದ ಚಾಲೆಂಜ್ ಇವರ ಎದುರು ಇರುತ್ತದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಇಂದು (ನವೆಂಬರ್ 27) ಪ್ರಸಾರ ಆಗಲಿರುವ ಎಪಿಸೋಡ್​ನಲ್ಲಿ ಈ ವಿಚಾರ ರಿವೀಲ್ ಆಗುವ ಸಾಧ್ಯತೆ ಇದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 8:11 am, Mon, 27 November 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us