‘ಕಾರ್ತಿಕ್​ ಬಿಗ್​ ಬಾಸ್​ ಗೆಲ್ಲಲ್ಲ’; ಸುದೀಪ್​ ಎದುರಲ್ಲಿ ಭವಿಷ್ಯ ನುಡಿದ ಸಂಗೀತಾ ಶೃಂಗೇರಿ

ಆರಂಭದಲ್ಲಿ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ ನಡುವೆ ಒಳ್ಳೆಯ ಸ್ನೇಹ ಇತ್ತು. ನಂತರ ಅವರಿಬ್ಬರ ನಡುವೆ ಬಿರುಕು ಮೂಡಿತು. ಕಾರ್ತಿಕ್​ ಮಹೇಶ್​ ಬದಲಿಗೆ ಡ್ರೋನ್​ ಪ್ರತಾಪ್​ ಜೊತೆ ಈಗ ಸಂಗೀತಾ ಶೃಂಗೇರಿ ಹೆಚ್ಚು ಕ್ಲೋಸ್​ ಆಗಿದ್ದಾರೆ. ಕಾರ್ತಿಕ್​ ಅವರು ನಮ್ರತಾ ಗೌಡ ಮತ್ತು ವಿನಯ್​ ಗೌಡ ಜೊತೆ ಸ್ನೇಹ ಬೆಳೆಸಿದ್ದಾರೆ.

‘ಕಾರ್ತಿಕ್​ ಬಿಗ್​ ಬಾಸ್​ ಗೆಲ್ಲಲ್ಲ’; ಸುದೀಪ್​ ಎದುರಲ್ಲಿ ಭವಿಷ್ಯ ನುಡಿದ ಸಂಗೀತಾ ಶೃಂಗೇರಿ
ಕಾರ್ತಿಕ್​ ಮಹೇಶ್​, ಸಂಗೀತಾ ಶೃಂಗೇರಿ

Updated on: Dec 31, 2023 | 7:44 AM

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋ (BBK 10) ಇನ್ನೇನು ಕೆಲವೇ ದಿನಗಳಲ್ಲಿ ಫಿನಾಲೆ ತಲುಪಲಿದೆ. ಈ ಬಾರಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ. ವೀಕ್ಷಕರ ಪ್ರಕಾರ ಯಾರು ಗೆಲ್ಲುತ್ತಾರೆ ಎಂಬುದು ಒಂದಾದರೆ, ಆದರೆ ಮನೆಯವರ ಲೆಕ್ಕಾಚಾರವೇ ಬೇರೆ. ಈ ಪ್ರಶ್ನೆಯನ್ನು ಸುದೀಪ್​ ಅವರು ಸ್ವತಃ ಸ್ಪರ್ಧಿಗಳಿಗೆ ಕೇಳಿದ್ದಾರೆ. ಆಗ ಎಲ್ಲರಿಂದಲೂ ಬೇರೆ ಬೇರೆ ಉತ್ತರ ಬಂದಿದೆ. ಅಚ್ಚರಿ ಏನೆಂದರೆ, ವಿನ್ನರ್​ ಯಾರಾಗಬಹುದು ಎಂಬ ಪ್ರಶ್ನೆಗೆ ಸಂಗೀತಾ ಶೃಂಗೇರಿ (Sangeetha Sringeri) ಮತ್ತು ಕಾರ್ತಿಕ್​ ಮಹೇಶ್​ (Karthik Mahesh) ಅವರು ನೀಡಿದ ಉತ್ತರ ಶಾಕಿಂಗ್​ ಆಗಿತ್ತು.

ಸಂಗೀತಾ ಪ್ರಕಾರ ಬಿಗ್​ ಬಾಸ್​ ಗೆಲ್ಲುವ ಸಾಧ್ಯತೆ ಇರುವ ಮೊದಲ ಸ್ಪರ್ಧಿ ತುಕಾಲಿ ಸಂತೋಷ್​. ಎರಡನೇ ಸ್ಪರ್ಧಿ ನಮ್ರತಾ ಗೌಡ. ಮೂರನೇ ಸ್ಪರ್ಧಿ ವಿನಯ್​ ಗೌಡ. ಈ ಪಟ್ಟಿಯಲ್ಲಿ ಕಾರ್ತಿಕ್​ ಹೆಸರು ಇಲ್ಲ! ಅದೇ ರೀತಿ ಕಾರ್ತಿಕ್​ ಕೂಡ ಸಂಗೀತಾ ಹೆಸರನ್ನು ಹೇಳಿಲ್ಲ. ಕಾರ್ತಿಕ್​ ಪ್ರಕಾರ ಬಿಗ್​ ಬಾಸ್​ ಗೆಲ್ಲುವ ಸಾಮರ್ಥ್ಯ ಇರುವ ಮೊದಲ ಸ್ಪರ್ಧಿ ವಿನಯ್​ ಗೌಡ, ಎರಡನೇ ಸ್ಪರ್ಧಿ ತನಿಷಾ ಕುಪ್ಪಂಡ, ಮೂರನೇ ಸ್ಪರ್ಧಿ ನಮ್ರತಾ ಗೌಡ.

ಆರಂಭದಲ್ಲಿ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ ನಡುವೆ ಒಳ್ಳೆಯ ಸ್ನೇಹ ಇತ್ತು. ಅವರ ಜೋಡಿಯನ್ನು ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದರು. ಪ್ರತಿ ಟಾಸ್ಕ್​ನಲ್ಲೂ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಿದ್ದರು. ಆದರೆ ನಂತರ ಎಲ್ಲವೂ ಬದಲಾಯಿತು. ಅವರಿಬ್ಬರ ನಡುವೆ ಬಿರುಕು ಮೂಡಿತು. ವಿರೋಧಿಗಳ ರೀತಿಯಲ್ಲಿ ವರ್ತಿಸಲು ಆರಂಭಿಸಿದರು.

ಇದನ್ನೂ ಓದಿ: ಸಂಗೀತಾ ಕ್ಯಾಪ್ಟನ್ ಆಗಬೇಕು ಎಂದ ವಿನಯ್ ಪತ್ನಿ

ಕಾರ್ತಿಕ್​ ಮಹೇಶ್​ ಬದಲಿಗೆ ಡ್ರೋನ್​ ಪ್ರತಾಪ್​ ಜೊತೆ ಈಗ ಸಂಗೀತಾ ಶೃಂಗೇರಿ ಹೆಚ್ಚು ಕ್ಲೋಸ್​ ಆಗಿದ್ದಾರೆ. ಕಾರ್ತಿಕ್​ ಅವರು ನಮ್ರತಾ ಗೌಡ ಮತ್ತು ವಿನಯ್​ ಗೌಡ ಜೊತೆ ಸ್ನೇಹ ಬೆಳೆಸಿದ್ದಾರೆ. ಸದ್ಯಕ್ಕೆ ಬಿಗ್​ ಬಾಸ್​ ಮನೆಯಲ್ಲಿ 84 ದಿನಗಳು ಕಳೆದಿವೆ. ವಿನಯ್​ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್​ ಮಹೇಶ್​, ತುಕಾಲಿ ಸಂತೋಷ್​ ಅವರು ಸ್ಟ್ರಾಂಗ್​ ಸ್ಪರ್ಧಿಗಳಾಗಿ ಗುರುತಿಸಿಕೊಂಡಿದ್ದಾರೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಈ ಶೋ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us