ಧಾರಾವಾಹಿಗಳ ಟಿಆರ್ಪಿಯಲ್ಲಿ ಪ್ರತಿ ವಾರ ಬದಲಾವಣೆ ಆಗುತ್ತಲೇ ಇರುತ್ತವೆ. ಈ ವಾರ ಮೊದಲಿದ್ದ ಧಾರಾವಾಹಿಗಳು ಮುಂದಿನ ವಾರ ಎರಡನೇ ಸ್ಥಾನಕ್ಕೆ ಜಿಗಿಯಬಹುದು. ಈಗ 17ನೇ ವಾರದ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದೆ. ಈ ಪೈಕಿ ಉಮಾಶ್ರೀ ನಟನೆಯ ‘ಪುಟ್ಟಕ್ಕನ ಮಕ್ಕಳು’ (Puttakana Makkalu Serial) ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡಿದೆ. ಈ ಮೂಲಕ ಸತತ ಎರಡನೇ ವಾರವೂ ಧಾರಾವಾಹಿಗೆ ಮೊದಲ ಪ್ಲೇಸ್ ಸಿಕ್ಕಿದೆ ಅನ್ನೋದು ವಿಶೇಷ.
‘ಪುಟ್ಟಕನ ಮಕ್ಕಳು’ ಧಾರಾವಾಹಿ ಪಕ್ಕಾ ಹಳ್ಳಿ ಕಥೆ. ಈ ಧಾರಾವಾಹಿಯಲ್ಲಿ ಉಮಾಶ್ರೀ ಜೊತೆ ಸಂಜನಾ ಬುರ್ಲಿ, ಧನುಷ್ ಎನ್ಎಸ್ ಮೊದಲಾದವರು ನಟಿಸುತ್ತಿದ್ದಾರೆ. ಈ ಧಾರಾವಾಹಿ ಟಿಆರ್ಪಿ ರೇಸ್ನಲ್ಲಿ ಎರಡನೇ ವಾರ ಈ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. ‘ಲಕ್ಷ್ಮೀ ನಿವಾಸ’ ಧಾರಾವಾಹಿ ಪ್ರಸಾರ ಕಾಣುವುದಕ್ಕೂ ಮೊದಲು ಒಂದು ವರ್ಷಕ್ಕೂ ಅಧಿಕ ಕಾಲ ಈ ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡು ಬಂದಿತ್ತು.
ಎರಡನೇ ಸ್ಥಾನದಲ್ಲಿ ‘ಲಕ್ಷ್ಮಿ ನಿವಾಸ’ ಧಾರಾವಾಹಿ ಇದೆ. ಇತ್ತೀಚೆಗೆ ಪ್ರಸಾರ ಕಂಡ ಈ ಧಾರಾವಾಹಿ ಕೆಲವೇ ಪಾಯಿಂಟ್ಗಳಲ್ಲಿ ಹಿಂದಿದೆ. ಹೀಗಾಗಿ ಟಿಆರ್ಪಿ ರೇಸ್ನಲ್ಲಿ ‘ಲಕ್ಷ್ಮಿ ನಿವಾಸ’ ಮತ್ತು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮಧ್ಯೆ ಭರ್ಜರಿ ಫೈಟ್ ಏರ್ಪಡುತ್ತಿದೆ.
ಮೂರನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್, ಮುಖ್ಯಮಂತ್ರಿ ಚಂದ್ರು ಮೊದಲಾದವರು ನಟಿಸಿರೋ ಈ ಧಾರಾವಾಹಿ ಕಳೆದ ಕೆಲವು ವಾರಗಳಿಂದ ಮೂರನೇ ಸ್ಥಾನ ಕಾಪಾಡಿಕೊಳ್ಳುತ್ತಾ ಬರುತ್ತಿದೆ. ಈ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ.
ನಾಲ್ಕನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಜೀ ಕನ್ನಡದಲ್ಲಿ ಇತ್ತೀಚೆಗೆ ಪ್ರಸಾರ ಆರಂಭಿಸಿದೆ. ಈ ಧಾರಾವಾಹಿಯನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಧಾರಾವಾಹಿಗೆ ಉತ್ತಮ ಟಿಆರ್ಪಿ ಸಿಕ್ಕಿದೆ.
ಇದನ್ನೂ ಓದಿ: ಟಿಆರ್ಪಿ ರೇಸ್ನಲ್ಲಿ ಈ ಧಾರಾವಾಹಿಗಳ ಮಧ್ಯೆ ಇದೆ ಭರ್ಜರಿ ಸ್ಪರ್ಧೆ; ಇಲ್ಲಿದೆ ಟಾಪ್ ಐದು ಸೀರಿಯಲ್
ಐದನೇ ಸ್ಥಾನದಲ್ಲಿ ‘ರಾಮಾಚಾರಿ’ ಧಾರಾವಾಹಿ ಇದೆ. ಟಾಪ್ ಐದರಲ್ಲಿ ಇರೋ ಕಲರ್ಸ್ ಕನ್ನಡದ ಏಕೈಕ ಧಾರಾವಾಹಿ ಎಂದರೆ ಅದು ‘ರಾಮಾಚಾರಿ’. ಈ ಧಾರಾವಾಹಿಯನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.