
ಬಿಗ್ ಬಾಸ್ (Bigg Boss) ಮನೆಯಲ್ಲಿ ರಘು ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿತ್ತು. ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುತ್ತಾ ಹಾಯಾಗಿದ್ದರು. ಆದರೆ, ಈ ವಾರ ಇವರ ಮಧ್ಯೆ ಇರುವ ಬಾಂಧವ್ಯ ಹಾಳಾಗಿದೆ. ಗಿಲ್ಲಿಯನ್ನು ರಘು ದ್ವೇಷಿಸೋಕೆ ಆರಂಭಿಸಿದ್ದಾರೆ. ಇದು ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಇಷ್ಟೊಂದು ದ್ವೇಷ ಏಕೆ ಎಂಬುದನ್ನು ಕೆಲವರು ಪ್ರಶ್ನೆ ಮಾಡಿದರು. ಅದಕ್ಕೆ ಅವರ ಕಡೆಯಿಂದಲೇ ಉತ್ತರ ಸಿಕ್ಕಿದೆ.
ಗಿಲ್ಲಿ ನಟ ಅವರು ಎಲ್ಲರನ್ನೂ ಕಾಲೆಳೆಯುತ್ತಾ ಇರುತ್ತಾರೆ. ಅವರ ಮಾತುಗಳಿಗೆ ಮಿತಿ ಎನ್ನುವುದೇ ಇರೋದಿಲ್ಲ. ಇದು ಅನೇಕ ಬಾರಿ ಸ್ಪಷ್ಟವಾಗಿ ಕಾಣಿಸಿದೆ.ಈ ವಾರ ಕಳಪೆ ಕೊಡುವಾಗ ಗಿಲ್ಲಿ ಹೆಸರನ್ನು ರಘು ಅವರು ತೆಗೆದುಕೊಂಡರು.ಇದು ಗಿಲ್ಲಿಗೆ ಬೇಸರ ಮೂಡಿಸಿದೆ. ಆದರೂ ಗೆಳೆಯ ಎಂದು ಕರೆಯೋದನ್ನು ಬಿಟ್ಟಿಲ್ಲ. ಆದರೆ, ಕಳಪೆ ಕಾರಣಕ್ಕೆ ಬಿಗ್ ಬಾಸ್ ಜೈಲಿನಲ್ಲಿರೋ ಗಿಲ್ಲಿಯನ್ನು ಭೇಟಿ ಮಾಡಲು ರಘು ಹೋಗಲೇ ಇಲ್ಲ. ಈ ಬಗ್ಗೆ ಮನೆಯವರು ಪ್ರಶ್ನೆ ಮಾಡಿದ್ದಾರೆ. ಆಗ ಅವರ ಕಡೆಯಿಂದ ವಿವರಣೆ ಸಿಕ್ಕಿದೆ.
‘ಈ ವಾರ ತುಂಬಾ ತಲೆ ಕೆಡಿಸಿದ್ದಾನೆ. ಎಷ್ಟು ಎಂದು ನಾನು ಕೇಳಿಸಿಕೊಳ್ಳಲಿ? ಕಾಮಿಡಿ ಹಾಗೂ ವೈಯಕ್ತಿಕ ವಿಷಯದ ಮಧ್ಯೆ ಒಂದು ಗೆರೆ ಇರುತ್ತದೆ. ಆ ಗೆರೆಯನ್ನು ಮೀರಬಾರದು. ನಾನು ನೋಡಿರುವ ಗಿಲ್ಲಿ ಇವನಲ್ಲ. ಆಚೆಯೂ ಅವನು ನಮ್ಮ ಜೊತೆ ಹೀಗೆ ಇರ್ತಾನಾ? ಹೊರಗೆ ಹೀಗೆ ಹೇಳಿದ್ರೆ ಹೊಡೆದು ಹೋಗ್ತಾರೆ’ ಎಂದು ರಘು ಹೇಳಿದ್ದಾರೆ.
‘ನನ್ನ ಹೈಟ್ ಬಗ್ಗೆ, ಬಾಡಿ ಬಗ್ಗೆ ಮಾತನಾಡುತ್ತಾನೆ. ನಾಲ್ಕು ಜನರ ಮುಂದೆ ಮಾತನಾಡಿದರೆ ಒಪ್ಪಿಕೊಳ್ಳಬಹುದು. ಆದರೆ, ಈ ಶೋನ ಕೋಟಿ ಕೋಟಿ ಜನರು ನೋಡುತ್ತಾ ಇರುತ್ತಾರೆ. ನನ್ನ ವರ್ಚಸ್ಸನ್ನು ಹಾಳು ಮಾಡಿಕೊಳ್ಳಲು ನನಗೆ ಇಷ್ಟ ಇಲ್ಲ’ ಎಂದು ರಘು ಹೇಳಿದರು.
ಇದನ್ನೂ ಓದಿ: ಮತ್ತೆ ಬಿಗ್ ಬಾಸ್ ಮನೆಯಲ್ಲಿ ಕಳಪೆ ಪಟ್ಟ ಪಡೆದ ಗಿಲ್ಲಿ ನಟ: ಎಡವಿದ್ದು ಎಲ್ಲಿ?
ರಘು ಹಾಗೂ ಗಿಲ್ಲಿ ಗೆಳೆತನವನ್ನು ಅನೇಕರು ಕೊಂಡಾಡಿದ್ದರು. ಆದರೆ, ಈಗ ರಘು ಈ ರೀತಿ ಮಾಡುತ್ತಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ವೀಕೆಂಡ್ನಲ್ಲಿ ಈ ವಿಷಯ ಚರ್ಚೆ ಆಗಿ ಇವರು ಸರಿ ಹೋಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.