‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ರೂಪೇಶ್ ಶೆಟ್ಟಿ (Roopesh Shetty) ಹಾಗೂ ಸಾನ್ಯಾ ಐಯ್ಯರ್ ಸಖತ್ ಕ್ಲೋಸ್ ಆಗಿದ್ದಾರೆ. ಇಬ್ಬರೂ ದೊಡ್ಮನೆಯಲ್ಲಿ ಸುತ್ತಾಡಿಕೊಂಡು ಹಾಯಾಗಿದ್ದಾರೆ. ರಾತ್ರಿ ಲೈಟ್ ಆಫ್ ಆದ ನಂತರವೂ ಇವರು ಹಗ್ ಮಾಡಿಕೊಂಡು ಮಾತನಾಡಿಕೊಂಡಿರುತ್ತಾರೆ. ಈಗ ಈ ಜೋಡಿಯ ರೊಮ್ಯಾನ್ಸ್ ಮಿತಿ ಮೀರಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಗಟ್ಟಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಸುದೀಪ್ ಆಡಿದ ಮಾತಿಗೆ ಗಳಗಳನೆ ಅತ್ತಿದ್ದಾರೆ ರೂಪೇಶ್.
ಇತ್ತೀಚೆಗೆ ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್ ಹಾಗೂ ಆರ್ಯವರ್ಧನ್ ಗುರೂಜಿ ಕ್ಯಾಪ್ಟನ್ಸಿ ರೂಂನಲ್ಲಿ ಕುಳಿತಿದ್ದರು. ಆಗಲೇ ಆರ್ಯವರ್ಧನ್ ಅವರ ಕ್ಯಾಪ್ಟನ್ಸಿ ಅವಧಿ ಮುಗಿದಿತ್ತು. ಆದಾಗ್ಯೂ ಈ ರೂಂ ಬಳಕೆ ಮಾಡಿದ್ದರು ರೂಪೇಶ್ ಹಾಗೂ ಸಾನ್ಯಾ. ರೂಪೇಶ್ ಮೈಮೇಲೆ ಸಾನ್ಯಾ ಮಲಗಿದ್ದರು. ಈ ಪ್ರೋಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ. ಈ ಘಟನೆ ವಿಚಾರಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.
‘ಕ್ಯಾಪ್ಟನ್ಸಿ ಅವಧಿ ಮುಗಿದ ನಂತರ ನೀವು ಪಿಕ್ನಿಕ್ ಮಾಡ್ತಾ ಇದ್ರಿ. ಆ ರೂಂಗೆ ಒಂದು ಗೌರವ ಇದೆ. ಅದು ಪಿಕ್ನಿಕ್ ಸ್ಪಾಟ್ ಅಲ್ಲ’ ಎಂದರು ಸುದೀಪ್. ಇದಕ್ಕೆ ರೂಪೇಶ್ ಸ್ಪಷ್ಟನೆ ನೀಡುವ ಕೆಲಸ ಮಾಡಿದರು. ‘ನಮ್ಮ ಉದ್ದೇಶ ಆ ರೀತಿ ಇರಲಿಲ್ಲ. ನಾನು ಯಾವಾಗಲೂ ಆ ರೀತಿ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಲು ಬಂದರು ರೂಪೇಶ್.
‘ನೀವು ಮಿತಿಮೀರಿ ನಡೆದುಕೊಂಡಿದ್ದೀರಿ. ಆ ರೀತಿ ಆಗಿದ್ದಕ್ಕಾಗಿಯೇ ನಾವು ಹೇಳ್ತಿರೋದು. ನೀವು ಮಧ್ಯರಾತ್ರಿ ಹಗ್ ಮಾಡಿಕೊಳ್ತೀರಿ. ಅದಕ್ಕೆ ನಾವು ಯಾವಾಗಲೂ ಅಪಸ್ವರ ತೆಗೆದಿಲ್ಲ. ಅದು ಇಲ್ಲಿ ಸಮಸ್ಯೆ ಅಲ್ಲ. ಈ ಮೊದಲು ಅನೇಕರು ಈ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ, ಈಗ ಇದನ್ನು ಹೇಳ್ತಿದೀವಿ ಎಂದರೆ ಅರ್ಥ ಮಾಡಿಕೊಳ್ಳಿ. ನೀವು ಈ ರೀತಿ ಮಾಡ್ತಾ ಇರೋದ್ರಿಂದಲೇ ನಮಗೆ ಕಟೆಂಟ್ ಸಿಗುತ್ತಿದೆ ಎಂದುಕೊಂಡರೆ ಈ ಮನೆ ಅದಕ್ಕಲ್ಲ’ ಎಂದು ಸುದೀಪ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿತು ರೂಪೇಶ್ ಶೆಟ್ಟಿ-ಸಾನ್ಯಾ ಐಯ್ಯರ್ ಆಪ್ತತೆ; ಇಲ್ಲಿದೆ ವಿಡಿಯೋ ಸಾಕ್ಷಿ
‘ಬಿಗ್ ಬಾಸ್ ಒಟಿಟಿ’ಯಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಸಖತ್ ಕ್ಲೋಸ್ ಆದರು. ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆಯಿತು. ಈ ಕಾರಣಕ್ಕೂ ಇಬ್ಬರೂ ಒಟಿಟಿ ಸೀಸನ್ನಲ್ಲಿ ಮಿಂಚಿದ್ದಾರೆ. ಈಗ ಟಿವಿ ಸೀಸನ್ಗೆ ಇಬ್ಬರೂ ಎಂಟ್ರಿ ಕೊಟ್ಟಾಗಿದೆ. ಇವರು ಮನೆಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಈಗ ಇಬ್ಬರ ಮಧ್ಯೆ ಆಪ್ತತೆ ಹೆಚ್ಚುತ್ತಿರುವುದನ್ನು ಗಮನಿಸಿದ ಸುದೀಪ್ ಎಚ್ಚರಿಕೆ ನೀಡಿದ್ದಾರೆ.
Published On - 10:13 pm, Sat, 15 October 22