
ಕಿರುತೆರೆ ಪ್ರೇಕ್ಷಕರಿಗೆ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ಮೇಲೆ ಎಲ್ಲಿಲ್ಲದ ಆಸಕ್ತಿ. ಯಾಕೆಂದರೆ ಬೇರೆಲ್ಲ ಶೋಗಗಳಿಂತಲೂ ಇದು ಸಖತ್ ಭಿನ್ನವಾಗಿರುತ್ತದೆ. ಹಿಂದಿ, ಕನ್ನಡ, ತಮಿಳು ಮುಂತಾದ ಭಾಷೆಗಳಲ್ಲಿ ಬಿಗ್ ಬಾಸ್ ಶೋ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್ (Salman Khan), ಕನ್ನಡದಲ್ಲಿ ಕಿಚ್ಚ ಸುದೀಪ್, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ, ತಮಿಳಿನಲ್ಲಿ ಕಮಲ್ ಹಾಸನ್.. ಹೀಗೆ ಘಟಾನುಘಟಿ ಸ್ಟಾರ್ ಹೀರೋಗಳು ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಪ್ರತಿ ಸೀಸನ್ನಲ್ಲೂ ಒಂದಷ್ಟು ಹೊಸತನವನ್ನು ಪರಿಚಯಿಸಲಾಗುತ್ತಿದೆ. ಈ ಬಾರಿ ‘ಹಿಂದಿ ಬಿಗ್ ಬಾಸ್ 16’ (Bigg Boss 16) ತುಂಬ ಡಿಫರೆಂಟ್ ಆಗಿರಲಿದೆ. ಇದರ ಸ್ವರೂಪವೇ ಬದಲಾಗಲಿದೆ ಎಂಬುದಕ್ಕೆ ಹೊಸ ಪ್ರೋಮೋ ಮೂಲಕ ಸುಳಿವು ನೀಡಲಾಗಿದೆ.
ಹಲವು ವರ್ಷಗಳಿಂದ ಸಲ್ಮಾನ್ ಖಾನ್ ಅವರು ಹಿಂದಿ ಬಿಗ್ ಬಾಸ್ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ಎಪಿಸೋಡ್ಗೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ 16ನೇ ಸೀಸನ್ ಶುರುವಾಗಲಿದೆ. ಕಲರ್ಸ್ ಟಿವಿಯಲ್ಲಿ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಈ ವರ್ಷದ ಕಾರ್ಯಕ್ರಮ ಪೂರ್ತಿ ಭಿನ್ನವಾಗಿರಲಿದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಹೊಸ ಪ್ರೋಮೋದಲ್ಲಿ ಸಲ್ಮಾನ್ ಖಾನ್ ಅವರು ಮೊಗ್ಯಾಂಬೋ ಅವತಾರ ತಾಳಿದ್ದಾರೆ. ‘ಮೊಗ್ಯಾಂಬೋಗೆ ಇನ್ಮುಂದೆ ಖುಷಿ ಆಗುವುದಿಲ್ಲ. ಯಾಕೆಂದರೆ ಇನ್ಮುಂದೆ ಎಲ್ಲರಿಗೂ ಭಯ ಆಗಲಿದೆ. ಆ ಬಾರಿ ಆಟ ಬದಲಾಗಲಿದೆ. ಈಗ ಸ್ವತಃ ಬಿಗ್ ಬಾಸ್ ಆಟ ಆಡ್ತಾರೆ’ ಎಂದು ಸಲ್ಮಾನ್ ಖಾನ್ ಹೇಳಿರುವ ಪ್ರೋಮೋ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅಕ್ಟೋಬರ್ 1ರಂದು ಈ ಶೋ ಪ್ರಸಾರ ಆರಂಭಿಸಲಿದೆ.
ಕಿರುತೆರೆ, ಸಿನಿಮಾ, ಸೋಶಿಯಲ್ ಮೀಡಿಯಾ ಮುಂತಾದ ಕ್ಷೇತ್ರಗಳಿಂದ ವಿವಿಧ ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಯಾರೆಲ್ಲ ದೊಡ್ಮನೆಗೆ ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಸಲ್ಮಾನ್ ಖಾನ್ ಅವರು ಸಿನಿಮಾ ಕೆಲಸಗಳ ನಡುವೆ ಬಿಗ್ ಬಾಸ್ ನಿರೂಪಣೆಗೆ ಸಮಯ ಮೀಸಲಿಡುತ್ತಾರೆ. ಅವರನ್ನು ನೋಡಲು ಪ್ರತಿ ವೀಕೆಂಡ್ನಲ್ಲಿ ಅಭಿಮಾನಿಗಳು ಟಿವಿ ಮುಂದೆ ಹಾಜರಾಗುತ್ತಾರೆ.
ಕನ್ನಡದಲ್ಲಿ ಬಿಗ್ ಬಾಸ್ 9ನೇ ಸೀಸನ್ ಶುರುವಾಗಿದೆ. ಒಟ್ಟು 18 ಸ್ಪರ್ಧಿಗಳ ನಡುವೆ ಪೈಪೋಟಿ ಆರಂಭ ಆಗಿದೆ. ಎಂದಿನ ಜೋಶ್ನಲ್ಲಿ ಕಿಚ್ಚ ಸುದೀಪ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಮೊದಲ ವಾರ ಒಟ್ಟು 12 ಮಂದಿ ನಾಮಿನೇಟ್ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:15 am, Mon, 26 September 22