ಪ್ರತಾಪ್ ಬಗ್ಗೆಯೇ ಚುಚ್ಚು ಮಾತು; ವಿನಯ್ ಚಮಚ ಆಗಿ ಬದಲಾಗೋದ್ರಾ ಸಂಗೀತಾ?

ಸಂಗೀತಾ ಶೃಂಗೇರಿ ಅವರು ವಿನಯ್ ವಿರುದ್ಧ ತೊಡೆತಟ್ಟಿದ್ದರು. ಅವರು ಅನ್ಯಾಯ ಎದುರಿಸುತ್ತಿದ್ದಾರೆ, ಅನ್ಯಾಯ ಮೆಟ್ಟಿ ನಿಲ್ಲುತ್ತಿದ್ದಾರೆ ಎಂದು ಅನೇಕರು ಮಾತನಾಡಿಕೊಂಡಿದ್ದರು. ಆದರೆ, ಈಗ ಅವರು ವಿನಯ್ ಜೊತೆಯೇ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ಲ, ವಿನಯ್ ಅವರ ಚಮಚ ಆಗಿ ಬದಲಾಗುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಪ್ರತಾಪ್ ಬಗ್ಗೆಯೇ ಚುಚ್ಚು ಮಾತು; ವಿನಯ್ ಚಮಚ ಆಗಿ ಬದಲಾಗೋದ್ರಾ ಸಂಗೀತಾ?
ಪ್ರತಾಪ್-ಸಂಗೀತಾ

Updated on: Nov 24, 2023 | 9:05 AM

ಕಾರ್ತಿಕ್ (Karthik Mahesh) ಅವರ ಗ್ಯಾಂಗ್​ನ ತೊರೆದ ಕಾರಣ ಸಂಗೀತಾ ಅವರು ವಿನಯ್ ಗುಂಪಿನ ಜೊತೆ ಸೇರಿಕೊಂಡಿದ್ದಾರೆ. ಆದರೆ, ಇದು ಅವರ ಆಟದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಮೊದಲಿನಿಂದಲೂ ದೀದಿ ದೀದಿ ಎಂದು ಸಂಗೀತಾನ ಬೆಂಬಲಿಸುತ್ತಲೇ ಬರುತ್ತಿದ್ದಾರೆ ಪ್ರತಾಪ್. ಅವರ ವಿರುದ್ಧವೇ ಸಂಗೀತಾ (Sanageetha Sringeri) ಚುಚ್ಚು ಮಾತುಗಳನ್ನು ಆಡಿದ್ದಾರೆ. ಸದ್ಯ ಈ ಪ್ರೋಮೋ ವೈರಲ್ ಆಗಿದೆ. ಸಂಗೀತಾ ವಿರುದ್ಧ ಎಲ್ಲರೂ ಅಪಸ್ವರ ತೆಗೆದಿದ್ದಾರೆ.

ಸಂಗೀತಾ ಶೃಂಗೇರಿ ಅವರು ವಿನಯ್ ವಿರುದ್ಧ ತೊಡೆತಟ್ಟಿದ್ದರು. ಅವರು ಅನ್ಯಾಯ ಎದುರಿಸುತ್ತಿದ್ದಾರೆ, ಅನ್ಯಾಯ ಮೆಟ್ಟಿ ನಿಲ್ಲುತ್ತಿದ್ದಾರೆ ಎಂದು ಅನೇಕರು ಮಾತನಾಡಿಕೊಂಡಿದ್ದರು. ಆದರೆ, ಈಗ ಅವರು ವಿನಯ್ ಜೊತೆಯೇ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ಲ, ವಿನಯ್ ಅವರ ಚಮಚ ಆಗಿ ಬದಲಾಗುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಬಾತ್​ರೂಂ ವಿಚಾರಕ್ಕೆ ವಿನಯ್ ಹಾಗೂ ಸ್ನೇಹಿತ್ ಅಡ್ಜಸ್ಟ್​ಮೆಂಟ್ ಮಾಡಿಕೊಂಡಿದ್ದರು. ಇದನ್ನು ಪ್ರತಾಪ್ ಅವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸ್ನೇಹಿತ್ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಇದನ್ನು ತಮ್ಮ ಗುಂಪಿನಲ್ಲಿ ಹೇಳಿಕೊಂಡು ನಕ್ಕಿದ್ದಾರೆ ವಿನಯ್. ‘ಇದೊಂದು ವಿಚಾರ ಇಟ್ಟುಕೊಂಡ್ರೆ ಕೊನೆಯವರೆಗೂ ಇದನ್ನೇ ಹೇಳ್ತಾ ಇರ್ತಾನೆ’ ಎಂದು ನಮ್ರತಾ ಹೇಳಿದ್ದಾರೆ. ‘ಒಂದು ವಿಚಾರ ಕಚ್ಕೊಂಡ್ರೆ ಮುಗ್ದೋಯ್ತು’ ಎಂದು ಸಂಗೀತಾ ನಗುತ್ತಾ ಹೇಳಿದ ಮಾತು ಅನೇಕರ ಕೋಪಕ್ಕೆ ಕಾರಣ ಆಗಿದೆ.

ಸಂಗೀತಾ ಶೃಂಗೇರಿ ಅವರು ತುಂಬಾನೇ ಬದಲಾಗಿದ್ದಾರೆ. ವಿನಯ್ ಅವರ ಗುಂಪಿನ ಜೊತೆ ಸೇರಿದಾಗಿನಿಂದಲೂ ಅವರನ್ನು ವೀಕ್ಷಕರು ನೋಡುತ್ತಿರುವ ರೀತಿ ಬದಲಾಗಿದೆ. ಅವರು ಇನ್​ಸ್ಟಾಗ್ರಾಮ್​ನಲ್ಲಿ ಈಗಾಗಲೇ 11 ಸಾವಿರ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ದಿನ ಕಳೆದಂತೆ ಅವರ ಹಿಂಬಾಲಕರ ಸಂಖ್ಯೆ ಕಡಿಮೆ ಆಗುತ್ತಲೇ ಇದೆ. ಇದೇ ರೀತಿ ಆದರೆ, ಅವರು ಶೀಘ್ರದಲ್ಲೇ ಮನೆಯಿಂದ ಎಲಿಮಿನೇಟ್ ಆದರೂ ಅಚ್ಚರಿ ಏನಿಲ್ಲ.


ಇದನ್ನೂ ಓದಿ: ‘ಪ್ರತೀ ಬಾರಿ ಇದೇ ಡ್ರಾಮಾ’; ಹೊಡೆದಾಟದ ಹಂತಕ್ಕೆ ಹೋಯ್ತು ಬಿಗ್ ಬಾಸ್ ಟಾಸ್ಕ್​

ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೋಮೋ ಗಮನ ಸೆಳೆಯುತ್ತಿದೆ. ಇಂದು (ನವೆಂಬರ್ 24) ರಾತ್ರಿ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us