‘ಬಿಗ್ ಬಾಸ್ ಕನ್ನಡ ಸೀಸನ್ 9’ರ (BBK 9) ಫಿನಾಲೆ ಮುಗಿದು ಕೆಲವು ದಿನ ಕಳೆದಿದೆ. ದೊಡ್ಮನೆಯಿಂದ ಹೊರಬಂದ ವಿನ್ನರ್ ರೂಪೇಶ್ ಶೆಟ್ಟಿ ಅವರನ್ನು ಫ್ಯಾನ್ಸ್ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಿದೆ. ಹಲವು ಆಫರ್ಗಳು ರೂಪೇಶ್ ಅವರನ್ನು ಹುಡುಕಿಕೊಂಡು ಬಂದಿವೆ. ಈಗ ರೂಪೇಶ್ ಶೆಟ್ಟಿ (Roopesh Shetty) ಅವರು ಹಲವು ವಿಚಾರಗಳ ಬಗ್ಗೆ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ವಿಶೇಷವಾಗಿ ಸಾನ್ಯಾ ಐಯ್ಯರ್ ಜತೆಗಿನ ಫ್ರೆಂಡ್ಶಿಪ್ ಕುರಿತು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಒಟಿಟಿ’ ಸೀಸನ್ನಲ್ಲಿ ರೂಪೇಶ್ ಹಾಗೂ ಸಾನ್ಯಾ ಐಯ್ಯರ್ ಭೇಟಿ ಆದರು. ಹಲವು ವಿಚಾರಗಳಲ್ಲಿ ಇಬ್ಬರ ಮಧ್ಯೆ ಸಾಮ್ಯತೆ ಇದ್ದಿದ್ದರಿಂದ ಕ್ಲೋಸ್ ಆದರು. ಇವರ ಮಧ್ಯೆ ಆಪ್ತತೆ ಬೆಳೆಯಿತು. ಟಿವಿ ಸೀಸನ್ಗೆ ಇಬ್ಬರೂ ಕಾಲಿಟ್ಟರು. ಇವರು ಹಲವು ವಾರ ದೊಡ್ಮನೆಯಲ್ಲಿ ಒಟ್ಟಾಗಿ ಕಾಲ ಕಳೆದಿದ್ದಾರೆ. ಟಿವಿ ಸೀಸನ್ನ ಮಧ್ಯದಲ್ಲಿ ಸಾನ್ಯಾ ಐಯ್ಯರ್ ಔಟ್ ಆದರು. ಇದು ರೂಪೇಶ್ಗೆ ಸಾಕಷ್ಟು ಬೇಸರ ಮೂಡಿಸಿತ್ತು.
ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಮನಸ್ಥಿತಿ ಬದಲಾಗಬಹುದು. ಈ ವಿಚಾರದಲ್ಲಿ ರೂಪೇಶ್ ಶೆಟ್ಟಿಗೆ ಆತಂಕ ಕಾಡಿತ್ತು. ಸಾನ್ಯಾ ಐಯ್ಯರ್ ಅವರು ಬದಲಾಗಬಹುದು ಎಂದು ರೂಪೇಶ್ ಶೆಟ್ಟಿ ಆತಂಕ ಹೊರಹಾಕಿದ್ದರು. ಸಾನ್ಯಾ ದೊಡ್ಮನೆಯಿಂದ ಹೊರ ಬಂದ ನಂತರ ಬದಲಾದರಾ? ಈ ಬಗ್ಗೆ ರೂಪೇಶ್ ಅವರು ಟಿವಿ9 ಕನ್ನಡದ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: BBK 9: ರೂಪೇಶ್ ಶೆಟ್ಟಿ-ರಾಕೇಶ್ ಅಡಿಗಗೆ ಒಟಿಟಿ ಸೀಸನ್ ಸಹಕಾರಿ ಆಗಿದ್ದು ಹೇಗೆ? ಇಲ್ಲಿದೆ ಲೆಕ್ಕಾಚಾರ
‘ಸಾನ್ಯಾ ಐಯ್ಯರ್ ಬದಲಾಗಿಲ್ಲ. ನಮ್ಮ ಮಧ್ಯೆ ಶುದ್ಧ ಸ್ನೇಹವಿದೆ. ಮನಸ್ಸಿಂದ ಫ್ರೆಂಡ್ಶಿಪ್ ಮಾಡಿದ್ರೆ ಅವರು ಯಾವಾಗಲೂ ಬದಲಾಗಲ್ಲ. ಬಿಗ್ ಬಾಸ್ ಫಿನಾಲೆ ಮುಗಿದ ನಂತರ ಇಬ್ಬರೂ ಭೇಟಿ ಆದೆವು. ಸದ್ಯ ನನ್ನ ಕೈಯಲ್ಲಿ ಮೊಬೈಲ್ ಇಲ್ಲ. ಹೀಗಾಗಿ, ಸಾನ್ಯಾ ಜತೆ ಸಂಪರ್ಕ ಸಾಧಿಸೋಕೆ ಸಾಧ್ಯವಾಗಿಲ್ಲ. ನಾನು ಗೆದ್ದಿರೋದು ಸಾನ್ಯಾಗೆ ಖುಷಿ ನೀಡಿದೆ’ ಎಂದಿದ್ದಾರೆ ರೂಪೇಶ್ ಶೆಟ್ಟಿ.
ರೂಪೇಶ್ ಶೆಟ್ಟಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ವಿನ್ನರ್. ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. ಇಬ್ಬರೂ ಒಟಿಟಿ ಸೀಸನ್ನಿಂದ ಟಿವಿ ಸೀಸನ್ಗೆ ಬಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ