‘ಸೀತಾ ರಾಮ’ ಬೆನ್ನಲ್ಲೇ ವೈಷ್ಣವಿ ಗೌಡ ಹೊಸ ಧಾರಾವಾಹಿ? ಹಿಂಟ್ ಕೊಟ್ಟ ಚಿತ್ಕಲಾ ಬೀರಾದಾರ್

ಸೀತಾ ರಾಮ ಧಾರಾವಾಹಿ ಪೂರ್ಣಗೊಳ್ಳುತ್ತಿದ್ದಂತೆ, ನಟಿ ವೈಷ್ಣವಿ ಗೌಡ ಅವರ ಮುಂದಿನ ಯೋಜನೆ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ವೈಷ್ಣವಿ ಅವರು ತಮ್ಮ ಸೀತಾ ರಾಮ ತಂಡದೊಂದಿಗೆ ಫೋಟೋಗಳನ್ನು ಹಂಚಿಕೊಂಡು, ಶೀಘ್ರದಲ್ಲೇ ಹೊಸ ಯೋಜನೆಯಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಹಿರಿಯ ನಟಿ ಚಿತ್ಕಲಾ ಬೀರಾದಾರ್ ಅವರು ವೈಷ್ಣವಿ ಅವರ ಹೊಸ ಯೋಜನೆಯ ಕುರಿತು ಸುಳಿವು ನೀಡಿದ್ದಾರೆ.

‘ಸೀತಾ ರಾಮ’ ಬೆನ್ನಲ್ಲೇ ವೈಷ್ಣವಿ ಗೌಡ ಹೊಸ ಧಾರಾವಾಹಿ? ಹಿಂಟ್ ಕೊಟ್ಟ ಚಿತ್ಕಲಾ ಬೀರಾದಾರ್
ಸೀತಾ ರಾಮ
Edited By:

Updated on: May 26, 2025 | 12:00 PM

‘ಸೀತಾ ರಾಮ’ ಧಾರಾವಾಹಿ (Seetha Raama Serial) ಶೀಘ್ರವೇ ಪೂರ್ಣಗೊಳ್ಳಲಿದೆ. 460ಕ್ಕೂ ಅಧಿಕ ಎಪಿಸೋಡ್​ಗಳು ಪ್ರಸಾರ ಕಂಡಿರೋಧು ಈ ಧಾರಾವಾಹಿಯ ಹೆಚ್ಚುಗಾರಿಕೆ. ಈಗ ‘ಸೀತಾ ರಾಮ’ ಧಾರಾವಾಹಿಯ ಕಥಾ ನಾಯಕ ವೈಷ್ಣವಿ ಗೌಡ ಅವರ ಮುಂದಿನ ಯೋಜನೆ ಏನು ಎಂಬುದು ಅಭಿಮಾನಿಗಳ ಕುತೂಹಲ ಆಗಿತ್ತು. ಇದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ವೈಷ್ಣವಿ ಗೌಡ ಅವರ ಹೊಸ ಪ್ರಾಜೆಕ್ಟ್ ಘೋಷಣೆ ಮಾಡುತ್ತಿದ್ದಾರಂತೆ. ಈ ಬಗ್ಗೆ ಹಿರಿಯ ನಟಿ ಚಿತ್ಕಲಾ ಬೀರಾದಾರ್ ಅವರು ಹಿಂಟ್ ಕೊಟ್ಟಿದ್ದಾರೆ.

‘ಸೀತಾ ರಾಮ’ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ಪೂಜಾ ಲೋಕೇಶ್ ಮೊದಲಾದವರು ನಟಿಸಿದ್ದಾರೆ. ಈ ಧಾರಾವಾಹಿಯ ಕೊನೆಯ ದಿನದ ಶೂಟ್ ಇತ್ತೀಚೆಗೆ ನಡೆದಿದ್ದು, ಕುಂಬಳಕಾಯಿ ಒಡೆದು ಆಗಿದೆ. ಈ ವಿಚಾರದ ಬಗ್ಗೆ ಅಭಿಮಾನಿಗಳಿಗೆ ಮಾತ್ರವಲ್ಲ ತಂಡದವರಿಗೂ ಬೇಸರ ಇದೆ. ಆದರೆ, ಆರಂಭ ಆದ ಧಾರಾವಾಹಿ ಪೂರ್ಣಗೊಳ್ಳೋದು ಅನಿವಾರ್ಯ. ಆದರೆ, ವೈಷ್ಣವಿ ಅಭಿಮಾನಿಗಳು ಬೇಸರ ಮಾಡಿಕೊಳ್ಳೋ ಅಗತ್ಯ ಇಲ್ಲ.

ಇದನ್ನೂ ಓದಿ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು
‘ತಿಂಗಳಿಗೆ 40 ಲಕ್ಷ ಜೀವನಾಂಶ ಕೊಡಿ’; ಬೇಡಿಕೆ ಇಟ್ಟ ಜಯಮ್​ ರವಿ ಪತ್ನಿ
‘ಸೀತಾ ರಾಮ’ಗೆ ಕೊನೆಯ ದಿನದ ಶೂಟಿಂಗ್; ಸೀರಿಯಲ್ ಪೂರ್ಣಗೊಳ್ಳಲು ಕಾರಣವೇನು?

‘ಸೀತಾ ರಾಮ’ ಕಲಾವಿದರ ಜೊತೆಗಿನ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ ವೈಷ್ಣವಿ ಗೌಡ. ಇದಕ್ಕೆ ಅವರು ಸುಂದರ ಕ್ಯಾಪ್ಶನ್ ನೀಡಿದ್ದಾರೆ.  ‘ಈ ಅಂತ್ಯವು ಉತ್ತಮವಾದದ್ದರ ಆರಂಭ ಮಾತ್ರ. ಇದು ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಧಾರಾವಾಹಿಗಳಲ್ಲಿ ಒಂದು. ಇದನ್ನು ಮಾಡಿದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಸೀತಾ ಆಗಿ ನನ್ನ ಪಾತ್ರ ಮುಗಿಸುತ್ತಿದ್ದೇನೆ. ಶೀಘ್ರದಲ್ಲೇ ಒಂದೊಳ್ಳೆಯ ಯೋಜನೆಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದು ಬರೆದುಕೊಂಡಿದ್ದಾರೆ ವೈಷ್ಣವಿ.

ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿಗೆ ಕೊನೆಯ ದಿನದ ಶೂಟಿಂಗ್; ಸೀರಿಯಲ್ ಪೂರ್ಣಗೊಳ್ಳಲು ಕಾರಣವೇನು?

ಇದಕ್ಕೆ ಕಾಮೆಂಟ್ ಮಾಡಿರೋ ಚಿತ್ಕಲಾ ಅವರು, ‘ಹೌದು, ಹೌದು ನನಗೆ ಗೊತ್ತು’ ಎಂದಿದ್ದಾರೆ. ವೈಷ್ಣವಿ ಅವರ ಹೊಸ ಯೋಜನೆ ಬಗ್ಗೆ ಚಿತ್ಕಲಾಗೆ ಗೊತ್ತಾ? ವೈಷ್ಣವಿ ಶೀಘ್ರವೇ ಹೊಸ ಧಾರಾವಾಹಿ ಘೋಷಣೆ ಮಾಡುತ್ತಾರಾ? ಇದು ಅಭಿಮಾನಿಗಳಿಗೆ ಮೂಡಿದ ಸದ್ಯದ ಪ್ರಶ್ನೆ. ಮುಂದಿನ ದಿನಗಳಲ್ಲಿ ವೈಷ್ಣವಿ ಗೌಡ ಅವರ ಸಂಪೂರ್ಣ ಗಮನ ಮದುವೆ ಮೇಲೆ ಇರಲಿದೆ. ಶೀಘ್ರವೇ ಅವರು ಅನುಕೂಲ್ ಮಿಶ್ರಾ ಅವರನ್ನು ವರಿಸಲಿದ್ದಾರೆ. ಆ ಬಳಿಕ ಅವರು ಹೊಸ ಯೋಜನೆ ಘೋಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:55 am, Thu, 22 May 25