Seetha Raama: ಭಾರ್ಗವಿ ಮಾಡಿದ ಉಪಾಯಕ್ಕೆ ರಾಮ್ ಮತ್ತು ಸೀತಾ ಬಲಿಯಾಗುತ್ತಾರಾ?

Seetha Raama: ಭಾರ್ಗವಿ ತನ್ನ ಪ್ಲಾನ್​ಗೆ ಅನುಗುಣವಾಗಿ ಆಫೀಸ್​ಗೆ ಹೊರಡುತ್ತಾಳೆ. ಜೊತೆಗೆ ಅವಳ ಗಂಡನನ್ನು ಕರೆದುಕೊಂಡು ಹೋಗುತ್ತಾಳೆ. ಸೀತಾಳಿಗೆ ಅಡ್ವಾನ್ಸ್ ಸ್ಯಾಲರಿ ಸಿಗುತ್ತಾ? ರಾಮ್ ಆಫೀಸ್ ನಲ್ಲಿ ಬಾಸ್ ಅಲ್ಲ ಎನ್ನುವ ವಿಷಯ ಭಾರ್ಗವಿ ತಿಳಿಯುತ್ತಾ? ಕಾದು ನೋಡೋಣ.

Seetha Raama: ಭಾರ್ಗವಿ ಮಾಡಿದ ಉಪಾಯಕ್ಕೆ ರಾಮ್ ಮತ್ತು ಸೀತಾ ಬಲಿಯಾಗುತ್ತಾರಾ?
ಗಗನ್​ ಚಿನ್ನಪ್ಪ, ವೈಷ್ಣವಿ ಗೌಡ
Edited By:

Updated on: Sep 26, 2023 | 7:22 AM

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 52: ಸಿಹಿಯ ಬಹುದೊಡ್ಡ ಆಸೆಯಾದ ಹೆಲಿಕಾಪ್ಟರ್ ಸವಾರಿಗೆ ಶ್ರೀರಾಮ್ ಎಲ್ಲ ಸಿದ್ಧತೆ ಮಾಡಿ ಸೀತಾ ಮತ್ತು ಸಿಹಿಯನ್ನು ಕರೆದುಕೊಂಡು ಹೋಗುತ್ತಾನೆ. ಸೀತಾ ಏನು ಹೇಳಿದರೂ ಅದನ್ನು ಕೇಳಿಸಿಕೊಳ್ಳದ ರಾಮ್, ಸಿಹಿಯ ಖುಷಿ ನೋಡಲು ಹೆಲಿಕಾಪ್ಟರ್​ನಲ್ಲಿ ಸುತ್ತಾಡಿಸುತ್ತಾನೆ. ಬಳಿಕ ಅವಳನ್ನು ನೋಡಿದ ಸೀತಾ, ರಾಮನಿಗೆ  ಮನಃಪೂರ್ವಕವಾಗಿ ಧನ್ಯವಾದ ಹೇಳುತ್ತಾಳೆ. ಹೆಲಿಕಾಪ್ಟರ್​ನಲ್ಲಿ ಹೋಗಿ ಬಂದ ಸಿಹಿಯ ಖುಷಿಗೆ ಪಾರವೇ ಇರುವುದಿಲ್ಲ. ಅದೇ ಖುಷಿಯಲ್ಲಿ ರಾಮನನ್ನು ತಬ್ಬಿ ಮುತ್ತು ಕೊಡುತ್ತಾಳೆ.

ತಾಯಿಯ ಹುಟ್ಟಿದ ಹಬ್ಬದ ನೆಪಮಾಡಿ ಭಾರ್ಗವಿ ರಾಮ್​ನನ್ನು ದೇವಸ್ಥಾನಕ್ಕೆ ಕಳುಹಿಸುತ್ತಾಳೆ. ಆಫೀಸ್​ನಿಂದ ಯಾವುದೇ ರೀತಿಯ ಸುದ್ದಿ ತಿಳಿಯದಂತೆ ನೋಡಿಕೊಳ್ಳಲು ಅವನ ಫೋನ್ ಅನ್ನು ಇಟ್ಟುಕೊಂಡು ಅವನನ್ನು ದೇವಾಲಯಕ್ಕೆ ಕಳುಹಿಸುತ್ತಾಳೆ. ಇನ್ನು ಪಿಕ್ನಿಕ್​ಗೆ ಹೋಗಲು ಒಪ್ಪಿಗೆ ಕೇಳಿದ್ದ ಸಿಹಿಗೆ, ಸೀತಮ್ಮನ ಒಪ್ಪಿಗೆ ಸಿಗದೇ ಅಸಮಾಧಾನಗೊಳ್ಳುತ್ತಾಳೆ. ಅಜ್ಜ, ಅಜ್ಜಿ ದುಡ್ಡು ಕೊಟ್ಟರೂ ಕೂಡ ಅದನ್ನು ತಿರಸ್ಕರಿಸುತ್ತಾಳೆ.

ಇದನ್ನೂ ಓದಿ: ‘ಸೀತಾ ರಾಮ’ ನಟಿ ವೈಷ್ಣವಿ ಹೊಸ ಫೋಟೋ ನೋಡಿ ವಾವ್​ ಎಂದ ಫ್ಯಾನ್ಸ್​

ಸೀತಾ ಮನೆಗೆ ಬಂದ ಅವಳ ಗೆಳತಿ ಪ್ರಿಯಾ ನಿನಗೆ ಇವತ್ತು ಹಣ ಬರುತ್ತೆ ಎಂದು ಹೇಳಿ ಅವಳೂ ಖುಷಿ ಪಡುತ್ತಾಳೆ. ನಿನ್ನ ಕಷ್ಟ ನನ್ನ ಜೊತೆ ಹೇಳಬಹುದಿತ್ತು ಎಂದು ಕೊರಗುತ್ತಾಳೆ. ಇನ್ನು ಭಾರ್ಗವಿ ತನ್ನ ಪ್ಲಾನ್​ಗೆ ಅನುಗುಣವಾಗಿ ಆಫೀಸ್ ಗೆ ಹೊರಡುತ್ತಾಳೆ. ಜೊತೆಗೆ ಅವಳ ಗಂಡನನ್ನು ಕರೆದುಕೊಂಡು ಹೋಗುತ್ತಾಳೆ. ಸೀತಾಳಿಗೆ ಅಡ್ವಾನ್ಸ್ ಸ್ಯಾಲರಿ ಸಿಗುತ್ತಾ? ರಾಮ್ ಆಫೀಸ್ ನಲ್ಲಿ ಬಾಸ್ ಅಲ್ಲ ಎನ್ನುವ ವಿಷಯ ಭಾರ್ಗವಿಗೆ ತಿಳಿಯುತ್ತಾ? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us