Seetha Raama: ಲಾಯರ್ ಮದುವೆಯಾಗಲು ಸೀತಾ ಒಪ್ಪಿಗೆ ಸೂಚಿಸುತ್ತಾಳಾ? ಈ ಬಗ್ಗೆ ಸಿಹಿ ಅಭಿಪ್ರಾಯ ಏನಿರಬಹುದು?

ಭಾರ್ಗವಿ ಬಣ್ಣ ಬಯಲಾಗಬಹುದು ಎಂದು ಅಂದುಕೊಂಡವರಿಗೆ ನಿರಾಸೆಯಾಗಿದೆ. ತನ್ನ ಬುದ್ದಿವಂತಿಕೆಯಿಂದ ಎಲ್ಲರನ್ನೂ ಮೂರ್ಖರನ್ನಾಗಿ ಮಾಡಿದ್ದಾಳೆ ಭಾರ್ಗವಿ. ಈ ಮಧ್ಯೆ ಕಳ್ಳರನ್ನು ಹುಡುಕುವುದಕ್ಕೆ ರಾಮ್ ಮಾಡಿರುವ ಉಪಾಯ ಫಲಿಸುತ್ತಾ?

Seetha Raama: ಲಾಯರ್ ಮದುವೆಯಾಗಲು ಸೀತಾ ಒಪ್ಪಿಗೆ ಸೂಚಿಸುತ್ತಾಳಾ? ಈ ಬಗ್ಗೆ ಸಿಹಿ ಅಭಿಪ್ರಾಯ ಏನಿರಬಹುದು?
ಸೀತಾ ರಾಮ
Edited By:

Updated on: Jul 28, 2023 | 7:54 AM

ಕಳೆದ ವಾರ ಪ್ರಸಾರ ಆರಂಭಿಸಿದ ‘ಸೀತಾ ರಾಮ’ ಧಾರಾವಾಹಿಯ (Seetha Raama Serial) ವೀಕ್ಷಕರ ಗಮನ ಸೆಳೆದಿದೆ. ಇನ್ನು ಧಾರಾವಾಹಿಯ ಓಪನಿಂಗ್ ವೀಕ್ ಟಿಆರ್ಪಿಯಲ್ಲಿ ಈ ಧಾರವಾಹಿ ನಾಲ್ಕನೇ ಸ್ಥಾನದಲ್ಲಿದೆ. ಈ ಟಿಆರ್​ಪಿ  ಹೆಚ್ಚಾಗಬಹುದು ಎಂಬ ನಿರೀಕ್ಷೆಯೂ ಇದೆ. ಇನ್ನು ಈ ಸಂಚಿಕೆಯಲ್ಲಿ ಭಾರ್ಗವಿ ಬಣ್ಣ ಬಯಲಾಗಬಹುದು ಎಂದು ಅಂದುಕೊಂಡವರಿಗೆ ನಿರಾಸೆಯಾಗಿದೆ. ಏಕೆಂದರೆ ಕ್ಯಾರೆಟ್ ಹಲ್ವಾ ಕೊಡುವ ನೆಪ ಮಾಡಕ್ಕೊಂಡು ಆಫೀಸ್ ಗೆ ಬಂದ ಭಾರ್ಗವಿ ಸತ್ಯವನ್ನು ಯಾರಿಗೂ ಅರಿಯದಂತೆ ಸಲೀಸಾಗಿ ಮುಚ್ಚಿಹಾಕಿದ್ದಾಳೆ. ಇದೆಲ್ಲದರ ಮಧ್ಯೆ ಮ್ಯಾನೇಜರ್ ಚರಣ್​ ಡಿ ಸಿಕ್ಕಿಬಿದ್ದಿದ್ದಾನೆ. ಆದರೆ ರಾಮ್ ಗೆಳೆಯ ಅಶೋಕ್ ನಿಗೆ ಇದೆಲ್ಲದರ ಬಗ್ಗೆ ಅರಿವಿದ್ದರೂ ಯಾವುದಕ್ಕೂ ನಿಖರವಾದ ಸಾಕ್ಷಿ ಸಿಕ್ಕಿಲ್ಲ.

ದೇಸಾಯಿ ಮನೆತನದ ದೊಡ್ಡ ಕುಡಿ ಸೂರ್ಯ ಪ್ರಕಾಶ್, ಸೊಸೆ ಭಾರ್ಗವಿ ಹೇಳಿದ್ದನ್ನು ಕಣ್ಣು ಮುಚ್ಚಿ ನಂಬೋ ಮನುಷ್ಯ. ಹಾಗಾಗಿ ಇದನ್ನೂ ಸತ್ಯ ಅಂತ ತಿಳಿದಿದ್ದಾನೆ. ಅದಕ್ಕಾಗಿಯೇ ಮ್ಯಾನೇಜರ್ ಚರಣ್ ಡಿ. ಯನ್ನೂ ಕೆಲಸದಿಂದ ತೆಗೆಯುವುದಕ್ಕೂ ಮುಂದಾಗಿದ್ದಾನೆ. ಆದರೆ ಅದನ್ನು ತಡೆದ ರಾಮ್ ತನಗೆ ಇದರ ಹಿಂದೆ ಬೇರೆ ಯಾರೋ ಇದ್ದಾರೆಂಬ ಫೀಲ್ ಇದೆ ಹಾಗಾಗಿ ಅವರನ್ನು ವಜಾಗೊಳಿಸದೆಯೇ ಕಳ್ಳರನ್ನು ಹಿಡಿಯೋಣ ಎಂದು ತಾತನಿಗೆ ಒಳ್ಳೆಯ ಉಪಾಯ ನೀಡುವ ಮೂಲಕ ಮಾಮೂಲಿ ವರ್ಕರ್ ಆಗಿ ಕೆಲಸ ಶುರು ಮಾಡಿದ್ದಾನೆ.

ರಾಮ್ ಗೆಳೆಯ ಅಶೋಕ್ ಬಾಸ್ ಆಗಿ ನಾಟಕ ಮಾಡುತ್ತಿರುವುದರಿಂದ, ಅವನೂ ಉಪಾಯ ಮಾಡಿ ಸೀತಾ ಪಕ್ಕದಲ್ಲಿಯೇ ರಾಮನನ್ನೂ ಕುರಿಸಿದ್ದಾನೆ. ಅದರಂತೆ ಸೀತಮ್ಮನೂ ಕೂಡ ಕೋಪ ಮರೆತು ರಾಮ್ ನನ್ನು ಆದರದಿಂದ ಬರಮಾಡಿಕೊಂಡು ಅವನಿಗೆ ಸಹಾಯವನ್ನೂ ಮಾಡಿದ್ದಾಳೆ. ರಾಮನ ಜೊತೆ ಮಾತನಾಡುತ್ತಾ, ತನ್ನ ಮಗಳ ಹುಟ್ಟು ಹಬ್ಬದ ದಿನ ತಾನು ಮರೆತ ಕೇಕ್, ಅವನೇ ಕಳುಹಿಸಿದ್ದ ಎಂಬುದು ಅವಳಿಗೆ ಗೊತ್ತಾಗಿದೆ. ಅಂತೂ, ಇಂತೂ ರಾಮ್ ಮತ್ತು ಸೀತಾಳ ಮುನಿಸು ಕೊನೆಗೊಂಡು ಸ್ನೇಹ ಬೆಳೆಯಲು ಇನ್ನೇನು ಸ್ವಲ್ಪ ಹೆಜ್ಜೆ ಬಾಕಿ ಇದೆ ಅಷ್ಟೇ.

ಇದನ್ನೂ ಓದಿ: ಮೋಸದ ಲೆಕ್ಕ ನೀಡಿದ ಸೀತಾ; ಭಾರ್ಗವಿ ಕೆಂಗಣ್ಣಿಗೆ ಗುರಿಯಾಗುತ್ತಾಳಾ ನಾಯಕಿ?   

ಇನ್ನು ಈ ಧಾರಾವಾಹಿಗೆ ಮೂರು ಹೊಸ ಪಾತ್ರಗಳ ಪರಿಚಯವಾಗಿದೆ. ಕ್ರಿಮಿನಲ್ ಲಾಯರ್ ಒಬ್ಬ ಸೀತಾನನ್ನು ವರಿಸಲು ಹಿಂದೆ ಬಿದ್ದಿದ್ದು ಇದಕ್ಕೆ ಸೀತಾಳ ಅಣ್ಣ ಮತ್ತು ಅತ್ತಿಗೆ ಅವನು ಕೊಡುವ ದುಡ್ಡಿನ ಆಸೆಗಾಗಿ ನೆಂಟಸ್ತಿಗೆ ಬೆಳೆಸಲು ಸಿದ್ಧವಾಗಿದ್ದಾರೆ. ಆದರೆ ಅದಕ್ಕೆ ಒಪ್ಪದ ಸೀತಾ ಕಟ್ಟುನಿಟ್ಟಾಗಿ ನಾನು ಮದುವೆ ಆಗೋದಿಲ್ಲ ಅಂದಿದ್ದಾಳೆ ಆದರೂ ಆಕೆಯ ಅತ್ತಿಗೆ ಪಟ್ಟು ಬಿಡದೇ, ಹುಡುಗನನ್ನು ಮನೆಗೆ ಕಡೆದುಕೊಂಡು ಬರುತ್ತೇನೆ, ನೀನು ನೋಡಿ ಅವನನ್ನು ಒಪ್ಪು ಎಂದು ಹೇಳಿದ್ದಾಳೆ ಆದರೆ ಲಾಯರ್ ಮದುವೆಯಾಗಲು ಸೀತಾ ಒಪ್ಪಿಗೆ ಸೂಚಿಸುತ್ತಾಳಾ? ಈ ಬಗ್ಗೆ ಸಿಹಿ ಅಭಿಪ್ರಾಯ ಏನಿರಬಹುದು? ಕಾದು ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us