
‘ಬಿಗ್ ಬಾಸ್ ಸೀಸನ್ 15’ ಸಾಕಷ್ಟು ಕುತೂಹಲ ಸೃಷ್ಟಿಸುತ್ತಿದೆ. ರಾಕೇಶ್ ಬಾಪಟ್ ಹಾಗೂ ಶಮಿತಾ ಶೆಟ್ಟಿ ಬಿಗ್ ಬಾಸ್ ಮನೆ ಒಳಗೆ ಇದ್ದಿದ್ದರಿಂದ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ಸಿಗುತ್ತಿತ್ತು. ಇಬ್ಬರೂ ಕ್ಲೋಸ್ ಆಗಿರೋದು ಅಭಿಮಾನಿಗಳಿಗೆ ಖುಷಿ ನೀಡಿತ್ತು. ಆದರೆ, ಅನಾರೋಗ್ಯ ಕಾರಣದಿಂದ ರಾಕೇಶ್ ಬಾಪಟ್ ಬಿಗ್ ಬಾಸ್ನಿಂದ ಹೊರ ನಡೆದಿದ್ದರು. ಈಗ ಶಮಿತಾ ಶೆಟ್ಟಿ ಪಾಳಿ. ಅವರು ಕೂಡ ಈ ವಾರ ಬಿಗ್ ಬಾಸ್ನಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ಇದು ವೀಕ್ಷಕರಿಗೆ ಸಾಕಷ್ಟು ಬೇಸರ ಮೂಡಿಸಿದೆ.
ರಾಕೇಶ್ ಬಾಪಟ್ ಹಾಗೂ ಶಮಿತಾ ಶೆಟ್ಟಿ ಬಿಗ್ ಬಾಸ್ ಒಟಿಟಿಯಲ್ಲಿ ತುಂಬಾನೇ ಕ್ಲೋಸ್ ಆಗಿದ್ದರು. ಈ ಜೋಡಿ ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಇಬ್ಬರೂ ಒಂದೇ ವಯಸ್ಸಿನವರಾದ್ದರಿಂದ ಬೇಗ ಕನೆಕ್ಟ್ ಆಗಿದ್ದರು. ಇವರ ಆಪ್ತತೆ ಬಿಗ್ ಬಾಸ್ ಮನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಬಿಗ್ಬಾಸ್ ಒಟಿಟಿಯಿಂದ ಹೊರ ಬಂದ ನಂತರವೂ ಇವರು ಕ್ಲೋಸ್ ಆಗಿಯೇ ಇದ್ದರು. ಈ ಜೋಡಿ ಮತ್ತೆ ಬಿಗ್ ಬಾಸ್ 15ರಲ್ಲಿ ಒಂದಾಗಿತ್ತು. ಬಂದ ದಿನವೇ ಕಿಸ್ ಮಾಡಿಕೊಂಡಿದ್ದರು. ಆದರೆ, ಈಗ ಇಬ್ಬರೂ ಅರ್ಧದಲ್ಲೇ ಹೊರ ಬರುವಂತಾಗಿದೆ.
ವೈದ್ಯಕೀಯ ಕಾರಣಗಳನ್ನು ನೀಡಿ ರಾಕೇಶ್ ಅವರು ಅರ್ಧದಲ್ಲೇ ಮನೆಯಿಂದ ಹೊರ ಬಂದಿದ್ದರು. ಈಗ ಕೆಲ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಶಮಿತಾ ಶೆಟ್ಟಿ ಆಸ್ಪತ್ರೆ ಸೇರಿದ್ದಾರೆ. ಅವರಿಗೆ ಅನಾರೋಗ್ಯ ಕಾಡಿದೆಯಂತೆ. ಟಾಸ್ಕ್ ವೇಳೆ ಅವರಿಗೆ ತೊಂದರೆ ಉಂಟಾಗಿದೆ. ಈ ಕಾರಣಕ್ಕೆ ಅವರು ಹೊರಹೋಗಿದ್ದಾರೆ. ಮೂಲಗಳ ಪ್ರಕಾರ ಮುಂದಿನವಾರ ಅವರು ಕಮ್ಬ್ಯಾಕ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಕೇಶ್ ಕಿಡ್ನಿಯಲ್ಲಿ ಕಲ್ಲಿದೆ. ಈ ಕಾರಣಕ್ಕೆ ಅವರಿಗೆ ತೀವ್ರ ನೋವು ಕಾಣಿಸಿಕೊಂಡಿದೆ. ಅವರು ಮತ್ತೆ ಬಿಗ್ ಬಾಸ್ ಶೋಗೆ ಮರಳುತ್ತಾರೋ ಅಥವಾ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೋ ಎನ್ನುವುದು ತಿಳಿದಿಲ್ಲ. ಒಂದೊಮ್ಮೆ ಅವರು ಆಪರೇಷನ್ಗೆ ಒಳಗಾದರೆ ಅವರು ಮತ್ತೆ ದೊಡ್ಮನೆ ಸೇರುವುದು ಅನುಮಾನ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ರಾಕೇಶ್-ಶಮಿತಾ ರೊಮ್ಯಾನ್ಸ್; ಮೊದಲ ದಿನವೇ ಕಿಸ್ಸಿಂಗ್