ಅಣ್ಣ ಎನ್ನುತ್ತಲೇ ಮೋಸ ಮಾಡಿದ ಚೈತ್ರಾ; ಡ್ರಾಮಾ ಗೊತ್ತಾಗಿ ಗ್ರಹಚಾರ ಬಿಡಿಸಿದ ಶಿಶಿರ್

ಶಿಶಿರ್ ಮತ್ತು ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಅಣ್ಣ-ತಂಗಿ ರೀತಿ ಇದ್ದರು. ಆದರೆ ಚೈತ್ರಾ ಅವರು ಉಲ್ಟಾ ಹೊಡೆದಿದ್ದಾರೆ. ಚೈತ್ರಾ ನಡೆದುಕೊಂಡ ರೀತಿಯನ್ನು ಕಂಡು ಶಿಶಿರ್ ಕೆಂಡಾಮಂಡಲ ಆಗಿದ್ದಾರೆ. ಇಷ್ಟು ದಿನ ಚೈತ್ರಾ ಮಾಡಿದ್ದು ಡ್ರಾಮಾ ಎಂಬುದು ಶಿಶಿರ್ ಅವರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಅವಕಾಶವಾದಿತನವನ್ನು ವಿರೋಧಿಸಿ ಶಿಶಿರ್​ ಗರಂ ಆಗಿದ್ದಾರೆ.

ಅಣ್ಣ ಎನ್ನುತ್ತಲೇ ಮೋಸ ಮಾಡಿದ ಚೈತ್ರಾ; ಡ್ರಾಮಾ ಗೊತ್ತಾಗಿ ಗ್ರಹಚಾರ ಬಿಡಿಸಿದ ಶಿಶಿರ್
ಚೈತ್ರಾ ಕುಂದಾಪುರ, ಶಿಶಿರ್​

Updated on: Nov 13, 2024 | 11:10 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ರೋಚಕತೆ ಹೆಚ್ಚಾಗಿದೆ. ಚೈತ್ರಾ ಕುಂದಾಪುರ ಅವರ ವಿರುದ್ಧ ಶಿಶಿರ್ ತಿರುಗಿ ಬಿದ್ದಿದ್ದಾರೆ. ಇಷ್ಟು ದಿನಗಳ ಕಾಲ ಶಿಶಿರ್ ಮತ್ತು ಚೈತ್ರಾ ನಡುವೆ ಉತ್ತಮ ಬಾಂಧವ್ಯ ಇತ್ತು. ಅಣ್ಣ-ತಂಗಿ ರೀತಿ ಅವರು ಕ್ಲೋಸ್ ಆಗಿದ್ದರು. ಜೋಡಿ ಟಾಸ್ಕ್​ನಲ್ಲಿ ಜೋಡಿಯಾಗಿದ್ದ ಅವರಿಬ್ಬರ ನಡುವೆ ನಾಮಿನೇಷನ್​ ವಿಚಾರ ಬಂದಾಗ ಶಿಶಿರ್ ಅವರು ತ್ಯಾಗ ಮಾಡಿ ತಾವೇ ನಾಮಿನೇಟ್ ಆಗಿದ್ದರು. ಇಷ್ಟೆಲ್ಲ ಮಾಡಿದರೂ ಕೂಡ ಚೈತ್ರಾ ಅವರು ಅವಕಾಶವಾದಿ ಆಗಿದ್ದಾರೆ. ಅರ್ಧ ಆಟದಲ್ಲಿ ಶಿಶಿರ್ ಅವರನ್ನು ಬಿಟ್ಟು ತ್ರಿವಿಕ್ರಮ್ ಜೊತೆ ಚೈತ್ರಾ ಕೈ ಜೋಡಿಸಿದ್ದಾರೆ.

ಈ ವಾರ ಜೋಡಿ ಆಟದ ನಡುವೆ ಬಿಗ್ ಬಾಸ್ ಒಂದು ಟ್ವಿಸ್ಟ್ ನೀಡಿದರು. ತಮ್ಮ ಜೋಡಿಯನ್ನು ಬಿಟ್ಟುಕೊಟ್ಟು ಕ್ಯಾಪ್ಟನ್ ಜೊತೆ ಆಟ ಮುಂದುವರಿಸಲು ಇಚ್ಛಿಸುತ್ತೀರಾ ಎಂದು ಬಿಗ್ ಬಾಸ್ ಕೇಳಿದರು. ಈ ಆಫರ್​ ಅನ್ನು ಚೈತ್ರಾ ಕುಂದಾಪುರ ಅವರು ಒಪ್ಪಿಕೊಂಡರು. ಇದರಿಂದಾಗಿ ಶಿಶಿರ್ ಅವರು ಆಟದಿಂದ ಹೊರಗೆ ಉಳಿಯುವ ಸಾಧ್ಯತೆ ದಟ್ಟವಾಗಿತ್ತು. ಹಾಗಾಗಿ ಶಿಶಿರ್ ಕೋಪಗೊಂಡರು.

ಚೈತ್ರಾ ಮಾಡಿದ ಅನ್ಯಾಯದಿಂದಾಗಿ ಶಿಶಿರ್​ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದಾರೆ. ಇಷ್ಟು ದಿನ ಚೈತ್ರಾ ಬಗ್ಗೆ ಮೃದು ಧೋರಣೆ ಹೊಂದಿದ್ದ ಅವರು ಬುಧವಾರದ (ನವೆಂಬರ್ 13) ಎಪಿಸೋಡ್​ನಲ್ಲಿ ಚೈತ್ರಾಳ ಅಸಲಿ ಮುಖ ಏನು ಎಂಬುದನ್ನು ಬಯಲು ಮಾಡಿದ್ದಾರೆ. ಅಣ್ಣ ಎನ್ನುತ್ತ ತಮ್ಮ ಬೆನ್ನಿಗೆ ಚೂರಿ ಹಾಕಲು ಪ್ರಯತ್ನಿಸಿದ ತಂಗಿಗೆ ಅವರು ಮಾತಿನಲ್ಲೇ ಗ್ರಹಚಾರ ಬಿಡಿಸಿದ್ದಾರೆ. ತಾವು ಕೂಡ ಚೈತ್ರಾ ಜೊತೆ ಜೋಡಿಯಾಗಿ ಆಡಲ್ಲ ಎಂದು ಅವರು ಕೂಗಾಡಿದ್ದಾರೆ.

ಇದನ್ನೂ ಓದಿ: ಕೊರಗಜ್ಜನ ಕೃಪೆ: ಮಣ್ಣಿನ ರಾಶಿಯಲ್ಲಿ ಚೈತ್ರಾ ಕಳೆದುಕೊಂಡ ಚಿನ್ನದ ಉಂಗುರ ಕೂಡಲೇ ಪತ್ತೆ

‘ತ್ರಿವಿಕ್ರಮ್ ಮಾನಸಿಕವಾಗಿ, ದೈಹಿಕವಾಗಿ ಗಟ್ಟಿ ವ್ಯಕ್ತಿ’ ಎಂಬ ಕಾರಣವನ್ನು ನೀಡಿ ಚೈತ್ರಾ ಅವರು ತ್ರಿವಿಕ್ರಮ್ ಜೊತೆ ಜೋಡಿಯಾಗಲು ಬಯಸಿದ್ದಾರೆ. ಇದು ಶಿಶಿರ್ ಅವರಿಗೆ ಇನ್ನಷ್ಟು ಕೋಪ ತರಿಸಿದೆ. ‘ನಾಮಿನೇಷನ್​ ಸಮಯದಲ್ಲಿ ಅಯ್ಯೋ, ಅಮ್ಮಾ ಅನ್ನೋದು. 12 ವರ್ಷ ಮಣ್ಣು ಹೊತ್ತಿರುವ ನಾವು ಆ್ಯಕ್ಟರ್ ಅಲ್ಲ.. ಇಲ್ಲಿ ಇದ್ದಾರೆ ನೋಡಿ ದೊಡ್ಡ ಆ್ಯಕ್ಟರ್​’ ಎಂದು ಚೈತ್ರಾ ಮೇಲೆ ಶಿಶಿರ್​ ಹರಿಹಾಯ್ದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us