AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರಗಜ್ಜನ ಕೃಪೆ: ಮಣ್ಣಿನ ರಾಶಿಯಲ್ಲಿ ಚೈತ್ರಾ ಕಳೆದುಕೊಂಡ ಚಿನ್ನದ ಉಂಗುರ ಕೂಡಲೇ ಪತ್ತೆ

ಕೊರಗಜ್ಜ ದೈವದ ಬಗ್ಗೆ ಜನರಿಗೆ ಅಪಾರ ನಂಬಿಕೆ ಇದೆ. ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಕೂಡ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಣ್ಣಿನ ರಾಶಿಯಲ್ಲಿ ಚೈತ್ರಾ ಕಳೆದುಕೊಂಡಿದ್ದ ಚಿನ್ನದ ಉಂಗುರ ಪತ್ತೆ ಆಗಿದೆ. ಉಂಗುರ ಸಿಕ್ಕ ಕೂಡಲೇ ಚೈತ್ರಾ ಅವರು ಕೊರಗಜ್ಜ ದೈವಕ್ಕೆ ಕೈ ಮುಗಿದಿದ್ದಾರೆ. ಉಂಗುರ ಸಿಕ್ಕ ಖುಷಿಯಲ್ಲಿ ಅವರು ಕುಣಿದು ಕುಪ್ಪಳಿಸಿದ್ದಾರೆ.

ಕೊರಗಜ್ಜನ ಕೃಪೆ: ಮಣ್ಣಿನ ರಾಶಿಯಲ್ಲಿ ಚೈತ್ರಾ ಕಳೆದುಕೊಂಡ ಚಿನ್ನದ ಉಂಗುರ ಕೂಡಲೇ ಪತ್ತೆ
ಕೊರಗಜ್ಜ, ಚೈತ್ರಾ ಕುಂದಾಪುರ
ಮದನ್​ ಕುಮಾರ್​
|

Updated on: Nov 13, 2024 | 10:45 PM

Share

ತುಳುನಾಡಿನಲ್ಲಿ ಕೊರಗಜ್ಜ ದೈವವನ್ನು ನಂಬುವ ಅಪಾರ ಜನರು ಇದ್ದಾರೆ. ಕಷ್ಟದ ಕಾಲದಲ್ಲಿ ಕೊರಗಜ್ಜ ಕೈ ಬಿಡುವುದಿಲ್ಲ ಎಂಬ ನಂಬಿಕೆ ಎಲ್ಲರದ್ದು. ಬಿಗ್ ಬಾಸ್ ಮನೆಯಲ್ಲಿ ಕೂಡ ಇದು ಸಾಬೀತಾಗಿದೆ. ಬುಧವಾರದ (ನ.13) ಸಂಚಿಕೆಯಲ್ಲಿ ಒಂದು ಟಾಸ್ಕ್ ನೀಡಲಾಗಿತ್ತು. ಹಸಿ ಮಣ್ಣಿನ ರಾಶಿಯಲ್ಲಿ ಆಟ ಆಡಬೇಕಿತ್ತು. ಈ ವೇಳೆ ಚೈತ್ರಾ ಕುಂದಾಪುರ ಅವರ ಚಿನ್ನದ ಉಂಗುರ ಕಳೆದುಹೋಯಿತು. ಉಂಗುರ ಮಿಸ್ ಆಗಿದೆ ಎಂಬುದು ಗೊತ್ತಾದ ತಕ್ಷಣ ಅವರು ಸಿಕ್ಕಾಪಟ್ಟೆ ಚಡಪಡಿಸಿದರು. ಆಗ ಅವರು ಮನಸ್ಸಿನಲ್ಲಿ ಕೊರಗಜ್ಜನ ಪ್ರಾರ್ಥನೆ ಮಾಡಿದರು.

ಇದು ಚೈತ್ರಾ ಪಾಲಿಗೆ ತುಂಬ ಮಹತ್ವದ ಉಂಗುರ. ಹಾಗಾಗಿ ಅವರು ಉಂಗುರ ಕಳೆದಕೊಂಡ ತಕ್ಷಣ ಆತಂಕಕ್ಕೆ ಒಳಗಾದರು. ರಾಶಿ ರಾಶಿಯಾಗಿ ಬಿದ್ದಿದ್ದ ಹಸಿ ಮಣ್ಣಿನಲ್ಲಿ ಚಿಕ್ಕ ಉಂಗುರ ಹುಡುಕುವುದು ನಿಜಕ್ಕೂ ಸವಾಲಿನ ಕೆಲಸ. ಅಷ್ಟು ದೊಡ್ಡದಾದ ಬಿಗ್ ಬಾಸ್ ಮನೆಯಲ್ಲಿ ಉಂಗುರ ಮಿಸ್ ಆದರೆ ಮತ್ತೆ ಸಿಗುತ್ತಾ ಎಂಬುದು ಎಲ್ಲರ ಅನುಮಾನ. ಆದರೂ ಕೂಡ ಎಲ್ಲರೂ ಹುಡುಕಲು ಪ್ರಯತ್ನಿಸಿದರು.

ಇದನ್ನೂ ಓದಿ: ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್

ತಮಗೆ ಈ ಉಂಗುರ ಎಷ್ಟು ಮುಖ್ಯವಾದದ್ದು ಎಂದು ಬಿಗ್ ಬಾಸ್​ಗೆ ಚೈತ್ರಾ ಅವರು ಹೇಳಿದರು. ಅಲ್ಲದೇ, ಹೇಗಾದರೂ ಉಂಗುರ ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡರು. ಕೆಲವೇ ಸಮಯದ ನಂತರ ಬಿಗ್ ಬಾಸ್​ ಆ ಉಂಗುರವನ್ನು ಹುಡುಕಿ ಕಳಿಸಿಕೊಟ್ಟರು. ಉಂಗುರ ಸಿಕ್ಕ ಖುಷಿಯಲ್ಲಿ ಚೈತ್ರಾ ಅವರು ಕುಣಿದಾಡಿದರು. ಅಲ್ಲದೇ, ಕೊರಗಜ್ಜನಿಗೆ ಧನ್ಯವಾದ ತಿಳಿಸಿದರು.

ಹೊರಜಗತ್ತಿನಲ್ಲಿ ಇದ್ದಾಗ ಭಾಷಣಗಳ ಮೂಲಕ ಚೈತ್ರಾ ಕುಂದಾಪುರ ಅವರು ಗುರುತಿಸಿಕೊಂಡಿದ್ದರು. ಈಗ ಅವರು ಬಿಗ್ ಬಾಸ್ ಮನೆಯಲ್ಲಿ ಮಾತಿನ ಮೂಲಕ ಮುನ್ನುಗುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೇವಲ ಮಾತಿನಿಂದ ಬಿಗ್ ಬಾಸ್​ ಆಟದಲ್ಲಿ ಏನೂ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಮಾತೇ ಅವರಿಗೆ ಮುಳುವಾಗುತ್ತಿದೆ. ತಾವು ಆಡಿದ ಮಾತಿಗೆ ತಾವೇ ಬದ್ಧವಾಗಿರುವುದಿಲ್ಲ ಎಂದು ಅನೇಕರು ಆರೋಪಿಸಿದ್ದಾರೆ. ಅಲ್ಲದೇ, ಚೈತ್ರಾ ಅವರು ಬೇರೆಯವರ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಲ್ಲ ಎಂಬ ದೂರು ಕೂಡ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್