‘ಹುಡುಗಿಯರಿಗೂ ಪ್ರೈವೇಟ್ ಪಾರ್ಟ್ ಇರುತ್ತೆ’; ಸುರೇಶ್​ಗೆ ಗೌತಮಿ ಖಡಕ್ ಎಚ್ಚರಿಕೆ

ಭವ್ಯಾ ಗೌಡ ಹಾಗೂ ಮಂಜು ಅವರು ಸ್ಟ್ಯಾಚ್ಯೂ ಆಗಿ ನಿಂತಿದ್ದರು. ಈ ವೇಳೆ ಸುರೇಶ್ ಹಾಗೂ ಅನುಷಾ ಅವರು ಬಕೆಟ್​ನಲ್ಲಿ ನೀರು ಹಾಕುವ ಪ್ರಯತ್ನ ಮಾಡಿದ್ದಾರೆ. ಇದು ಭವ್ಯಾ ಅವರ ಕಾಲಿಗೆ ಹೊಡೆದಿದೆ. ಆಗ ಭವ್ಯಾ ಅವರು ಅಳು ಬಂದರೂ ತಡೆದುಕೊಂಡಿದ್ದಾರೆ. ಇದನ್ನು ಗೌತಮಿ ಅವರು ಖಂಡಿಸಿದ್ದಾರೆ.

‘ಹುಡುಗಿಯರಿಗೂ ಪ್ರೈವೇಟ್ ಪಾರ್ಟ್ ಇರುತ್ತೆ’; ಸುರೇಶ್​ಗೆ ಗೌತಮಿ ಖಡಕ್ ಎಚ್ಚರಿಕೆ
ಬಿಗ್ ಬಾಸ್
Follow us
ರಾಜೇಶ್ ದುಗ್ಗುಮನೆ
|

Updated on: Nov 14, 2024 | 6:56 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಏಳನೇ ವಾರ ಚಾಲ್ತಿಯಲ್ಲಿದೆ. ಸ್ಪರ್ಧಿಗಳ ಮಧ್ಯೆ ಭರ್ಜರಿ ಸ್ಪರ್ಧೆ ಏರ್ಪಡುತ್ತಿದೆ. ಈ ಮಧ್ಯೆ ಕಿರಿಕ್​ಗಳು ಕೂಡ ಹೆಚ್ಚುತ್ತಿವೆ. ಸುರೇಶ್ ಹಾಗೂ ಗೌತಮಿ ಮಧ್ಯೆ ಮಾತಿನ ಸಮರ ನಡೆದಿದೆ. ‘ಹುಡುಗಿಯರಿಗೂ ಪ್ರೈವೇಟ್ ಪಾರ್ಟ್ ಇರುತ್ತೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ ಈ ಫೈಟ್ ಆರಂಭ ಆಗಿದ್ದು ಏಕೆ? ಆದ ಕಿರಿಕ್ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ ಪ್ರಕಾರ ಪ್ರತಿ ಜೋಡಿಗಳು ಸ್ಟ್ಯಾಚ್ಯೂ ಮಾದರಿಯಲ್ಲಿ ನಿಲ್ಲಬೇಕು. ಅವರಿಗೆ ಎದುರಾಳಿಗಳು ನೀರನ್ನು ಎರಚಬೇಕು. ಪ್ರತಿ ಸುತ್ತಿನಲ್ಲಿ ಮೂರು ಜೋಡಿಗಳು ನಿಲ್ಲುತ್ತವೆ. ಈ ಮೂರು ಜೋಡಿಗಳ ಪೈಕಿ ಅತಿ ಕಡಿಮೆ ಫೌಲ್ ಮಾಡಿದವರಿಗೆ 100 ಅಂಕ, ಎರಡನೇ ಸ್ಥಾನದಲ್ಲಿ ಇರುವವರಿಗೆ 50 ಅಂಕ ಹಾಗೂ ಅತೀ ಹೆಚ್ಚು ಫೌಲ್ ಮಾಡಿದವರಿಗೆ ಶೂನ್ಯ ಅಂಕ ನೀಡಲಾಗುತ್ತದೆ.

ಭವ್ಯಾ ಗೌಡ ಹಾಗೂ ಮಂಜು ಅವರು ಸ್ಟ್ಯಾಚ್ಯೂ ಆಗಿ ನಿಂತಿದ್ದರು. ಈ ವೇಳೆ ಸುರೇಶ್ ಹಾಗೂ ಅನುಷಾ ಅವರು ಬಕೆಟ್​ನಲ್ಲಿ ನೀರು ಹಾಕುವ ಪ್ರಯತ್ನ ಮಾಡಿದ್ದಾರೆ. ಇದು ಭವ್ಯಾ ಅವರ ಕಾಲಿಗೆ ಹೊಡೆದಿದೆ. ಆಗ ಭವ್ಯಾ ಅವರು ಅಳು ಬಂದರೂ ತಡೆದುಕೊಂಡಿದ್ದಾರೆ. ಇದನ್ನು ಗೌತಮಿ ಅವರು ಖಂಡಿಸಿದ್ದು, ಸುರೇಶ್​ಗೆ ಎಚ್ಚರಿಕೆ ನೀಡಿದ್ದಾರೆ.

‘ಸುರೇಶ್ ನೀವು ಮಾಡಿದ್ದು ತಪ್ಪು. ಗಂಡು ಮಕ್ಕಳಿಗೆ ಮಾತ್ರ ಪ್ರೈವೇಟ್ ಪಾರ್ಟ್ ಇರೋದಾ? ಹೆಣ್ಣುಮಕ್ಕಳಿಗೂ ಇರುತ್ತೆ. ನೀರನ್ನು ಹಾಕುವಾಗ ಸ್ವಲ್ಪ ಎಚ್ಚರಿಕೆಯಿಂದ ಹಾಕಬೇಕು’ ಎಂದು ಗೌತಮಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ‘ಗೋಲ್ಡ್​’ಗೆ ಇಲ್ಲ ಬೆಲೆ; ಸುರೇಶ್ ಸುಲಭ ಟಾರ್ಗೆಟ್ 

ಗೌತಮಿ ಜಾಧವ್ ಅವರು ಹೆಣ್ಣುಮಕ್ಕಳ ವಿಚಾರ ಬಂದಾಗ ಜೋರು ಧ್ವನಿಯಲ್ಲಿ ಮಾತನಾಡುತ್ತಾರೆ. ಎಲ್ಲರಿಗೂ ಖಡಕ್ ಉತ್ತರ ಕೊಡುವ ಮೂಲಕ ಅವರು ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಸೈಲೆಂಟ್ ಆಗಿದ್ದ ಅವರು, ಈಗ ರಗಡ್ ಆಗಿ ಆಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.