ಸುದೀಪ್ ‘ಬಿಗ್ ಬಾಸ್’ ಕಂಬ್ಯಾಕ್ಗೆ ಸಿಕ್ತು ಭರ್ಜರಿ ಟಿಆರ್ಪಿ; ಎರಡಂಕಿ ದಾಟಿದ ‘ಪುಟ್ಟಕ್ಕನ ಮಕ್ಕಳು’ ಟಿವಿಆರ್
ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ಬಿಗ್ ಬಾಸ್ ಕನ್ನಡದ ಟಿಆರ್ಪಿ ಕುಸಿದಿತ್ತು. ಆದರೆ ಅವರ ಮರಳುವಿಕೆಯಿಂದ ಟಿಆರ್ಪಿ ಏರಿಕೆ ಕಂಡಿದೆ. ಅದೇ ರೀತಿ, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯು ಗ್ರಾಮೀಣ ಪ್ರದೇಶಗಳಲ್ಲಿ ಡಬಲ್ ಡಿಜಿಟ್ ಟಿಆರ್ಪಿಯನ್ನು ಪಡೆದುಕೊಂಡಿದೆ.
ಕಿಚ್ಚ ಸುದೀಪ್ ಅವರು ತಾಯಿಯನ್ನು ಕಳೆದುಕೊಂಡಿದ್ದರಿಂದ ಒಂದು ವಾರ ಬಿಗ್ ಬಾಸ್ ನಡೆಸಿಕೊಡಲು ಸಾಧ್ಯ ಆಗಿರಲಿಲ್ಲ. ಆ ಸಂದರ್ಭದಲ್ಲಿ ಬಿಗ್ ಬಾಸ್ ಟಿಆರ್ಪಿ ಕುಸಿದಿತ್ತು. ಸುದೀಪ್ ಅವರು ಮರಳುತ್ತಿದ್ದಂತೆ ಬಿಗ್ ಬಾಸ್ ಟಿಆರ್ಪಿಯಲ್ಲಿ ಏರಿಕೆ ಕಂಡಿದೆ. ಅಷ್ಟೇ ಅಲ್ಲ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಟಿಆರ್ಪಿ ಗ್ರಾಮೀಣ ಭಾಗದಲ್ಲಿ ಡಬಲ್ ಡಿಜಿಟ್ ಪಡೆದುಕೊಂಡಿದೆ. ಇದು ಧಾರಾವಾಹಿಯ ಜನಪ್ರಿಯತೆಗೆ ಹಿಡಿದ ಕೈಗನ್ನಡಿ ಆಗಿದೆ.
ವಾರದ ದಿನಗಳಲ್ಲಿ ಹಾಗೂ ವೀಕೆಂಡ್ನಲ್ಲಿ ಬಿಗ್ ಬಾಸ್ಗೆ ಭರ್ಜರಿ ಟಿಆರ್ಪಿ ಸಿಕ್ಕಿದೆ. ವಾರ ದಿನಗಳಲ್ಲಿ (ನಗರ ಭಾಗದಲ್ಲಿ) 7.5 ಟಿಆರ್ಪಿ, ಶನಿವಾರ 8.1 ಹಾಗೂ ಭಾನುವಾರ 9.3 ಟಿಆರ್ಪಿ ಪಡೆದುಕೊಂಡಿದೆ. ಸುದೀಪ್ ಅವರು ಇಲ್ಲದ ಸಂದರ್ಭದಲ್ಲಿ ವೀಕೆಂಡ್ ಟಿಆರ್ಪಿ ಏಳಕ್ಕೆ ಕುಸಿದು ಹೋಗಿತ್ತು. ಸುದೀಪ್ ಬರುತ್ತಿದ್ದಂತೆ ಟಿಆರ್ಪಿಯಲ್ಲಿ ಏರಿಕೆ ಆಗಿದೆ. ಈ ಮೂಲಕ ಸುದೀಪ್ ಅವರು ಇದ್ದರೆ ಈ ಶೋಗೆ ಹೆಚ್ಚಿನ ಬೇಡಿಕೆ ಎಂಬುದು ಸ್ಪಷ್ಟವಾಗಿದೆ. ಸುದೀಪ್ ತೊರೆದ ನಂತರದಲ್ಲಿ ಶೋನ ಟಿಆರ್ಪಿ ಗತಿ ಏನು ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ.
ಧಾರಾವಾಹಿಗಳ ಟಿಆರ್ಪಿಯಲ್ಲಿ ‘ಪುಟ್ಟಕ್ಕನ ಮಕ್ಕಳು’ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿಯಲ್ಲಿ ನಿರ್ದೇಶಕರು ಸಾಕಷ್ಟು ಟ್ವಿಸ್ಟ್ ಕೊಟ್ಟಿದ್ದರಿಂದ ಸಹಜವಾಗಿಯೇ ಈ ಧಾರಾವಾಹಿಯ ಟಿಆರ್ಪಿಯಲ್ಲಿ ಏರಿಕೆ ಆಗಿದೆ. ಗ್ರಾಮೀಣ ಭಾಗದಲ್ಲಿ ಇದಕ್ಕೆ 10+ಟಿವಿಆರ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಧಾರಾವಾಹಿಯ ಟಿಆರ್ಪಿ ಕುಸಿಯುವ ಭಯ ವೀಕ್ಷಕರನ್ನು ಕಾಡಿದೆ. ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಜನ ಮನ್ನಣೆ ಪಡೆದಿದೆ.
ಇದನ್ನೂ ಓದಿ: ಬಿಗ್ಬಾಸ್ ಆಯೋಜಕರಿಂದ ಅವಮಾನ ಆರೋಪ ತಳ್ಳಿ ಹಾಕಿದ ಕಿಚ್ಚ ಸುದೀಪ್
ಮೂರನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ವೀಕ್ಷಣೆ ಸಿಗುತ್ತಿದೆ. ಐದನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ‘ಸೀತಾ ರಾಮ’ ಧಾರಾವಾಹಿಯ ಪ್ರಸಾರದ ಸಂದರ್ಭದಲ್ಲೇ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಈ ಕಾರಣದಿಂದ ‘ಸೀತಾ ರಾಮ’ ಧಾರಾವಾಹಿಯ ಟಿಆರ್ಪಿಯಲ್ಲಿ ಸಾಕಷ್ಟು ಇಳಿಕೆ ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.