ಬಿಗ್​ಬಾಸ್ ಆಯೋಜಕರಿಂದ ಅವಮಾನ ಆರೋಪ ತಳ್ಳಿ ಹಾಕಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಬಿಗ್​ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಇದರ ನಡುವೆ ಸುದೀಪ್​ಗೆ ಕಲರ್ಸ್​ ವಾಹಿನಿ ಅವಮಾನ ಮಾಡಿದೆ ಹಾಗಾಗಿ ಅವರು ನಿರೂಪಣೆ ಬಿಟ್ಟಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಬಿಗ್​ಬಾಸ್ ಆಯೋಜಕರಿಂದ ಅವಮಾನ ಆರೋಪ ತಳ್ಳಿ ಹಾಕಿದ ಕಿಚ್ಚ ಸುದೀಪ್
Follow us
|

Updated on:Oct 15, 2024 | 2:20 PM

ಕನ್ನಡ ಬಿಗ್​ಬಾಸ್ ಪ್ರಾರಂಭವಾಗಿ 11 ವರ್ಷವಾಗಿದೆ. ಆಗಿನಿಂದಲೂ ಕಿಚ್ಚ ಸುದೀಪ್ ಬಿಗ್​ಬಾಸ್​ನ ನಿರೂಪಕರಾಗಿದ್ದಾರೆ. ಪ್ರತಿ ವರ್ಷ ಹೊಸ ಸ್ಪರ್ಧಿಗಳು ಬರುತ್ತಾರೆ ಆದರೆ ಸುದೀಪ್ ಮಾತ್ರ ಅಲ್ಲಿಯೇ ಇದ್ದಾರೆ. ಕನ್ನಡದಲ್ಲಿ ಬಿಗ್​ಬಾಸ್ ಎಂದರೆ ಅದು ಸುದೀಪ್ ಎಂಬಂತಾಗಿದೆ. ಸುದೀಪ್​ರ ಹೊರತಾಗಿ ಬಿಗ್​ಬಾಸ್ ಅನ್ನು ಅವರಷ್ಟು ಶಕ್ತವಾಗಿ ನಿರೂಪಣೆ ಮಾಡುವ ಇನ್ನೊಬ್ಬ ಸೆಲೆಬ್ರಿಟಿ ಕನ್ನಡಿಗರಿಗೆ ನೆನಪು ಬರುವುದಿಲ್ಲ. ಆದರೆ ಸುದೀಪ್ ಮುಂದಿನ ಸೀಸನ್​ನಿಂದ ಬಿಗ್​ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಈ ಘೋಷಣೆಗೆ ಅವರದ್ದೇ ಆದ ಕಾರಣಗಳಿವೆ. ಆದರೆ ಕೆಲವರು ಸುದೀಪ್​ರ ಈ ಘೋಷಣೆಗೆ ಬೇರೆ ಅರ್ಥ ಕಲ್ಪಿಸುವ ಪ್ರಯತ್ನ ಮಾಡಿದ್ದರು ಅದೇ ಕಾರಣಕ್ಕೆ ಸುದೀಪ್ ಈಗ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕಲರ್ಸ್ ವಾಹಿನಿಯಿಂದ, ಬಿಗ್​ಬಾಸ್ ಆಯೋಜಕರಿಂದ ಕಿಚ್ಚ ಸುದೀಪ್​ಗೆ ಅವಮಾನ ಆಗಿದೆ ಹಾಗಾಗಿ ಅವರು ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳನ್ನು ಹಂಚಿಕೊಂಡಿದ್ದರು. ಇದರ ಬಗ್ಗೆ ಸ್ವತಃ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಟ್ವೀಟ್ ನೋಡಿ, ಗೌರವಿಸಿ ಬಂದ ಪ್ರೀತಿ ಮತ್ತು ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ಇದು ನಿಜವಾಗಿಯೂ ನನಗೆ ಸ್ಪೂರ್ತಿ ತುಂಬುತ್ತದೆ. ಈ ಪ್ರೀತಿ ಗೌರವವನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ’ ಎಂದಿದ್ದಾರೆ.

ಮುಂದುವರೆದು, ‘ನನ್ನ ಹಾಗೂ ಚಾನೆಲ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ, ನನಗೆ ಅಗೌರವವನ್ನು ಚಾನೆಲ್ ತೋರಿದೆ ಎಂದು ವಿಡಿಯೋ, ಕಮೆಂಟ್ ಮಾಡುವವರಿಗೆ ನಾನು ಹೇಳಬಯಸುವುದೆಂದರೆ, ನಾನು ಮತ್ತು ಚಾನೆಲ್ ದೀರ್ಘವಾದ ಹಾಗೂ ಧನಾತ್ಮಕವಾದ ಜರ್ನಿ ಮಾಡಿದ್ದೇವೆ. ಭಿನ್ನಾಭಿಪ್ರಾಯ, ಅಗೌರವ ಎಂಬುದೆಲ್ಲ ಸುಳ್ಳು, ಸಾಕ್ಷ್ಯ ಇಲ್ಲದ್ದು. ಬಿಗ್​ಬಾಸ್​ನಿಂದ ಹೊರಹೋಗುತ್ತಿರುವ ಕುರಿತು ಮಾಡಿದ ಟ್ವೀಟ್​ ಸ್ಪಷ್ಟವಾಗಿತ್ತು ಮತ್ತು ನೇರವಾಗಿತ್ತು, ಕಲರ್ಸ್​ ವಾಹಿನಿಯೊಟ್ಟಿಗೆ ನನ್ನ ಸಂಬಂಧ ಅದ್ಭುತವಾಗಿದೆ ಮತ್ತು ಅವರು ಯಾವಾಗಲೂ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ಈಗಿನ ನಿರ್ದೇಶಕ ಪ್ರಕಾಶ್, ಅಸಾಧ್ಯ ಪ್ರತಿಭಾವಂತ ಮತ್ತು ಶಕ್ತಿಯುತ ವ್ಯಕ್ತಿ ಮತ್ತು ನಾನು ಅವರ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಇಲ್ಲದ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸುವ ವ್ಯಕ್ತಿತ್ವ ನನ್ನದಲ್ಲ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ:ವಿದಾಯ ಹೇಳಿದ ಬಳಿಕ ಮತ್ತೆ ಬಿಗ್​ಬಾಸ್​ ವೇದಿಕೆ ಬರಲಿದ್ದಾರೆ ಕಮಲ್ ಹಾಸನ್

ಕಿಚ್ಚ ಸುದೀಪ್​, ತಾವು ಬಿಗ್​ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಕೆಲ ದಿನಗಳ ಹಿಂದೆಯಷ್ಟೆ ಘೋಷಣೆ ಮಾಡಿದ್ದಾರೆ. ಸುದೀಪ್​ರ ಈ ಹಠಾತ್ ಘೋಷಣೆ ಅವರ ಅಭಿಮಾನಿಗಳಲ್ಲಿ, ಬಿಗ್​ಬಾಸ್ ವೀಕ್ಷಕರಲ್ಲಿ ಮತ್ತು ಮಾಜಿ ಬಿಗ್​ಬಾಸ್ ಸ್ಪರ್ಧಿಗಳಿಗೆ ಆಘಾತ ಉಂಟು ಮಾಡಿತ್ತು. ಇದೇ ಸಂದರ್ಭದಲ್ಲಿ ಕೆಲ ಮಾಜಿ ಬಿಗ್​ಬಾಸ್ ಸ್ಪರ್ಧಿಗಳು ಕಲರ್ಸ್ ವಾಹನಿಯಿಂದ ಸುದೀಪ್​ಗೆ ಅವಮಾನ ಆಗಿದೆಯೇ ಎಂಬ ಅನುಮಾನವನ್ನು ಸಹ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕೆ ಸುದೀಪ್ ಈಗ ಈ ಸ್ಪಷ್ಟನೆ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Tue, 15 October 24

ಮೈಸೂರು ದಸರಾ: ವಿಜಯಪುರ ಸತ್ತಿಗೆ ಕುಣಿತ ಕಲಾ ತಂಡಕ್ಕೆ ಮೊದಲ ಬಹುಮಾನ
ಮೈಸೂರು ದಸರಾ: ವಿಜಯಪುರ ಸತ್ತಿಗೆ ಕುಣಿತ ಕಲಾ ತಂಡಕ್ಕೆ ಮೊದಲ ಬಹುಮಾನ
ಸಿದ್ದರಾಮಯ್ಯ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗೆ ಮನವಿ: ಬಿವೈ ವಿಜಯೇಂದ್ರ
ಸಿದ್ದರಾಮಯ್ಯ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗೆ ಮನವಿ: ಬಿವೈ ವಿಜಯೇಂದ್ರ
ಹುಲಿ ಸೆರೆಗೆ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ
ಹುಲಿ ಸೆರೆಗೆ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಾದ್ಯಂತ ಭಾರೀ ಮಳೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಾದ್ಯಂತ ಭಾರೀ ಮಳೆ
ವಕ್ಫ್ ಜಮೀನು: ಸಚಿವ ಜಮೀರ್ ಅಹ್ಮದ್​ರನ್ನು ತರಾಟೆಗೆ ತೆಗೆದುಕೊಂಡ ಸಿಟಿ ರವಿ
ವಕ್ಫ್ ಜಮೀನು: ಸಚಿವ ಜಮೀರ್ ಅಹ್ಮದ್​ರನ್ನು ತರಾಟೆಗೆ ತೆಗೆದುಕೊಂಡ ಸಿಟಿ ರವಿ
ಓಕಳೀಪುರ ರೈಲ್ವೆ ಅಂಡರ್​ಪಾಸ್​ನಲ್ಲಿ ನೀರು ನಿಂತು ಜನರ ಪರದಾಟ
ಓಕಳೀಪುರ ರೈಲ್ವೆ ಅಂಡರ್​ಪಾಸ್​ನಲ್ಲಿ ನೀರು ನಿಂತು ಜನರ ಪರದಾಟ
ತನಿಖೆಯ ನಂತರ ಪೂರ್ಣ ಮಾಹಿತಿ ನೀಡುತ್ತೇವೆ: ಡಾ ಶರಣಪ್ಪ, ಪೊಲೀಸ್ ಕಮೀಶನರ್
ತನಿಖೆಯ ನಂತರ ಪೂರ್ಣ ಮಾಹಿತಿ ನೀಡುತ್ತೇವೆ: ಡಾ ಶರಣಪ್ಪ, ಪೊಲೀಸ್ ಕಮೀಶನರ್
ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ
ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
‘ನಾನು ಅನ್​ಫಿಟ್ ಅನಿಸುತ್ತಿದೆ’; ಕಣ್ಣೀರು ಹಾಕಿದ ಧನರಾಜ್ ಆಚಾರ್
‘ನಾನು ಅನ್​ಫಿಟ್ ಅನಿಸುತ್ತಿದೆ’; ಕಣ್ಣೀರು ಹಾಕಿದ ಧನರಾಜ್ ಆಚಾರ್