ಬಿಗ್ ಬಾಸ್ ಮನೆಗೆ ಕಾಲ್ ಮಾಡಿ ಭವ್ಯಾ ಗೌಡಗೆ ಐ ಲವ್​ ಯೂ ಹೇಳಿದ ತುಕಾಲಿ ಸಂತೋಷ್

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಈ ಪ್ರಯೋಗಳು ಭಿನ್ನವಾಗಿವೆ. ಈ ವಾರ ಬಿಗ್ ಬಾಸ್​ ಮನೆಗೆ ಫೋನ್​ಬೂತ್ ಬಂದಿದೆ. ಈ ಫೋನ್​ಬೂತ್ ಮೂಲಕ ಬಿಗ್ ಬಾಸ್ ಅವರು ಕರೆ ಮಾಡಿ ಮನೆಯವರಿಗೆ ಸೂಚನೆ ಕೊಡುತ್ತಿದ್ದಾರೆ. ತುಕಾಲಿ ಕೂಡ ಕರೆ ಮಾಡಿ ಮಾತನಾಡಿದ್ದಾರೆ.

ಬಿಗ್ ಬಾಸ್ ಮನೆಗೆ ಕಾಲ್ ಮಾಡಿ ಭವ್ಯಾ ಗೌಡಗೆ ಐ ಲವ್​ ಯೂ ಹೇಳಿದ ತುಕಾಲಿ ಸಂತೋಷ್
ಸಂತೋಷ್-ಭವ್ಯಾ ಗೌಡ
Follow us
ರಾಜೇಶ್ ದುಗ್ಗುಮನೆ
|

Updated on:Oct 15, 2024 | 7:39 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ ಮೂರನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ಮಧ್ಯೆ ಜಗಳಗಳು ಜೋರಾಗಿವೆ. ಅದೇ ರೀತಿ ಸ್ಪರ್ಧೆ ಕೂಡ ಹೆಚ್ಚುತ್ತಿದೆ. ಈ ಮಧ್ಯೆ ಬಿಗ್ ಬಾಸ್ ಮನೆಗೆ ಲ್ಯಾಂಡ್​ಲೈನ್​ನ ಆಗಮನ ಆಗಿದೆ. ಈ ವೇಳೆ ತುಕಾಲಿ ಸಂತೋಷ್ ಅವರು ಕರೆ ಮಾಡಿ, ಭವ್ಯಾ ಗೌಡಗೆ ಐ ಲವ್​ ಯೂ ಹೇಳಿದ್ದಾರೆ. ಇದು ಸೆಪ್ಟೆಂಬರ್ 14ರ ಎಪಿಸೋಡ್​ನ ಹೈಲೈಟ್​ಗಳಲ್ಲಿ ಒಂದಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಈ ಪ್ರಯೋಗಳು ಭಿನ್ನವಾಗಿವೆ. ಈ ವಾರ ಬಿಗ್ ಬಾಸ್​ ಮನೆಗೆ ಫೋನ್​ಬೂತ್ ಬಂದಿದೆ. ಈ ಫೋನ್​ಬೂತ್ ಮೂಲಕ ಬಿಗ್ ಬಾಸ್ ಅವರು ಕರೆ ಮಾಡಿ ಮನೆಯವರಿಗೆ ಸೂಚನೆ ಕೊಡುತ್ತಿದ್ದಾರೆ. ವಿಶೇಷ ಎಂದರೆ ತುಕಾಲಿ ಸಂತೋಷ್ ಕರೆ ಕೂಡ ಬಂದಿದೆ.

ತುಕಾಲಿ ಸಂತೋಷ್ ಅವರು ಕರೆ ಮಾಡುತ್ತಿದ್ದಂತೆ ಭವ್ಯಾ ಅವರು ಹೋಗಿ ಕರೆ ಸ್ವೀಕರಿಸಿದರು. ‘ಹೆಲೋ, ಚಿನ್ನಿ ಯಾಕ್ ಚಿನ್ನಿ? ಐ ಲವ್​ ಯೂ. ನೀನಿಲ್ಲದೆ ಇರೋಕೆ ಆಗ್ತಿಲ್ಲ’ ಎಂದರು ತುಕಾಲಿ ಸಂತೋಷ್. ಫೋನ್​ನಲ್ಲಿ ಮಾತನಾಡುತ್ತಿರುವುದು ಯಾರು ಎಂಬುದನ್ನು ಕಂಡುಹಿಡಿಯೋಕೆ ಭವ್ಯಾಗೆ ಸಾಧ್ಯವೇ ಆಗಲಿಲ್ಲ. ಆ ಬಳಿಕ ಕರೆಯಲ್ಲಿರೋದು ತುಕಾಲಿ ಸಂತೋಷ್ ಎಂದು ಭವ್ಯಾಗೆ ಗೊತ್ತಾಗಿದೆ.

ಇದನ್ನೂ ಓದಿ: ‘ನಾವು ಬಿಗ್ ಬಾಸ್ ಮನೆಯಲ್ಲಿ ಮಾತ್ರ ಒಟ್ಟಾಗಿ ಮಲಗಿಲ್ಲ’; ತುಕಾಲಿ ಸಂತೋಷ್

ಆ ಬಳಿಕ ಮಾನಸಾ ಕರೆ ಸ್ವೀಕರಿಸಿದರು. ‘ಭವ್ಯಾಗೆ ಏಕೆ ಐ ಲವ್​ ಯೂ ಎಂದೆ’ ಎಂದರು ಮಾನಸಾ. ಇದಕ್ಕೆ ಉತ್ತರಿಸಿದ ಅವರು, ‘ಅವಳು ನಿನಗಿಂತ ಚೆನ್ನಾಗಿ ಇದ್ದಾಳೆ. ಹೀಗಾಗಿ, ಐ ಲವ್​ ಯೂ ಎಂದೆ ಎಂದರು ತುಕಾಲಿ ಸಂತೋಷ್. ಆ ಬಳಿಕ ಇಬ್ಬರ ಮಧ್ಯೆ ಫನ್ ಟಾಕ್ ಕೂಡ ನಡೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:24 am, Tue, 15 October 24