‘ಬಿಗ್ ಬಾಸ್’ ಮನೆಯಲ್ಲಿ ‘ಗೋಲ್ಡ್​’ಗೆ ಇಲ್ಲ ಬೆಲೆ; ಸುರೇಶ್ ಸುಲಭ ಟಾರ್ಗೆಟ್

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಗೋಲ್ಡ್ ಸುರೇಶ್ ಅವರು ನಿರಂತರವಾಗಿ ಟಾರ್ಗೆಟ್ ಆಗುತ್ತಿದ್ದಾರೆ. ಪ್ರತಿ ವಾರವೂ ನಾಮಿನೇಟ್ ಆಗುತ್ತಿರುವುದರಿಂದ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ವಾರದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದಾರೆ. ಅದೇ ಕಾರಣಕ್ಕಾಗಿ ಮತ್ತೆ ನಾಮಿನೇಟ್ ಮಾಡುತ್ತಿರುವುದು ಅವರಿಗೆ ಅನ್ಯಾಯ ಎನಿಸಿದೆ.

‘ಬಿಗ್ ಬಾಸ್’ ಮನೆಯಲ್ಲಿ ‘ಗೋಲ್ಡ್​’ಗೆ ಇಲ್ಲ ಬೆಲೆ; ಸುರೇಶ್ ಸುಲಭ ಟಾರ್ಗೆಟ್
ಗೋಲ್ಡ್ ಸುರೇಶ್
Follow us
ರಾಜೇಶ್ ದುಗ್ಗುಮನೆ
|

Updated on: Nov 13, 2024 | 7:22 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೋಲ್ಡ್ ಸುರೇಶ್ ಅವರು ಸುಲಭ ಟಾರ್ಗೆಟ್ ಎನಿಸಿಕೊಂಡಿದ್ದಾರೆ. ಅವರನ್ನು ಪದೇ ಪದೇ ಟೀಕೆ ಮಾಡಾಗುತ್ತಿದೆ. ಈ ಕಾರಣಕ್ಕೆ ಪ್ರತಿ ವಾರ ಅವರನ್ನು ನಾಮಿನೇಟ್ ಮಾಡಲಾಗುತ್ತಿದೆ. ಏಳನೇ ವಾರದಲ್ಲಿ ಗೋಲ್ಡ್ ಸುರೇಶ್ ಅವರನ್ನೇ ಎಲ್ಲರೂ ನೇರ ನಾಮಿನೇಟ್ ಮಾಡಲು ಪ್ರಯತ್ನಿಸಿದ್ದಾರೆ. ಅವರು ಸುಲಭ ಟಾರ್ಗೆಟ್ ಎನಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ಅಸಮಾಧಾನ ಹೊರ ಹಾಕಿದ್ದಾರೆ.

ಕಳೆದ ವಾರ ಮಾಡಿದ ತಪ್ಪಿಗೆ ಸುರೇಶ್ ಅವರು ಕಳಪೆ ಪಡೆದು ಜೈಲುವಾಸ ಅನುಭವಿಸಿದ್ದರು. ಆದರೆ, ಈಗ ಅದೇ ಕಾರಣಗಳನ್ನು ನೀಡಿ ಮತ್ತ ಸುರೇಶ್ ಅವರನ್ನು ನಾಮಿನೇಟ್ ಮಾಡುವ ಕೆಲಸ ದೊಡ್ಮನೆಯವರಿಂದ ಆಗಿದೆ. ಇದಕ್ಕೆ ಸುರೇಶ್ ಅವರು ಸಿಟ್ಟಾಗಿದ್ದಾರೆ. ಮನೆಯವರ ವಿರುದ್ಧ ಅವರು ಅಪಸ್ವರ ತೆಗೆದಿದ್ದಾರೆ.

‘ಪ್ರತಿ ಹಂತದಲ್ಲೂ ಎಲ್ಲರೂ ನನ್ನನ್ನೇ ಟಾರ್ಗೆಟ್ ಮಾಡುತ್ತಾ ಇದ್ದೀರಿ. ಕಳೆದ ವಾರ ನಾನು ಮಾಡಿದ ತಪ್ಪಿಗೆ ಕಳಪೆ ಪಡೆದು ಜೈಲು ಶಿಕ್ಷೆ ಅನುಭವಿಸಿ ಬಂದಿದ್ದೇನೆ. ಈ ವಾರವ ಅದೇ ಕಾರಣ ನೀಡುತ್ತೀರಿ. ಏನೇ ಆದರೂ ಸುರೇಶ್ ನಿಮಗೆಲ್ಲ ಸುಲಭ ಟಾರ್ಗೆಟ್ ಆಗಿದ್ದಾನೆ’ ಎಂದು ಅವರು ಅಸಮಾಧಾನ ಹೊರಹಾಕಿದರು.

ಬಿಗ್ ಬಾಸ್ ಮನೆಯಲ್ಲಿ ಇರುವ ಬಹುತೇಕ ಎಲ್ಲರೂ ಕಲಾವಿದರು. ಗೋಲ್ಡ್ ಸುರೇಶ್ ಮಾತ್ರ ಮನರಂಜನಾ ಕ್ಷೇತ್ರದ ಜೊತೆ ನಂಟು ಹೊಂದಿಲ್ಲ. ಈ ಕಾರಣದಿಂದಲೇ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆ ವೀಕ್ಷಕರಿಗೆ ಮೂಡಿದೆ.‘

ಇದನ್ನೂ ಓದಿ: ‘ಬಿಗ್ ಬಾಸ್’ನಲ್ಲಿ ಹೇಗಿರಬೇಕು? 3 ವರ್ಷಗಳ ಹಿಂದೆಯೇ ಭವ್ಯಾಗೆ ಹೇಳಿದ್ದ ತ್ರಿವಿಕ್ರಂ; ವಿಡಿಯೋ ವೈರಲ್

ಈ ವಿಚಾರ ಈ ವೀಕೆಂಡ್​​ನಲ್ಲೂ ಚರ್ಚೆ ಆಗುವ ಸಾಧ್ಯತೆ ಇದೆ. ಏಕೆಂದರೆ, ಈಗಾಗಲೇ ಒಂದು ತಪ್ಪು ಮಾಡಿ ಅದಕ್ಕೆ ಶಿಕ್ಷೆ ಪಡೆದ ನಂತರ ಮತ್ತದೇ ಕಾರಣ ಹೇಳಿ ನಾಮಿನೇಟ್ ಮಾಡೋದು ಎಷ್ಟು ಸರಿ ಎಂಬುದು ಸುರೇಶ್ ಪ್ರಶ್ನೆ. ಇದೇ ಪ್ರಶ್ನೆಯನ್ನು ಸುದೀಪ್ ಅವರು ಕೂಡ ಮನೆಯವರ ಎದುರು ಎತ್ತುವ ಸಾಧ್ಯತೆ ಇದೆ. ಈ ವಾರ ಅನುಷಾ ಹಾಗೂ ಗೋಲ್ಡ್ ಸುರೇಶ್ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.