AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್’ನಲ್ಲಿ ಹೇಗಿರಬೇಕು? 3 ವರ್ಷಗಳ ಹಿಂದೆಯೇ ಭವ್ಯಾಗೆ ಹೇಳಿದ್ದ ತ್ರಿವಿಕ್ರಂ; ವಿಡಿಯೋ ವೈರಲ್

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ನಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಚೆನ್ನಾಗಿ ಆಟ ಆಡುತ್ತಿದ್ದಾರೆ. ಅವರಿಬ್ಬರ ಮಧ್ಯೆ ಗೆಳೆತನ ಮೂಡಿದೆ. ಅಸಲಿಗೆ ಈ ಇಬ್ಬರೂ ಮೊದಲೇ ಪರಿಚಿತರು, ಮೂರು ವರ್ಷದ ಹಿಂದೆಯೇ ತ್ರಿವಿಕ್ರಮ್​, ಭವ್ಯಾ ಗೌಡಗೆ ಬಿಗ್​ಬಾಸ್ ಬಗ್ಗೆ ನೀಡಿದ್ದ ಸಲಹೆಯ ವಿಡಿಯೋ ಇದೀಗ ವೈರಲ್ ಆಗಿದೆ.

‘ಬಿಗ್ ಬಾಸ್’ನಲ್ಲಿ ಹೇಗಿರಬೇಕು? 3 ವರ್ಷಗಳ ಹಿಂದೆಯೇ ಭವ್ಯಾಗೆ ಹೇಳಿದ್ದ ತ್ರಿವಿಕ್ರಂ; ವಿಡಿಯೋ ವೈರಲ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 12, 2024 | 6:31 PM

Share

‘ಬಿಗ್ ಬಾಸ್’ನ ಈ ಬಾರಿಯ ಸೀಸನ್ ಅಂದರೆ 11ನೇ ಸೀಸನ್ ಎಲ್ಲರ ಗಮನ ಸೆಳೆಯುತ್ತಿದೆ. ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಅವರ ಆಟ ಮೆಚ್ಚುಗೆ ಪಡೆಯುತ್ತಿದೆ. ಅವರ ಮಧ್ಯೆ ಆಪ್ತತೆ ಹೆಚ್ಚಿದೆ. ಇದಕ್ಕೆ ಕಾರಣ ಅವರ ನಡುವೆ ಇರುವ ಪರಿಚಯ. ಮೊದಲಿನಿಂದಲೂ ಇಬ್ಬರ ಮಧ್ಯೆ ಪರಿಚಯ ಇದೆ. ವಿಶೇಷ ಎಂದರೆ ಮೂರು ವರ್ಷಗಳ ಹಿಂದೆಯೇ ತ್ರಿವಿಕ್ರಂ ಅವರು ಭವ್ಯಾಗೆ ಕಿವಿಮಾತೊಂದನ್ನು ಹೇಳಿದ್ದರು. ಈ ವಿಡಿಯೋನ ಫ್ಯಾನ್ಸ್ ವೈರಲ್ ಮಾಡುವ ಕೆಲಸ ಮಾಡುತ್ತಿದ್ದಾರೆ.

ಭವ್ಯಾ ಗೌಡ ಅವರು ‘ಗೀತಾ’ ಧಾರಾವಾಹಿ ಮೂಲಕ ಫೇಮಸ್ ಆದವರು. ತ್ರಿವಿಕ್ರಂ ಕೂಡ ಕಿರುತೆರೆ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ಕಾರಣಕ್ಕೆ ‘ಬಿಗ್ ಬಾಸ್ ಕನ್ನಡ ಮಿನಿ’ ಸೀಸನ್ಗೆ ಇಬ್ಬರೂ ಬಂದಿದ್ದರು. ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಿರುವ ಕಲಾವಿದರಿಗಾಗಿಯೇ ಈ ಮಿನಿ ಸೀಸನ್ ಮಾಡಲಾಗಿತ್ತು.

2021ರಲ್ಲಿ ‘ಬಿಗ್ ಬಾಸ್ ಕನ್ನಡ ಮಿನಿ ಸೀಸನ್’ ನಡೆಸಲಾಗಿತ್ತು. ಇದರಲ್ಲಿ ಭವ್ಯಾ ಗೌಡ, ತ್ರಿವಿಕ್ರಂ ಮೊದಲಾದವರು ನಟಿಸಿದ್ದರು. ಒಂದು ಹಂತದಲ್ಲಿ ಭವ್ಯಾಗೆ ಕಿವಿಮಾತನ್ನು ಹೇಳಿದ್ದರು ತ್ರಿವಿಕ್ರಂ. ಆ ಸಂದರ್ಭದ ವಿಡಿಯೋ ಈಗ ವೈರಲ್ ಆಗಿದೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?

‘ಈ ಜಾಗ ಬೇಕು ಎಂದು ಬೇಡಿಕೊಂಡಿದ್ಯೋ ಇಲ್ಲವೋ? ಕಷ್ಟ ಅನ್ನೋದು ಒಂದು ಹಂತದವರೆಗೆ ಮಾತ್ರ. ಎಂಥದ್ದೇ ತೊಂದರೆ ಇದ್ದರೂ ಏನೇ ಇದ್ದರೂ ಶ್ರಮ ಪಡಬೇಕು. ನಾನು ಮಾಡಿದ್ದು ಇದೇ ತಪ್ಪು. ಥರ್ಮಕೋಲ್ ಹಿಡಿದರೂ ನೀನು ಬಯ್ಯಬಾರದು. ಆ್ಯಟಿಟ್ಯೂಡ್ ತೋರಿಸಬಾರದು. ನಿಮ್ಮ ಫ್ರಸ್ಟ್ರೇಷನ್ ನಾಲ್ಕು ಗೋಡೆಯ ಮಧ್ಯೆ ಇರಬೇಕು. ಸಿಕ್ಕಿರೋದು ನಿನ್ನ ಅದೃಷ್ಟ. ಈ ಜಾಗಕ್ಕೆ ಎಷ್ಟು ಜನ ಬೇಡಿಕೊಳ್ಳುತ್ತಾರೆ ಗೊತ್ತಾ’ ಎಂದಿದ್ದರು ತ್ರಿವಿಕ್ರಂ.

ಭವ್ಯಾಗೆ ಕಳೆದ ವಾರ ಪ್ರ್ಯಾಂಕ್ ಮಾಡಲಾಗಿದೆ. ಅವರೇ ದೊಡ್ಮನೆಯಿಂದ ಎಲಿಮಿನೇಟ್ ಆದರು ಎಂದು ಘೋಷಣೆ ಮಾಡಿದರು. ಕೊನೆಗೆ ಈ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ ಎಂದು ಘೋಷಣೆ ಮಾಡಲಾಯಿತು. ಈ ಮೂಲಕ ಅವರು ಸೇವ್ ಆದರು. ಅವರ ಅಭಿಮಾನಿ ಬಳಗ ಈಗ ಹಿರಿದಾಗಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ ಹಾಗೂ ಭವ್ಯಾ ಅವರ ಗೆಳೆತನ ಜೋರಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ