ಶಿಶಿರ್ಗೆ ಮಂಡಿಯೂರಿ ಕೆಂಗುಲಾಬಿ ಕೊಟ್ಟು ಕಾರಣ ವಿವರಿಸಿದ ಐಶ್ವರ್ಯಾ
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಐಶ್ವರ್ಯಾ ಮತ್ತು ಶಿಶಿರ್ ಅವರ ನಡುವಿನ ಗೆಳೆತನ ಗಮನ ಸೆಳೆಯುತ್ತಿದೆ. ಐಶ್ವರ್ಯಾ ಶಿಶಿರ್ಗೆ ಕೆಂಪು ಗುಲಾಬಿ ನೀಡಿದ್ದು ಚರ್ಚೆಗೆ ಕಾರಣವಾಗಿದೆ. ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ಇನ್ನೂ ಕೆಲವು ವಾರಗಳ ಕಾಲ ಉಳಿಯುವ ಸಾಧ್ಯತೆ ಇದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಹಾಗೂ ಶಿಶಿರ್ ಗಮನ ಸೆಳೆಯುತ್ತಿದ್ದಾರೆ. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಇದೇ ವಿಚಾರ ಇಟ್ಟುಕೊಂಡು ಅನೇಕರು ಅವರ ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಶಿಶಿರ್ ಅವರಿಗೆ ಐಶ್ವರ್ಯಾ ಅವರು ಕೆಂಗುಲಾಬಿ ಕೊಟ್ಟ ವಿಚಾರ ಸಖತ್ ಚರ್ಚೆ ಆಗುತ್ತಿದೆ. ಇದನ್ನು ಬಹುತೇಕರು ನಿರೀಕ್ಷಿಸಿದ್ದರು. ಆ ಬಗ್ಗೆ ಇಲ್ಲಿದೆ ವಿವರ.
ಐಶ್ವರ್ಯಾ ಅವರು ಬಿಗ್ ಬಾಸ್ಗೆ ಬಂದಾಗ ಆರಂಭದಲ್ಲಿ ಧರ್ಮ ಕೀರ್ತಿರಾಜ್ ಜೊತೆ ಕ್ಲೋಸ್ ಆಗುವ ಪ್ರಯತ್ನ ಮಾಡಿದ್ದರು. ಆದರೆ, ಈ ಪ್ರಯತ್ನ ಕೈಗೂಡಲಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ. ಆ ಬಳಿಕ ಅವರಿಗೆ ಸಿಕ್ಕಿದ್ದೇ ಶಿಶಿರ್. ಅವರ ಜೊತೆ ಐಶ್ವರ್ಯಾ ಆಪ್ತತೆ ಬೆಳೆಸಿಕೊಳ್ಳುತ್ತಾ ಬಂದರು. ಈಗ ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಮೂಡಿದೆ. ಈ ಗೆಳೆತನ ಈಗ ಚರ್ಚೆ ಆಗುವ ಹಂತಕ್ಕೆ ಬಂದಿದೆ.
‘ಬಿಗ್ ಬಾಸ್’ ಮನೆಯಲ್ಲಿ ತಮ್ಮಿಷ್ಟದವರಿಗೆ ಕೆಂಗುಲಾಬಿ ಹಾಗೂ ತಮ್ಮ ವೈರಿಗಳಿಗೆ ಕಪ್ಪು ಗುಲಾಬಿ ನೀಡುವ ಚಟುವಟಿಕೆ ಕೊಡಲಾಗಿತ್ತು. ಐಶ್ವರ್ಯಾ ಅವರು ಇದಕ್ಕೆ ಕಾರಣ ವಿವರಿಸಿದ್ದಾರೆ. ಫ್ರೆಂಡ್ಶಿಪ್ ಎಂದರೆ ಸಂತೋಷದ ಸಮಯದಲ್ಲಿ ಮಾತ್ರ ಇರೋದಲ್ಲ. ದುಃಖದಲ್ಲಿ ಇದ್ದಾಗ ಕರೆದುಕೊಂಡು ಹೋಗುವವರು ನಿಜವಾದ ಗೆಳೆಯರು. ಮಾನವೀಯ ಗುಣ ತುಂಬಾನೇ ಮುಖ್ಯ. ಅವರಲ್ಲಿ ಆ ಗುಣ ಇದೆ’ ಎಂದರು ಐಶ್ವರ್ಯಾ.
ಐಶ್ವರ್ಯಾ ಅವರು ಹೂ ಕೊಡಲು ಹೋಗುತ್ತಿದ್ದಂತೆ ಮನೆಯವರೆಲ್ಲರೂ ರೇಗಿಸಿದರು. ಆದರೆ, ಇದಕ್ಕೆಲ್ಲ ಐಶ್ವರ್ಯಾ ತಲೆಕೆಡಿಸಿಕೊಂಡಿಲ್ಲ. ಮಂಡಿಯೂರಿಯೇ ಅವರು ಗುಲಾಬಿ ಕೊಟ್ಟರು ಅನ್ನೋದು ವಿಶೇಷ. ಆ ಬಳಿಕ ಇಬ್ಬರೂ ಪರಸ್ಪರ ಹಗ್ ಕೂಡ ಮಾಡಿಕೊಂಡರು.
ಇದನ್ನೂ ಓದಿ: ವಿಚ್ಛೇದನ ವಿಚಾರ ಹಳೆಯದಾಯ್ತು, ಅಭಿಷೇಕ್-ಐಶ್ವರ್ಯಾ ಬಗ್ಗೆ ಕೇಳಿಬರ್ತಿದೆ ಹೊಸ ಅಪ್ಡೇಟ್
ಐಶ್ವರ್ಯಾ ಹಾಗೂ ಶಿಶಿರ್ ಇಬ್ಬರೂ ಉತ್ತಮ ಆಟ ನೀಡುತ್ತಿದ್ದಾರೆ. ಅವರು ಇನ್ನೂ ಕೆಲವು ವಾರ ಬಿಗ್ ಬಾಸ್ ಮನೆಯಲ್ಲಿ ಇರೋ ಸಾಧ್ಯತೆ ಇದೆ. ಈಗಾಗಲೇ ಸುಮಾರು ಅರ್ಧ ಬಿಗ್ ಬಾಸ್ ಪೂರ್ಣಗೊಂಡಿದೆ. ಏಳನೇ ವಾರದ ಆಟ ಆರಂಭ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.