AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನ ವಿಚಾರ ಹಳೆಯದಾಯ್ತು, ಅಭಿಷೇಕ್-ಐಶ್ವರ್ಯಾ ಬಗ್ಗೆ ಕೇಳಿಬರ್ತಿದೆ ಹೊಸ ಅಪ್​​ಡೇಟ್

2007ರಲ್ಲಿ ಅಭಿಷೇಕ್ ಹಾಗೂ ಐಶ್ವರ್ಯಾ ರೈ ಅವರು ‘ಗುರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಇವರ ಮದುವೆಗೂ ಕೆಲವೇ ತಿಂಗಳು ಮೊದಲು ಈ ಚಿತ್ರವನ್ನು ನೋಡಿ ಫ್ಯಾನ್ಸ್ ಥ್ರಿಲ್ ಆದರು. ಮಣಿರತ್ನಂ ಈ ಜೋಡಿಯನ್ನು ಮತ್ತೆ ‘ರಾವಣ್’ ಸಿನಿಮಾದಲ್ಲಿ ತೆರೆಮೇಲೆ ತಂದರು. ಈಗ ಈ ಜೋಡಿಗೆ ಹೊಂದಿಕೆ ಆಗುವ ಮತ್ತೊಂದು ಕಥೆಯೊಂದಿಗೆ ಅವರು ಬಂದಿದ್ದಾರೆ ಎನ್ನಲಾಗಿದೆ.

ವಿಚ್ಛೇದನ ವಿಚಾರ ಹಳೆಯದಾಯ್ತು, ಅಭಿಷೇಕ್-ಐಶ್ವರ್ಯಾ ಬಗ್ಗೆ ಕೇಳಿಬರ್ತಿದೆ ಹೊಸ ಅಪ್​​ಡೇಟ್
ಅಭಿಷೇಕ್-ಐಶ್ವರ್ಯಾ
ರಾಜೇಶ್ ದುಗ್ಗುಮನೆ
|

Updated on: Nov 07, 2024 | 10:51 AM

Share

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಹಳೆಯದಾಗುತ್ತಾ ಬಂದಿದೆ. ಒಂದೊಮ್ಮೆ ಅವರು ವಿಚ್ಛೇದನ ಪಡೆದರೂ ಯಾರಿಗೂ ಅಚ್ಚರಿ ಎನಿಸುವುದಿಲ್ಲ. ಈಗ ಈ ದಂಪತಿ ಬಗ್ಗೆ ಮತ್ತೊಂದು ಸುದ್ದಿ ಹರಿದಾಡಿದೆ. ‘ಗುರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದ ಈ ಜೋಡಿ ಈಗ ಮತ್ತೆ ತೆರೆಹಂಚಿಕೊಳ್ಳಲು ರೆಡಿ ಆಗಿದೆ ಎನ್ನಲಾಗಿದೆ. ಇವರಿಬ್ಬರ ಫೇವರಿಟ್ ನಿರ್ದೇಶಕ ಮಣಿರತ್ನಂ ಅವರು ಈ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಕೇಳಿ ಅಭಿಷೇಕ್ ಅಭಿಮಾನಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

2007ರಲ್ಲಿ ಅಭಿಷೇಕ್ ಹಾಗೂ ಐಶ್ವರ್ಯಾ ರೈ ಅವರು ‘ಗುರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಇವರ ಮದುವೆಗೂ ಕೆಲವೇ ತಿಂಗಳು ಮೊದಲು ಈ ಚಿತ್ರವನ್ನು ನೋಡಿ ಫ್ಯಾನ್ಸ್ ಥ್ರಿಲ್ ಆದರು. ಮಣಿರತ್ನಂ ಮಾಡಿದ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು. ಮಣಿರತ್ನಂ ಈ ಜೋಡಿಯನ್ನು ಮತ್ತೆ ‘ರಾವಣ್’ ಸಿನಿಮಾದಲ್ಲಿ ತೆರೆಮೇಲೆ ತಂದರು. ಈಗ ಈ ಜೋಡಿಗೆ ಹೊಂದಿಕೆ ಆಗುವ ಮತ್ತೊಂದು ಕಥೆಯೊಂದಿಗೆ ಅವರು ಬಂದಿದ್ದಾರೆ ಎನ್ನಲಾಗಿದೆ.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ಇಬ್ಬರಿಗೂ ಮಣಿರತ್ನಂ ಫೇವರಿಟ್ ನಿರ್ದೇಶಕ. ಅಭಿಷೇಕ್ ನಟನೆಯ ‘ಯುವ’ ಸಿನಿಮಾಗೆ ಮಣಿರತ್ನಂ ಅವರದ್ದೇ ನಿರ್ದೇಶನ ಇತ್ತು. ಆ ಬಳಿಕ ‘ಗುರು’ ಹಾಗೂ ‘ರಾವಣ್’ ಸಿನಿಮಾದಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದರು. ಈಗ ಈ ಸುದ್ದಿ ನಿಜವೇ ಆದಲ್ಲಿ ನಾಲ್ಕನೇ ಬಾರಿಗೆ ಇವರು ಒಂದಾದಂತೆ ಆಗಲಿದೆ.

ಈ ಮೊದಲು ಅಭಿಷೇಕ್ ಅವರು ಮಣಿರತ್ನಂ ಬಗ್ಗೆ ಮಾತನಾಡಿದ್ದರು. ‘ಯುವ’ ಸಿನಿಮಾದ ಕಥೆ ಹೇಳಲು ಅಭಿಷೇಕ್ ಮನೆಗೆ ಮಣಿರತ್ನಂ ಬಂದಿದ್ದರು. ತಂದೆಗೆ ಕಥೆ ಹೇಳಲು ಬಂದಿರಬಹುದು ಎಂದು ಅಭಿಷೇಕ್ ಭಾವಿಸಿದ್ದರು. ಆದರೆ, ನಂತರ ಮಣಿರತ್ನಂ ಸಿನಿಮಾ ಮಾಡೋಕೆ ಬಂದಿದ್ದು ತಮಗೆ ಎಂಬ ವಿಚಾರ ತಿಳಿದು ಅವರಿಗೆ ಖುಷಿ ಆಯಿತು.

ಇದನ್ನೂ ಓದಿ: ‘ದುರ್ಬಲ ಪುರುಷ ಪ್ರಬಲ ಮಹಿಳೆಯನ್ನು ಹ್ಯಾಂಡಲ್ ಮಾಡಲಾರ’; ಅಭಿಷೇಕ್ ಬಚ್ಚನ್ ಬಗ್ಗೆ ಟೀಕೆ

ಅಭಿಷೇಕ್-ಐಶ್ವರ್ಯಾ ವಿಚ್ಛೇದನ ವಿಚಾರ ಈ ಮೊದಲು ಕೂಡ ಚರ್ಚೆ ಆಗಿತ್ತು. 2014ರಲ್ಲಿ ಈ ಬಗ್ಗೆ ವದಂತಿ ಹಬ್ಬಿದ್ದವು. ಆ ಬಳಿಕ ಅವರು ಸ್ಪಷ್ಟನೆ ಕೊಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ