ಓವರ್​ ಕಾನ್ಫಿಡೆನ್ಸ್​ನಿಂದ ಬಿಗ್​ ಬಾಸ್​ನಲ್ಲಿ ಎಡವುತ್ತಿದ್ದಾರಾ ಶೋಭಾ ಶೆಟ್ಟಿ?

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದವರು ಶೋಭಾ ಶೆಟ್ಟಿ ಹಾಗೂ ರಜತ್. ಶೋಭಾ ಶೆಟ್ಟಿ ಈ ಮೊದಲು ತೆಲುಗು ಬಿಗ್ ಬಾಸ್​ನಲ್ಲಿ ಸ್ಪರ್ಧಿಸಿದ್ದರು. ಅದೇ ಜೋಶ್​ನಲ್ಲಿ ಶೋಭಾ ಶೆಟ್ಟಿ ಕನ್ನಡ ಬಿಗ್ ಬಾಸ್​ಗೆ ಬಂದಿದ್ದಾರೆ. ಆದರೆ, ಅವರು ಸೋಲುತ್ತಿದ್ದಾರೆ.

ಓವರ್​ ಕಾನ್ಫಿಡೆನ್ಸ್​ನಿಂದ ಬಿಗ್​ ಬಾಸ್​ನಲ್ಲಿ ಎಡವುತ್ತಿದ್ದಾರಾ ಶೋಭಾ ಶೆಟ್ಟಿ?
ಶೋಭಾ

Updated on: Nov 22, 2024 | 6:15 AM

ಒಂದು ಬಿಗ್ ಬಾಸ್ ಸೀಸನ್​ನಲ್ಲಿ ಆಟ ಆಡಿ ಆ ಸ್ಪರ್ಧಿ ಮತ್ತೆ ಬಿಗ್ ಬಾಸ್​ಗೆ ಬಂದರೆ ಅವರಿಗೆ ಆಟ ಸುಲಭ ಎಂಬುದು ಅನೇಕರ ಅಭಿಪ್ರಾಯ. ಶೋಭಾ ಶೆಟ್ಟಿ ವಿಚಾರದಲ್ಲಿ ಅನೇಕರು ಹೀಗೆಯೇ ಅಂದುಕೊಂಡಿದ್ದರು. ಆದರೆ, ಅದು ಸುಳ್ಳಾಗಿದೆ. ಶೋಭಾ ಶೆಟ್ಟಿ ಅವರು ಮೊದಲ ವಾರವೇ ಸುಸ್ತಾಗಿದ್ದಾರೆ. ಇದಕ್ಕೆ ಓವರ್ ಕಾನ್ಫಿಡೆನ್ಸ್ ಕಾರಣ ಇರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದವರು ಶೋಭಾ ಶೆಟ್ಟಿ ಹಾಗೂ ರಜತ್. ಶೋಭಾ ಶೆಟ್ಟಿ ಈ ಮೊದಲು ತೆಲುಗು ಬಿಗ್ ಬಾಸ್​ನಲ್ಲಿ ಸ್ಪರ್ಧಿಸಿದ್ದರು. ಅವರು ಅಲ್ಲಿ ಸಖತ್ ಅಗ್ರೆಸ್ ಆಗಿ ಆಡಿದ್ದರು. ಅವರ ಆಟ ನೋಡಿ ಅನೇಕರಿಗೆ ಅಚ್ಚರಿ ಆಗಿತ್ತು. ಹುಡುಗಿಯರು ಹೀಗೂ ಆಡಬಹುದಾ ಎಂದು ತೋರಿಸಿಕೊಟ್ಟಿದ್ದರು.

ಅದೇ ಜೋಶ್​ನಲ್ಲಿ ಶೋಭಾ ಶೆಟ್ಟಿ ಕನ್ನಡ ಬಿಗ್ ಬಾಸ್​ಗೆ ಬಂದಿದ್ದಾರೆ. ರಿಯಾಲಿಟಿ ಶೋ ಒಂದೇ ಆದರೂ ಆಟಗಾರರು, ಆಟದ ಫಾರ್ಮ್ಯಾಟ್ ಸಂಪೂರ್ಣವಾಗಿ ಬದಲಾಗಿದೆ. ಅದರಲ್ಲೂ ಶೋಭಾ ಅವರು ವೈಲ್ಡ್ ಕಾರ್ಡ್ ಮೂಲಕ ಬಂದಿರುವುದರಿಂದ ಅವರಿಗೆ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಬೇಕಿದೆ.

ಇದನ್ನೂ ಓದಿ: ಮೊದಲ ಆಟದಲ್ಲೇ ಭವ್ಯಾ ಎದುರು ಸೋತು ಅಳುತ್ತಾ ಕುಳಿತ ಶೋಭಾ ಶೆಟ್ಟಿ

ಶೋಭಾ ಶೆಟ್ಟಿ ಅವರು ತುಂಬಾನೇ ಓವರ್ ಕಾನ್ಫಿಡೆನ್ಸ್​ನಿಂದ ಆಟ ಆಡುತ್ತಿದ್ದಾರೆ ಎಂದು ಅನೇಕರಿಗೆ ಅನಿಸಿದೆ. ಈ ಓವರ್ ಕಾನ್ಫಿಡೆನ್ಸ್​ನಿಂದಲೇ ಅವರಿಗೆ ಹಿನ್ನಡೆ ಆಗುತ್ತಿದೆ. ಅವರ ನಾಯಕತ್ವದಲ್ಲಿ ಮೊದಲ ಟಾಸ್ಕ್​ನ ಅವರು ಸೋತಿದ್ದಾರೆ. ಇದರಿಂದ ಅವರಿಗೆ ಸಾಕಷ್ಟು ಬೇಸರ ಆಗಿದ್ದು, ಕಣ್ಣೀರು ಹಾಕಿದ್ದಾರೆ. ಆ ಬಳಿಕ ಅವರು ಎರಡು ಬಾರಿ ಪೆಟ್ಟು ಮಾಡಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನೋಡಿದರೆ ಶೋಭಾ ಶೆಟ್ಟಿ ಅವರು ತುಂಬಾನೇ ಓವರ್ ಕಾನ್ಫಿಡೆನ್ಸ್​ನಿಂದ ಆಡುತ್ತಿರುವುದು ಸ್ಪಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:14 am, Fri, 22 November 24

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us