ಸಿಹಿ-ಕಹಿ ಚಂದ್ರು ಅವರು ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರ (Weekend With Ramesh) ಅತಿಥಿಯಾಗಿ ಬಂದಿದ್ದಾರೆ. ಕಳೆದ ವೀಕೆಂಡ್ನಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿದೆ. ಇಡೀ ಎಪಿಸೋಡ್ ಸಖತ್ ಫನ್ ಆಗಿತ್ತು. ಸಿಹಿ-ಕಹಿ ಚಂದ್ರು (Sihi Kahi Chandru) ಅವರು ಸದಾ ಹಸನ್ಮುಖಿ. ತೆರೆಮೇಲೆ ಹಾಗೂ ತೆರೆಹಿಂದೆ ಅವರು ಎಲ್ಲರನ್ನೂ ನಗಿಸುತ್ತಾರೆ. ವಿವಿಧ ತಿನಿಸು ತಿನ್ನೋದು ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಅವರು ಕಾಲೇಜು ದಿನಗಳಲ್ಲಿ ಭಗ್ನಪ್ರೇಮಿ ಆಗಿದ್ದರಂತೆ! ಈ ವಿಚಾರವನ್ನು ಅವರ ಗ್ಯಾಂಗ್ ಸದಸ್ಯರು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಸಿಹಿ-ಕಹಿ ಚಂದ್ರು ಮಾತನಾಡಿದ್ದಾರೆ.
ವೀಕೆಂಡ್ ವಿತ್ ರಮೇಶ್ ಎಪಿಸೋಡ್ನಲ್ಲಿ ಹಳೆಯ ಘಟನೆ ನೆನಪಿಸಿಕೊಳ್ಳಲಾಗುತ್ತದೆ. ಕಾಲೇಜು ದಿನದ ಗೆಳೆಯರು ಬಂದು ಹಳೆ ಸ್ಟೋರಿಯನ್ನು ಹೇಳುತ್ತಾರೆ. ಅದೇ ರೀತಿ ಸಿಹಿ-ಕಹಿ ಚಂದ್ರು ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲಾಗಿದೆ. ‘ಕಾಲೇಜು ದಿನಗಳಲ್ಲಿ ಭಗ್ನಪ್ರೇಮಿಯಾಗಿ ಸಕ್ಕರೆ ಬೈಲಿನ ಕಲ್ಲಿನ ಬಂಡೆಮೇಲೆ ಬಿಯರ್ ಬಾಟಲಿ ಖಾಲಿ ಮಾಡಿದ್ದೆ’ ಎಂದು ಸಿಹಿ-ಕಹಿ ಚಂದ್ರು ಬಗ್ಗೆ ಗೆಳೆಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಾಧಕರ ಕುರ್ಚಿಯಲ್ಲಿ ಸಿಹಿ-ಕಹಿ ಚಂದ್ರು, ಎಪಿಸೋಡ್ ಪೂರಾ ಸಿಹಿಯೇ
ಸಿಹಿ-ಕಹಿ ಚಂದ್ರು ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ಅವರು ಈ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ ಉತ್ತರ ನೀಡಿದ್ದಾರೆ. ‘ಭಗ್ನಪ್ರೇಮಿ ಒಂದು ಸಲ ಆದ್ರೆ ಹೇಳಬಹುದು. ಸಾಕಷ್ಟು ಬಾರಿ ಆಗಿದ್ದೇನೆ. ಪ್ರೇಮ ಮಾಡಿದ್ರೆ ಆಗಲ್ಲ ಅಂದ್ಕೊಂಡೆ. ಪ್ರೇಮ ಭಗ್ನ ಆದ್ರೆ ಕುಡಿಯಬಾರದು ಎಂದು ನಿರ್ಧರಿಸಿದೆ’ ಎಂದರು ಸಿಹಿ-ಕಹಿ ಚಂದ್ರು. ‘ಹಾಗಿದ್ರೆ ಒಂದು ಬಿಯರ್ ಬಾಟಲ್ ಅಲ್ಲ, ಕ್ರೇಟ್ ಖಾಲಿ ಆಗಿರಬೇಕು’ ಎಂದು ಕಾಲೆಳೆದರು ರಮೇಶ್ ಅರವಿಂದ್.
ದೂರದರ್ಶನದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಿಂದಲೇ ಪ್ರಸಾರವಾದ ಕನ್ನಡದ ಧಾರಾವಾಹಿಯಲ್ಲಿ ಸಿಹಿ-ಕಹಿಯಲ್ಲಿ ಚಂದ್ರು ನಟಿಸಿದರು. ಅಲ್ಲೇ ಗೀತಾ ಅವರ ಪರಿಚಯವಾಗಿ ಅದು ಪ್ರೇಮವಾಗಿ ಮದುವೆಯೂ ಆಯಿತು. ಅದಾದ ಬಳಿಕ ಒಂದರ ಹಿಂದೊಂದು ಸಿನಿಮಾಗಳು ಸಿಗಲು ಆರಂಭವಾದವು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ