‘ಬಿಗ್ ಬಾಸ್ ಕನ್ನಡ ಸೀಸನ್ 10’ನಿಂದ ಸ್ನೇಹಿತ್ ಗೌಡ ಅವರು ಕಳೆದ ವಾರ ಔಟ್ ಆಗಿದ್ದಾರೆ. ಅವರು ಮನೆಯಿಂದ ಹೋದ ಬಗ್ಗೆ ನಮ್ರತಾ ಗೌಡ (Namratha Gowda) , ವಿನಯ್ ಗೌಡಗೆ ಬೇಸರ ಇದೆ. ಈಗ ಸ್ನೇಹಿತ್ ಗೌಡ ಅವರು ಹೊರ ಪ್ರಪಂಚಕ್ಕೆ ಬಂದ ಬಳಿಕ ಮತ್ತೆ ಡಯಟ್ ಶುರು ಮಾಡಿದ್ದಾರೆ. ಜಿಮ್ಗೆ ಮರಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಹಿತಿ ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದಿದ್ದರು. ಈ ವೇಳೆ ಅವರು ಕೆಲವು ವಿಚಾರ ಹಂಚಿಕೊಂಡಿದ್ದಾರೆ.
‘ನೀವು ನಿತ್ಯ ಬಿಗ್ ಬಾಸ್ ನೋಡ್ತಾ ಇದೀರಾ’ ಎಂದು ಕೆಲವರು ಕೇಳಿದರು. ಇದಕ್ಕೆ ಹೌದು ಎನ್ನುವ ಉತ್ತರ ಕೊಟ್ಟಿದ್ದಾರೆ ಸ್ನೇಹಿತ್. ‘ನನ್ನ ಮೂವರು ಗೆಳೆಯರು (ನಮ್ರತಾ, ವಿನಯ್, ಮೈಕಲ್) ಬಿಗ್ ಬಾಸ್ ಮನೆಯಲ್ಲಿ ಇನ್ನೂ ಆಟ ಆಡುತ್ತಿದ್ದಾರೆ. ಅವರು ಎಲ್ಲಿಯವರೆಗೆ ಬಿಗ್ ಬಾಸ್ ಮನೆಯಲ್ಲಿ ಇರ್ತಾರೋ ಅಲ್ಲಿಯವರೆಗೆ ಬಿಗ್ ಬಾಸ್ ನೋಡ್ತೀನಿ. ಅವರು ಹೊರ ಬಂದ ಬಳಿಕ ಬಿಗ್ ಬಾಸ್ ನೋಡೋದನ್ನು ನಿಲ್ಲಿಸುತ್ತೇನೆ’ ಎಂದಿದ್ದಾರೆ ಸ್ನೇಹಿತ್.
ಸ್ನೇಹಿತ್ ಗೌಡ ಬಗ್ಗೆ ಸಾಕಷ್ಟು ಟ್ರೋಲ್ಗಳು ಹರಿದಾಡಿವೆ. ಅವರಿಗೆ ನಿಕ್ನೇಮ್ ಕೂಡ ಇಡಲಾಗಿದೆ. ಈ ಎಲ್ಲಾ ವಿಚಾರಗಳು ಹೊರ ಬಂದ ಬಳಿಕ ಅವರಿಗೆ ಗೊತ್ತಾಗಿದೆ. ಹೀಗಾಗಿ ಅವರು ಯಾವುದೇ ಮಾಧ್ಯಮಗಳಿಗೆ ಸಂದರ್ಶನ ನೀಡಿಲ್ಲ. ಟ್ರೋಲ್ ಬಗ್ಗೆ ಅವರು ಮಾತನಾಡಿದ್ದಾರೆ. ‘ಬಿಗ್ ಬಾಸ್ನಿಂದ ಹೊರ ಬಂದಾಗ ಆರಂಭದಲ್ಲಿ ಟ್ರೋಲ್ ನೋಡಿ ಭಯ ಆಯ್ತು. ಈಗ ಆ ಭಯ ಇಲ್ಲ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಸಖತ್ ಹರ್ಟ್ ಮಾಡಿದ್ದೇನೆ’; ಸ್ನೇಹಿತ್ನ ನೆನೆದು ಕಣ್ಣೀರು ಹಾಕಿದ ನಮ್ರತಾ ಗೌಡ
ಸ್ನೇಹಿತ್ ಬೇರೆಯವರಿಗೋಸ್ಕರ ಆಟ ಆಡಿದ್ದಾರೆ. ಅವರು ಪ್ರಯತ್ನ ಹಾಕಿದ್ದರೆ ಇನ್ನೂ ಕೆಲವು ದಿನ ಇರಬಹುದಿತ್ತು ಎನ್ನುವ ಕಮೆಂಟ್ಗಳು ಬಂದಿವೆ. ಆದರೆ, ಇದನ್ನು ಸ್ನೇಹಿತ್ ಗೌಡ ಒಪ್ಪಿಲ್ಲ. ಬಿಗ್ ಬಾಸ್ನ ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ