AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ, ದೀಪಾವಳಿ ಹಬ್ಬಗಳ ಪ್ರಯುಕ್ತ ‘ಸನ್‌ ಉದಯ’ ವಾಹಿನಿಯಲ್ಲಿ ‘ನವಶಕ್ತಿ ವೈಭವ’

ಅಕ್ಟೋಬರ್‌ 11ರ ಭಾನುವಾರ ರಾತ್ರಿ 9 ಗಂಟೆಗೆ ʻನವಶಕ್ತಿ ವೈಭವ’ ಸರಣಿಯ ಮೊದಲ ಸಂಚಿಕೆ ಪ್ರಸಾರ ಆಗಲಿದೆ. ಹಬ್ಬಗಳ ಪ್ರಯುಕ್ತ ‘ಸನ್ ಉದಯ’ ವಾಹಿನಿಯ ಜನಪ್ರಿಯ ಧಾರಾವಾಹಿಗಳ 9 ನಾಯಕಿಯರು ದೇವಿ ಅಂಶವಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ವಾಹಿನಿ ಮಾಹಿತಿ ಹಂಚಿಕೊಂಡಿದೆ.

ದಸರಾ, ದೀಪಾವಳಿ ಹಬ್ಬಗಳ ಪ್ರಯುಕ್ತ ‘ಸನ್‌ ಉದಯ’ ವಾಹಿನಿಯಲ್ಲಿ ‘ನವಶಕ್ತಿ ವೈಭವ’
Ratha Saptami
ಮದನ್​ ಕುಮಾರ್​
|

Updated on: Oct 07, 2026 | 10:27 PM

Share

ಹಬ್ಬಗಳ ಸೀಸನ್ ನಡೆಯುತ್ತಿದೆ. ಈ ಪ್ರಯುಕ್ತ ‘ಸನ್ ಉದಯ’ ವಾಹಿನಿ ವಿಶೇಷ ದೈವಿಕ ಕಥೆಗಳನ್ನು ವೀಕ್ಷಕರಿಗೆ ತೋರಿಸಲು ಸಜ್ಜಾಗಿದೆ. ಹೊಸ ಥರದ ಕೌಟುಂಬಿಕ ಕಥೆಗಳಿಂದ ನೋಡುಗರ ಮನ ಗೆಲ್ಲುತ್ತಿರುವ ಈ ವಾಹಿನಿಯಲ್ಲಿ ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ‘ನವಶಕ್ತಿ ವೈಭವ’ ವಿಶೇಷ ಸಂಚಿಕೆಗಳ ಮೂಲಕ ಮಹಿಳಾ ಶಕ್ತಿಯನ್ನು ಸಂಭ್ರಮಿಸಲು ತಯಾರಿ ನಡೆಸಿದೆ. ಆ ಬಗ್ಗೆ ವಾಹಿನಿ ಮಾಹಿತಿ ಹಂಚಿಕೊಂಡಿದೆ.

ಒಂಭತ್ತು ದೇವಿ ಕ್ಷೇತ್ರಗಳಲ್ಲಿ ನಡೆಯುವ ಒಂಭತ್ತು ದೈವಿಕ ಕಥೆಗಳಲ್ಲಿ ‘ಸನ್‌ ಉದಯ’ ವಾಹಿನಿಯ ‘ರಥಸಪ್ತಮಿ’, ‘ಮಹಾಲಕ್ಷ್ಮೀ ಮದುವೆ’, ‘ಗೆಳತಿ ಗಾಯತ್ರಿ’, ‘ಮೂಗುತಿ ಮಲ್ಲಿ’, ‘ಶಾಂತಿ ನಿವಾಸ’, ‘ಮಾಂಗಲ್ಯ’, ‘ಕೃಷ್ಣವಂಶಿ’ ಮತ್ತು ‘ಮೈನಾ’ ಧಾರಾವಾಹಿಗಳ 9 ನಾಯಕಿಯರು ದೇವಿ ಅಂಶವಾಗಿ ಕಾಣಿಸಿಕೊಳ್ಳಲಿದ್ದಾರೆ.

‘ಮೈಸೂರು, ಕೊಲ್ಲೂರು, ಕಟೀಲು, ಶಿರಸಿ, ಸವದತ್ತಿ ಮುಂತಾದ 9 ದೇವಿ ಕ್ಷೇತ್ರಗಳಲ್ಲೇ ವಿಶೇಷ ಸಂಚಿಕೆಗಳು ಚಿತ್ರೀಕರಣಗೊಳ್ಳುತ್ತಿರುವುದು ವಿಶೇಷ. ಇದು ನಂಬಿಕೆಗಳಿಗಿಂತ ಮಿಗಿಲಾಗಿ ಮಹಿಳೆಯರ ಆತ್ಮವಿಶ್ವಾಸ ಹಾಗೂ ಅಂತಃಶಕ್ತಿಗಳನ್ನು ಬಡಿದೆಬ್ಬಿಸುವ ಕಥಾಗುಚ್ಛವಾಗಿದೆ. ದೈವೀಕ ಶಕ್ತಿ ಸ್ತ್ರೀಯಲ್ಲಿ ಅಡಕವಾಗಿರುತ್ತದೆ ಮತ್ತು ಮಹಿಳಾ ಶಕ್ತಿಯನ್ನು ದಮನಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸುವಂಥ ಕಥೆಗಳು ರೂಪುಗೊಳ್ಳುತ್ತಿವೆ’ ಎಂದು ‘ಸನ್‌ ಉದಯ’ ವಾಹಿನಿ ತಿಳಿಸಿದೆ.

ʻನವಶಕ್ತಿ ವೈಭವ’ ಸರಣಿಯಲ್ಲಿ ಅಕ್ಟೋಬರ್‌ 11ರ ಭಾನುವಾರ ರಾತ್ರಿ 9 ಗಂಟೆಗೆ ಮೊದಲ ಸಂಚಿಕೆ ‘ರಥ ಸಪ್ತಮಿ’ ಪ್ರಸಾರವಾಗಲಿದೆ. ಇದು ಮೈಸೂರಿನಲ್ಲಿ ಚಿತ್ರೀಕರಣಗೊಂಡಿದೆ. ಮೈಕ್ರೋಫೈನಾನ್ಸ್‌ ಸಾಲದ ಸುಳಿಗೆ ಸಿಲುಕಿದ ಶಿಕ್ಷಕಿ ಹಾಗೂ ಆಕೆಯ ಪುತ್ರಿಯನ್ನು ಬಚಾವು ಮಾಡಲು, ಸಪ್ತಮಿ ತನ್ನ ಬುದ್ಧಿ ಶಕ್ತಿ ಹಾಗೂ ಆತ್ಮಬಲವನ್ನೇ ಅಸ್ತ್ರಗಳನ್ನಾಗಿ ಬಳಸಿ ದುಷ್ಟ ಮರ್ದನ ಮಾಡಿ ಹೇಗೆ ನೊಂದವರ ಪಾಲಿಗೆ ದೇವಿಯಾಗಿ ಕಂಗೊಳಿಸುತ್ತಾಳೆ ಎಂಬುದು ಕಥಾಹಂದರ.

ಇದನ್ನೂ ಓದಿ: ಮೈಸೂರು ದಸರಾ: ಸಿಡಿಮದ್ದು ತಾಲೀಮು ಯಶಸ್ವಿ; ಭಾರೀ ಶಬ್ದಕ್ಕೆ ಅಂಜದ ಗಜಪಡೆ, ಅಶ್ವದಳ

ಇದು ಪವಾಡಗಳಿಗಿಂತ ಮಿಗಿಲಾಗಿ ವಾಸ್ತವದ ನೆಲೆಗಟ್ಟಿನ ಮೇಲೆ ಹೆಣ್ಣನ್ನು ದೈವೀಕತೆಯೊಂದಿಗೆ ಸಮೀಕರಿಸುತ್ತದೆ. ‘ರಥ ಸಪ್ತಮಿ’ ನಾಯಕಿ ಮೌಲ್ಯ ಗೌಡ ಅವರು ನಾಯಕ ಜೀವನ್ ಜೊತೆಗೆ ವಿಶೇಷ ಪಾತ್ರಗಳಲ್ಲಿ ಸ್ವಪ್ನಾ ರಾಜ್‌, ಸುದರ್ಶನ್‌, ಇಶಿಕಾ ಮುಂತಾದ ಕಲಾವಿದರು ನಟಿಸಿದ್ದಾರೆ. ʻನವಶಕ್ತಿ ವೈಭವ’ ಒಂದು ಗಂಟೆಯ ವಿಶೇಷ ಸಂಚಿಕೆಗಳು ಅಕ್ಟೋಬರ್‌ 11ರಿಂದ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ