AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶವವಾಗಿ ಪತ್ತೆಯಾದ ಕಿರುತೆರೆ ನಟಿ ಸುಭಾಷಿಣಿ; ಗಂಡನಿಗೆ ಕೊನೆಯ ವಿಡಿಯೋ ಕಾಲ್

ಕಿರುತೆರೆಯಲ್ಲಿ ಖ್ಯಾತಿ ಪಡೆದಿದ್ದ ನಟಿ ಸುಭಾಷಿಣಿ ಬಾಲಸುಬ್ರಮಣಿಯಂ ಅವರು ನಿಧನರಾಗಿದ್ದಾರೆ. ಸಾಯುವುದಕ್ಕೂ ಮುನ್ನ ಅವರು ಗಂಡನಿಗೆ ವಿಡಿಯೋ ಕಾಲ್ ಮಾಡಿದ್ದರು. ಇದು ಆತ್ಮಹತ್ಯೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

ಶವವಾಗಿ ಪತ್ತೆಯಾದ ಕಿರುತೆರೆ ನಟಿ ಸುಭಾಷಿಣಿ; ಗಂಡನಿಗೆ ಕೊನೆಯ ವಿಡಿಯೋ ಕಾಲ್
Subashini Balasubramaniyam
ಮದನ್​ ಕುಮಾರ್​
|

Updated on: Apr 06, 2026 | 10:25 PM

Share

‘ಸನ್ ಟಿವಿ’ಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಕಯಲ್’ (Kayal) ಮೂಲಕ ಮನೆಮಾತಾಗಿದ್ದ ನಟಿ ಸುಭಾಷಿಣಿ ಬಾಲಸುಬ್ರಮಣಿಯಂ ಇಂದು (ಏಪ್ರಿಲ್ 6) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಉದಯೋನ್ಮುಖ ನಟಿಯ ಹಠಾತ್ ಸಾವು (Subashini Death) ತಮಿಳು ಕಿರುತೆರೆ ಲೋಕಕ್ಕೆ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ವರದಿಗಳ ಪ್ರಕಾರ, ಚೆನ್ನೈನ ತಮ್ಮ ನಿವಾಸದಲ್ಲಿ ಸುಭಾಷಿಣಿ (Subashini Balasubramaniyam) ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.

ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ನಡೆದ ವೈಯಕ್ತಿಕ ಜಗಳ ಮತ್ತು ಅದರಿಂದ ಉಂಟಾದ ಮಾನಸಿಕ ಸಂಕಟವೇ ಸುಭಾಷಿಣಿ ಅವರ ಈ ದುಡುಕಿನ ನಿರ್ಧಾರಕ್ಕೆ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ನಟಿಯ ಸಾವಿನಿಂದ ತಮಿಳು ಕಿರುತೆರೆ ಲೋಕದಲ್ಲಿ ಶೋಕ ಮನೆ ಮಾಡಿದೆ.

ಮೂಲತಃ ಶ್ರೀಲಂಕಾದವರಾದ ಸುಭಾಷಿಣಿ, ನಟನೆಯಲ್ಲಿ ಏನಾದರೂ ಸಾಧಿಸಬೇಕೆಂಬ ದೊಡ್ಡ ಕನಸಿನೊಂದಿಗೆ ಚೆನ್ನೈಗೆ ಬಂದಿದ್ದರು. ಆರಂಭದಲ್ಲಿ ಅನೇಕ ಆಡಿಷನ್‌ಗಳು ಮತ್ತು ಸಣ್ಣಪುಟ್ಟ ಪಾತ್ರಗಳಿಗಾಗಿ ಸಾಕಷ್ಟು ಕಷ್ಟಪಟ್ಟಿದ್ದರು. ಸತತ ಪ್ರಯತ್ನದ ಫಲವಾಗಿ ಅವರಿಗೆ ಸನ್ ಟಿವಿಯ ‘ಕಯಲ್’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು.

‘ಕಯಲ್’ ಧಾರಾವಾಹಿಯ ಪಾತ್ರ ಸುಭಾಷಿಣಿ ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು. ತಮ್ಮ ಗಮನಾರ್ಹ ನಟನೆಯ ಮೂಲಕ ತಮಿಳು ಕಿರುತೆರೆ ಪ್ರೇಕ್ಷಕರ ಮನೆಮನೆಯಲ್ಲೂ ಗುರುತಿಸಿಕೊಂಡಿದ್ದ ಅವರು, ಭವಿಷ್ಯದಲ್ಲಿ ಸಿನಿಮಾಗಳಲ್ಲೂ ನಟಿಸುವ ಆಶಯ ಹೊಂದಿದ್ದರು. ಅವರ ಅಭಿನಯವು ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಆದರೆ ಅವರ ಜೀವನ ದುರಂತ ಅಂತ್ಯ ಕಂಡಿದೆ.

ಇದನ್ನೂ ಓದಿ: ಧಾರಾವಾಹಿ ಶೂಟಿಂಗ್ ವೇಳೆ ಸಮುದ್ರದಲ್ಲಿ ಮುಳುಗಿ ನಟನ ಸಾವು

ಸುಭಾಷಿಣಿ ಬಾಲಸುಬ್ರಮಣಿಯಂ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಸಹನಟರು ಕಂಬನಿ ಮಿಡಿದಿದ್ದಾರೆ. ಇದೇ ವೇಳೆ, ಮನರಂಜನಾ ಕ್ಷೇತ್ರದಲ್ಲಿ ಕಲಾವಿದರು ಅನುಭವಿಸುವ ಒತ್ತಡ, ವೈಯಕ್ತಿಕ ಜೀವನದ ಸಮಸ್ಯೆಗಳು ಮತ್ತು ಮಾನಸಿಕ ಆರೋಗ್ಯದ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗಳು ಆರಂಭವಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us