ಚಿಕ್ಕವರಿಗೆ ವಿಲನ್ ಬುದ್ಧಿ ಹೇಳಿಕೊಟ್ಟ ಉಗ್ರಂ ಮಂಜು; ಹೆದರಿಕೊಂಡ ಧನರಾಜ್

ಉಗ್ರಂ ಮಂಜು ಅವರು ಎಂಥ ವಿಲನ್ ಎಂಬುದು ಎಲ್ಲರಿಗೂ ಗೊತ್ತು. ದೊಡ್ಮನೆಯಲ್ಲಿ ಇರುವ ಧನರಾಜ್ ಮತ್ತು ಹನುಮಂತನಿಗೆ ಆ ಗುಣ ಕಲಿಸಲು ಮಂಜು ಪ್ರಯತ್ನಿಸಿದ್ದಾರೆ. ಆದರೆ ಆ ಪ್ರಯತ್ನದಲ್ಲಿ ಅವರಿಗೆ ಫಲ ಸಿಕ್ಕಿಲ್ಲ. ಮಂಜು ರೀತಿ ವಿಲನ್ ಆಗಲು ಹನುಮಂತ ಮತ್ತು ಧನರಾಜ್​ ಅವರಿಗೆ ಸಾಧ್ಯವಾಗಲೇ ಇಲ್ಲ.

ಚಿಕ್ಕವರಿಗೆ ವಿಲನ್ ಬುದ್ಧಿ ಹೇಳಿಕೊಟ್ಟ ಉಗ್ರಂ ಮಂಜು; ಹೆದರಿಕೊಂಡ ಧನರಾಜ್
Bigg Boss Kannada 11

Updated on: Dec 19, 2024 | 11:01 PM

ಸಿನಿಮಾಗಳಲ್ಲಿ ವಿಲನ್ ಪಾತ್ರದ ಮೂಲಕ ಉಗ್ರಂ ಮಂಜು ಅವರು ಫೇಮಸ್​. ಹಾಗಾಗಿ ಅವರು ಅಂಥ ಪಾತ್ರಗಳ ಹಾವ ಭಾವ ಚೆನ್ನಾಗಿ ಮೈಗೂಡಿದೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದಲ್ಲೂ ಉಗ್ರಂ ಮಂಜು ವಿಲನ್ ಆಗಿದ್ದಾರೆ. ಈಗ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ವಿಲನ್ ರೀತಿ ವರ್ತಿಸುವುದು ಹೇಗೆ ಎಂದು ಅವರು ಧನರಾಜ್​ ಮತ್ತು ಹನುಮಂತನಿಗೆ ಹೇಳಿಕೊಟ್ಟಿದ್ದಾರೆ. ತ್ರಿವಿಕ್ರಮ್ ಮತ್ತು ರಜತ್ ಎದುರು ವಿಲನ್ ರೀತಿ ಹೇಗೆ ಡೈಲಾಗ್ ಹೊಡೆಯಬೇಕು ಎಂದು ಧನರಾಜ್​ಗೆ ಮಂಜು ಹೇಳಿಕೊಟ್ಟಿದ್ದಾರೆ. ಆದರೆ ಹೇಳಿಕೊಟ್ಟಿದ್ದನ್ನು ಸರಿಯಾಗಿ ಮಾಡಲು ಧನರಾಜ್​ಗೆ ಸಾಧ್ಯವಾಗಿಲ್ಲ.

ಟಾಸ್ಕ್ ನಡುವೆ ಉಗ್ರಂ ಮಂಜು, ಧನರಾಜ್, ಹನುಮಂತ, ಗೌತಮಿ ಅವರು ಒಟ್ಟಿಗೆ ಕುಳಿತು ಮಾತನಾಡುತ್ತಿದ್ದರು. ಅವರ ಎದುರು ತ್ರಿವಿಕ್ರಮ್, ಭವ್ಯಾ, ರಜತ್ ಕುಳಿತಿದ್ದರು. ತ್ರಿವಿಕ್ರಮ್ ಮತ್ತು ರಜತ್​ ಅವಾಜ್ ಹಾಕುವಂತೆ ಧನರಾಜ್​ ಹಾಗೂ ಹನುಮಂತನಿಗೆ ಉಗ್ರಂ ಮಂಜು ಸೂಚನೆ ನೀಡಿದರು. ‘ರಾ ಲುಕ್​ನಲ್ಲಿ ವಿಕ್ಕಿಯನ್ನು ಗುರಾಯಿಸು. ವಿಲನ್​ಗಳು ಎಂದರೆ ಹಂಗೇ ಇರಬೇಕು’ ಎಂದು ಮಂಜು ಹೇಳಿದರು.

‘ಏ ವಿಕ್ಕಿ.. ಲಾಲಿಪಾಪ್ ಬೇಕ? ಸ್ಪೂನ್ ಯಾಕೋ ಹಂಗೆ ಚುಚ್ಚುತ್ತಿದ್ದೀಯ? ನಿಂತುಕೊಂಡು ಆರಾಮಾಗಿ ಇರು. ಹೀಗೆಲ್ಲ ಗುರಾಯಿಸಬೇಡ’ ಎಂದು ಮಂಜು ಹೇಳಿಕೊಟ್ಟ ಡೈಲಾಗ್​ ಅನ್ನು ಧನರಾಜ್​ ಹೇಳಿದರು. ಇಷ್ಟು ಡೈಲಾಗ್ ಹೇಳಲು ಮಾತ್ರ ಧನರಾಜ್ ಅವರಿಗೆ ಸಾಧ್ಯವಾಯ್ತು. ಇನ್ನುಳಿದ ಡೈಲಾಗ್​ಗಳನ್ನು ಹೇಳಲು ಅವರು ಹೆದರಿಕೊಂಡರು. ‘ಹನುಮಂತನಿಗೂ ಒಂದೆರೆಡು ಡೈಲಾಗ್ ಕೊಡಿ’ ಎಂದು ಧನರಾಜ್ ಜಾರಿಕೊಂಡರು.

ಇದನ್ನೂ ಓದಿ: ಸ್ವಾಭಿಮಾನ ಬಿಟ್ಟು ಗೌತಮಿ ಜಾದವ್ ಹಿಂದೆ ಹೋಗುತ್ತಿರುವ ಉಗ್ರಂ ಮಂಜು

ಧನರಾಜ್ ಹೇಳಿದ ಮಾತು ಕೇಳಿ ಎಲ್ಲರಿಗೂ ನಗು ಬಂತು. ‘ಹೇಳಿಕೊಟ್ಟರೂ ಇವನಿಗೆ ಹೇಳೋಕೆ ಬರುತ್ತಿಲ್ಲ’ ಎಂದು ಎಲ್ಲರೂ ನಕ್ಕರು. ಬಿಗ ಬಾಸ್​ ಮನೆಯಲ್ಲಿ ಇಂಥ ಫನ್ನಿ ಸಂಗತಿಗಳು ಕಾಣಸಿಗುವುದು ಬಹಳ ಅಪರೂಪ ಆಗಿದೆ. ಬರೀ ಜಗಳಗಳೇ ತುಂಬಿರುವಾಗ ಇಂಥ ಸಣ್ಣ ಸಣ್ಣ ತಮಾಷೆಗಳು ಪ್ರೇಕ್ಷಕರಿಗೆ ಖುಷಿ ನೀಡುತ್ತಿವೆ. ಧನರಾಜ್ ಮತ್ತು ಹನುಮಂತ ಅವರು ನಗಿಸಲು ಪ್ರಯತ್ನಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈಗ 81 ದಿನಗಳ ಕಳೆದಿವೆ. ಇನ್ನು ಕೆಲವೇ ದಿನಗಳಲ್ಲಿ ಫಿನಾಲೆ ಸಮೀಪಿಸಲಿದೆ. ಕಳೆದ ವಾರ ಶಿಶಿರ್ ಅವರು ಎಲಿಮಿನೇಟ್ ಆದರು. ಈ ವಾರ ಯಾರ ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:24 pm, Thu, 19 December 24

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us