ಬಿಗ್ ಬಾಸ್ ಸೀಸನ್ 8 ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಈ ವಾರ ಯಾವುದೇ ಟಾಸ್ಕ್ ಇಲ್ಲದ ಕಾರಣ ಸ್ಪರ್ಧಿಗಳು ಮನೆಯಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಈ ಮಧ್ಯೆ ಟಾಸ್ಕ್ ಇಲ್ಲದ ಕಾರಣ ಸ್ಪರ್ಧಿಗಳು ಮನೆಯಲ್ಲಿ ಟೈಮ್ ಪಾಸ್ಗೆ ದಾರಿ ಸಿಗುತ್ತಿಲ್ಲ. ಹೀಗಾಗಿ, ಕೆಲ ಸ್ಪರ್ಧಿಗಳಿಗೆ ತೂಕಡಿಕೆ ಬರುತ್ತಿದೆ. ಮನೆಯಲ್ಲಿ ನಿದ್ದೆ ಮಾಡೋಕೆ ಹೋದ ವೈಷ್ಣವಿ ಹಾಗೂ ಮಂಜುಗೆ ಬಿಗ್ ಬಾಸ್ ಶಿಕ್ಷೆ ನೀಡಿದ್ದಾರೆ!
ಜುಲೈ 30ರ ಎಪಿಸೋಡ್ನಲ್ಲಿ ವೈಷ್ಣವಿ ಹಾಗೂ ಮಂಜು ಒಂದು ಕಡೆ ಕೂತಿದ್ದರು. ಅವರಿಗೆ ನಿದ್ದೆ ಬರುತ್ತಿದೆ ಅನ್ನೋದು ಅವರು ನಡೆದುಕೊಳ್ಳುತ್ತಿದ್ದ ರೀತಿಯಲ್ಲೇ ಗೊತ್ತಾಗುತ್ತಿತ್ತು. ಈ ವೇಳೆ ಬಿಗ್ ಬಾಸ್ ಕಡೆಯಿಂದ ಕರೆ ಬಂದಿದೆ. ಮಂಜು ಪಾವಗಡ ಹೋಗಿ ಕಾಲ್ ಎತ್ತಿದ್ದಾರೆ.
‘ಮಂಜು ನಿಮಗೆ ನಿದ್ದೆ ಬರ್ತಿದೆಯಾ?’ ಎಂದು ಬಿಗ್ ಬಾಸ್ ಪ್ರಶ್ನೆ ಮಾಡಿದರು. ಇದಕ್ಕೆ ಹೌದು ಎನ್ನುವ ಉತ್ತರ ಮಂಜು ಕಡೆಯಿಂದ ಬಂತು. ಅಲ್ಲದೆ, ನಿದ್ರೆ ಮಾಡೋಕೆ ಏನಾದರೂ ಅವಕಾಶ ಕೊಡ್ತೀರಾ ಎಂದು ಬಿಗ್ ಬಾಸ್ಗೆ ಮಂಜು ಕೇಳಿದರು. ಆಗ ಬಿಗ್ ಬಾಸ್ ‘ಇಲ್ಲ, ನಿಮಗೊಂದು ಟಾಸ್ಕ್ ಕೊಡ್ತೀವಿ, ನಿದ್ದೆ ಹೋಗಲಿದೆ’ ಎಂದರು.
ಅಂತೆಯೇ ಬಿಗ್ ಬಾಸ್ ಮಂಜು ಹಾಗೂ ವೈಷ್ಣವಿಗೆ ಟಾಸ್ಕ್ ಒಂದನ್ನು ನೀಡಿದರು. ಇದರ ಪ್ರಕಾರ ಅಕ್ಕಿ ಹಾಗೂ ಜೀರಿಗೆ ಸೇರಿಕೊಂಡಿರುತ್ತದೆ. ಇದನ್ನು ಬೇರ್ಪಡಿಸಬೇಕು. ಇದನ್ನು ನೋಡಿ ಮಂಜು ಶಾಕ್ ಆಗಿದ್ದಾರೆ. ‘ಬಿಗ್ ಬಾಸ್ ಯಾಕಿಷ್ಟು ಕಠಿಣ ಶಿಕ್ಷೆ ನೀಡಿದ್ದೀರ’ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು, ‘ನನಗೆ ನಿದ್ದೆಯಲ್ಲಿ, ಹೋಯಿತು. ಇನ್ನೂ ಯಾವಾಗೂ ಬರಲ್ಲ ಎಂದಿದ್ದಾರೆ’ ವೈಷ್ಣವಿ.
ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್ ಬ್ರೋ ಗೌಡ, ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್ ಆಗಿ ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಉಳಿದಂತೆ ಏಳು ಜನರು ನಾಮಿನೇಷನ್ ಲಿಸ್ಟ್ನಲ್ಲಿದ್ದಾರೆ.
ಇದನ್ನೂ ಓದಿ:
ಶಮಂತ್ಗೆ ಬಿಗ್ ಬಾಸ್ ನೀಡಿದ್ರು ಸರ್ಪ್ರೈಸ್ ಗಿಫ್ಟ್; ಭಾವುಕರಾದ ಬ್ರೋ ಗೌಡ